ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮಾವತಿ. ೨೧ ರೂಪಸುಂದರಿಯು ಪುರುಷಶಿಶುವನ್ನು ಪ್ರಸವಿಸಿದ್ದಳು. ಆ ಬಾಲಕನಿಗೆ ಕಿರಾತರು ವನರಾಜ ಎಂದು ಹೆಸರಿಟ್ಟರು. ಪುತ್ರಸಹಿತಳಾದ ಅತ್ತಿಗೆಯನ್ನು ನೋಡಿ ವಿಮಲೆಯು ಸಂತುಷ್ಟಳಾದಳು. ಅವರೆಲ್ಲರೂ ಅರಣ್ಯದಲ್ಲಿಯೇ ಗುಪ್ತವಾಗಿ ವಾಸಮಾಡಿಕೊಂಡಿದ್ದರು. ಅರಣ್ಯ ಜಲವು ವಿಮಲೆಗೆ ಸರಿಬೀಳದೆ ಆಕೆಯು ದಿನೇದಿನೇ ಕೃಶಳಾಗಿ ಕೆಲವು ದಿವಸಗಳಿಗೆ ಮೃತಳಾದಳು. - - - - ಪಾವತಿ.


:೦:--

ಸಾಭಾರ್ಯಾಯಾ ರುಚಿರ್ದಕ್ಷಾ ಸಾಭಾರ್ಯಾಯಾ ಪತಿವ್ರತಾ | ಸಾಭಾರ್ಯಾಯಾ ಪತಿಪ್ರೀತಾ ಸಾಭಾರ್ಯಾ ಸತ್ಯವಾದಿನೀ |! * ಪದ್ಮಾವತಿಯು ಜಗನ್ನಾಥ (ಪುರಿ) ನಿವಾಸಸ್ಥನಾದ ಅಗ್ನಿಹೋತ್ರ ಎಂಬ ವಿಪ್ರನ ಮಗಳು, ಈಕೆಯ ಪತಿಯು ಮಹಾ ಕವಿಯಾದ ಜಯದೇವನು. ಅಗ್ನಿಹೋತ್ರಿಯು ತನ್ನ ಪುತ್ರಿಯಾದ ಪದ್ಮಾವತಿಯು ಯುಕ್ತವಯಸ್ಕ ಳಾಗಲು, ಆಕೆಗೆ ತಕ್ಕ ವರನನ್ನು ವಿಚಾರಿಸುತಲಿದ್ದನು. ಬಿಲ್ವಾ ಎಂಬ ಗ್ರಾಮದಲ್ಲಿ ನಾರಾಯಣಭಟ್ಟ ಎಂಬ ಒಬ್ಬ ಬ್ರಾಹ್ಮಣನು ಇರುವನೆಂತಲೂ, ಆತನ ಪುತ್ರ ನಾದ ಜಯದೇವನು ಸಕಲಸದ್ದು ಣ ಪರಿಪೂರ್ಣನೆಂತಲೂ ಅಗ್ನಿಹೋತ್ರಿಗೆ ತಿಳಿಯಬರಲು, ವರನು ಬಡವನು ಎಂದು ಶಂಕಿಸದೆ, ತನ್ನ ಪುತ್ರಿಯನ್ನು ಆತನಿಗೆ ಕೊಟ್ಟು ವಿವಾಹಮಾಡಿದನು. ಪದ್ಮಾವತಿಯು ಅತ್ತೆಯ ಮನೆಗೆ ಹೋಗಿ ಪತಿಭಕ್ತಿಯುಳ್ಳವಳಾಗಿ, ತಮಗೆ ಇದ್ದುದರಲ್ಲಿಯೇ ಸಂಸಾರವನ್ನು ಗೋಪ್ಯವಾಗಿ ನಿರ್ವಹಿಸುತಲಿದ್ದಳು. ಗುಣವತಿಯಾದ ಸತಿಯನ್ನು ಪಡೆದು ದರಿಂದ ಜಯದೇವನಿಗೆ ಸಂಸಾರವು ಅಸಾರವಾಗಿ ತೋರದೆ ಸಸಾರವಾಗಿಯೇ ತೋರಿತು. ಜಯದೇವನು ಪೀಯೂಷ ವರ್ಷನಾದ ಕವಿ ಎಂದು ಪ್ರಸಿದ್ಧಿಯನ್ನು ಹೊಂದಿದನು. ಆತನು ಸಂಗೀತಸಾಹಿತ್ಯಗಳಲ್ಲಿ ಅಸಮಾನ ಪಾಂಡಿತ್ಯವನ್ನು ಪಡೆದು “ ಪ್ರಸನ್ನ ರಾಘವ' ಎಂಬ ನಾಟಕವನ್ನೂ, “ ಗೀತಗೋವಿಂದ” ಎಂಬ ಸಂಗೀತ ಗ್ರಂಥವನ್ನೂ ರಚಿಸಿದನು. --

  • ಪವಿತ್ರಳೂ ಚಾತುರ್ಯವತಿಯ ಆಗಿ, ಪತಿವ್ರತೆಯಾಗಿ, ಪತಿಯ ಅನುಗ್ರಹ ವನ್ನು ಹೊ೦ದಿ, ಸತ್ಯವನ್ನು ನುಡಿಯುವವಳೇ ಸದ್ಘಾರ್ಯೆ ಎನಿಸುವಳು.