ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Bro ಅಬಲಾ ಸಚ್ಚರಿತ್ರ ರತ್ನ ಮಾಲೆ. ಮಾಡಲು ಪ್ರಯತ್ನ ಮಾಡಲು, ಕರ್ಣನು ನೀನು ಸಮ್ಮತಿಸದಿದ್ದರೆ ನಾನು ಬಲಾತ್ಕಾರಮಾಡುವುದಿಲ್ಲವೆಂದು ಹೇಳಿ ಆಕೆಯ ಉದ್ಯಮವನ್ನು ನಿವಾರಿಸಿದನು. ಕರ್ಣನದಾಸಿಯರು ವಿಮಲೆಯ ಮನಸ್ಸನ್ನು ತಿರಿಗಿಸಲು ಅನೇಕ ವಿಧವಾಗಿ ಬೋಧಿಸುತಲಿದ್ದರು. ಅದರಿಂದೇನೂ ಪ್ರಯೋಜನವು ಉಂಟಾಗಲಿಲ್ಲ. ಆಗ ಕರ್ಣನು ಸುರಪಾಲನ ನೃತ್ಯನಿಗೆ ಲಂಚವನ್ನು ಕೊಟ್ಟು ಆತನು ಸತ್ತು ಹೋದನು ಎಂದು ಹೇಳಿಸಿದನು. ಇದರಿಂದ ಆಕೆಯು ಪತಿಯ ಆಶೆಯನ್ನು ಬಿಟ್ಟು ತನಗೆ ವಶಳಾಗುವಳು ಎಂದು ತಿಳಿದನು, ಆದರೆ ವಿಮಲೆಯು ಆ ವೃತ್ತಾಂತವು ಕಿವಿಗೆ ಬಿದೊಡನೆಯೇ ಸಹಗಮನವನ್ನು ಮಾಡಲು ಸಿದ್ದಳಾದಳು. ಕರ್ಣನು ಆಕೆ ಯನ್ನು ಸಹಗಮನ ಮಾಡಗೊಡದೆ ತನ್ನನ್ನು ಧರ್ಮಶಾಸ್ತ್ರ ಪ್ರಕಾರವಾಗಿ ವಿವಾಹ ಮಾಡಿಕೊಳ್ಳ ಬೇಕು ಎಂದು ನಿರ್ಬಂಧಮಾಡಿದನು. ಆತನ ಸೈನಿಕರು ವಿಮಲೆಯ ಸುಗುಣಗಳನ್ನು ನೋಡಿ ಕರ್ಣನನ್ನು ತಿರಸ್ಕರಿಸಿ, ಆಕೆಯ ಸಹಗಮನಕ್ಕೆ ಸಿದ್ದ ಪಡಿಸಿದರು. ವಿಮಲೆಯು ಅಲ್ಲಿಗೆ ಬಂದ ಸ್ತ್ರೀಯರಿಗೆ ಪಾತಿವ್ರತ್ಯವನ್ನೂ, ಸೈನಿಕರಿಗೆ ನೀತಿಯನ್ನೂ ಬೋಧಿಸಿ ಚಿತಿಯನ್ನೇರಲು ಸಿದ್ದಳಾದಳು. ಆ ಸಮಯದಲ್ಲಿ ಕರ್ಣನು ಸಹ ಪಶ್ಚಾತ್ತಾಪವುಳ್ಳವನಾಗಿ ಆಕೆಯಲ್ಲಿ ಕ್ಷಮಾಪಣೆಯನ್ನು ಬೇಡಿ ಕೊಂಡನು. ವಿಮಲೆಯು, “ ನೀನು ಪರಮೇಶ್ವರನಲ್ಲಿ ಕ್ಷಮೆಯನ್ನು ಬೇಡಿಕೊ. ಪುನಃ ಇಂತಹ ಕಾರ್ಯಗಳನ್ನು ಮಾಡಬೇಡ. ” ಎಂದು ನುಡಿದು ಚಿತೆಯ ಸ್ನೇರಿದಳು. ಅಲ್ಲಿ ಸುರಪಾಲನು ಗ್ರಾಮವನ್ನು ಸವಿಾಪಿಸಿ ಗ್ರಾಮವು ಶತ್ರು ವಶ ವಾಯಿತು ಎಂದು ತಿಳಿದು ಪುನಃ ಅರಣ್ಯಕ್ಕೆ ಬಂದು, ಅಲ್ಲಿ ತನ್ನವರು ಯಾರೂ ಕಾಣದಿರಲು, ಒಬ್ಬ ಕಿರಾತನಿಂದ ವೃತ್ತಾಂತವನ್ನೆಲ್ಲ ತಿಳಿದು ಕೊಂಡು, ಕರ್ಣನ ಬಳಿಯಲ್ಲಿರುವ ತನ್ನ ಪತ್ನಿಯನ್ನು ಬಿಡಿಸಿಕೊಂಡುಬರಲು ಸೋರಟ್ ನಗರಕ್ಕೆ ಹೊರಟನು. ಆ ನಗರವನ್ನು ಸವಿಾಪಿಸಿ ವಿಮಲೆಯನ್ನು ಬಿಡಿಸುವ ಉಪಾಯವನ್ನು ಕಾಣದೆ ಚಿಂತಿಸುತ್ತಿರಲು, ಯಾರೋಒಬ್ಬ ಮನುಷ್ಯನು ವಿಮಲೆಯ ಸಹಗಮನ ವೃತ್ತಾಂತವನ್ನು ತಿಳಿಸಿದನು. ಕೂಡಲೆ ಸುರಪಾಲನು ವೇಷವನ್ನು ಧರಿಸಿಕೊಂಡು ಜನರ ಗುಂಪಿನಲ್ಲಿ ಹೋಗಿ ಚಿತೆಯ ಮೇಲಿದ್ದ ವಿಮಲೆಯನ್ನೆತ್ತಿಕೊಂಡು ಹೋಗಿ ಕುದುರೆಯಮೇಲೆ ಕುಳ್ಳಿರಿಸಿಕೊಂಡು ಅರಣ್ಯ ಮಾರ್ಗದಲ್ಲಿ ಹೊರಟನು. ವಿಮಲೆಯು ಕರ್ಣನೇ ತನ್ನನ್ನು ಎತ್ತಿ ಕೊಂಡು ಹೋಗುತಲಿರುವನು ಎಂದು ತಿಳಿದಳು. ಸ್ವಲ್ಪ ಹೊತ್ತಿಗೆ ಸುರಪಾಲನ ಮಾತುಗಳಿಂದ ತನ್ನ ಪತಿಯ ಮೃತಿಯು ಅನ್ಸತವೆಂದರಿತು, ಆತನೇ ತನ್ನನ್ನು ಬಿಡಿಸಿದನು ಎಂಬುದನ್ನು ತಿಳಿದುಕೊಂಡಳು. ಅನಂತರ ಅವರಿಬ್ಬರೂ ವೇಷ ವನ್ನು ಧರಿಸಿಕೊಂಡು ಮಾರ್ಗದಲ್ಲಿ ಯಾರೂ , ತಮ್ಮನ್ನರಿಯದಂತೆ ಅರಣ್ಯ ವನ್ನು ಸೇರಿ, ರೂಪಸುಂದರಿಯು ಇರುವಸ್ಥಳಕ್ಕೆ ಬಂದರು. ತತ್ತೂರ್ವವೇ