ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮಾವತಿ. ೨೯4 ಅಲ್ಲಿಗೆ ಬಂದು, ರಾಜಪತ್ನಿಯ ಸಮಿಾಪ ಬಂಧುವು ಒಬ್ಬನು ಮೃತನಾದ ನೆಂತಲೂ, ಆತನ ಪತ್ನಿಯು ಸಹಗಮನಮಾಡಲು ಸಿದ್ಧಳಾಗಿರುವಳೆಂತಲೂ, ತಿಳಿಸಿದನು. ಆ ಸಂಗತಿಯನ್ನು ಕೇಳಿ ಅಲ್ಲಿನ ಸ್ತ್ರೀಯರೆಲ್ಲರೂ ಆಶ್ಚರ್ಯಯುತ ರಾದರು. ಪದ್ಮಾವತಿಯ ಮುಖದಲ್ಲಿ ಮಾತ್ರ ಆಶ್ಚರ್ಯಭಾವವು ಇಲ್ಲದೇ ಇರುವು ದನ್ನು ಕಂಡು ರಾಜಪತ್ನಿಯು, “ ಅಮ್ಮಾ! ಆ ಮಹಾಪತಿವ್ರತೆಯು ಸಕಲ ಸುಖಗಳನ್ನೂ ತ್ಯಜಿಸಿ ಪತಿಯೊಡನೆ ಅನುಮೃತಳಾಗುವಳು ಎಂಬ ವಾರ್ತೆಯು ನಿಮಗೆ ಆಶ್ಚರ್ಯವನ್ನು ಉಂಟುಮಾಡಲಿಲ್ಲ ವೇ ? ದಯವಿಟ್ಟು ನಿಮ್ಮ ಮನೋ ಗತವನ್ನು ತಿಳಿಸಿರಿ. ” ಎಂದು ಕೇಳಿಕೊಂಡಳು. ಆಗ ಪದ್ಮಾವತಿಯು ಆಕೆ ಯೊಡನೆ ಇಂತೆಂದಳು, “ ಪತಿಯು ಮೃತನಾದೊಡನೆಯೇ ಪ್ರೇಮವುಳ್ಳ ಪತ್ನಿ ಯ ಪ್ರಾಣವು ಶರೀರದಿಂದ ಹೊರಡಬೇಕು. ಇದೇ ನಿಜವಾದ ಪ್ರೇಮ ಲಕ್ಷಣ. ಈ ವಿಧವಾಗಿ ಕೂಡಲೆ ಪ್ರಾಣವನ್ನು ಬಿಡದೆ, ಅನಂತರ ಪ್ರಾಣತ್ಯಾಗ ಮಾಡುವುದು ಆತ್ಮಘಾತವೇ ಹೊರತು ಪತ್ರೀಧರ್ಮವಲ್ಲ. " ಪದ್ಮಾವತಿಯ ಶುದ್ಧಾಂತಃಕರಣದಿಂದ ಹೊರಟ ಈ ಮಾತುಗಳು ರಾಜ ಪತ್ನಿಯ ಕಿವಿಗೆ ಬಾಣದಂತೆ ತೋರಿತು. ಆಕೆಯು, ಪದ್ಮಾವತಿಯು ತಾನೇ ನಿಜವಾದ ಪತಿವ್ರತೆ ಎಂದು ತೋರಿಕೊಳ್ಳುವ ಸಲುವಾಗಿ ಈ ಜಂಭದ ಮಾತು ಗಳನ್ನು ನುಡಿದಳು ಎಂದೆಣಿಸಿ, ಪದ್ಮಾವತಿಯನ್ನು ಪರೀಕ್ಷಿಸಿ ಭಂಗಪಡಿಸಬೇಕು ಎಂದು ನಿಶ್ಚಯಿಸಿಕೊಂಡಳು. ಆಮೇಲೆ ಕೆಲವು ದಿವಸಗಳಿಗೆ ಜಯದೇವನು ರಾಜನೊಡನೆ ಅರಣ್ಯಕ್ಕೆ ಹೋದನು. ಆಗ ರಾಜಪತ್ನಿ ಯು ಮಂತ್ರಿಯನ್ನು ಕರೆಯಿಸಿ ತನ್ನ ದುರಾ ಲೋಚನೆಗಳನ್ನು ಆತನಿಗೆ ತಿಳಿಸಿ, ತದನುಸಾರವಾಗಿ ಕಾರ್ಯವನ್ನು ನಿರ್ವ ಹಿಸಲು ಆತನನ್ನು ನಿಯಮಿಸಿದಳು. ಆ ದಿವಸವೂ ರಾಣಿಯು ಯಥಾಪ್ರಕಾರ ವಾಗಿ ಪದ್ಮಾವತಿಯ ಗೃಹಕ್ಕೆ ಹೋಗಿ, ಆಕೆಯೊಡನೆ ಪ್ರಸಂಗಿಸುತಲಿದ್ದಳು. ಒಂದೆರಡು ಗಳಿಗೆಗಳು ಕಳೆಯುವದರೊಳಗೆ ಒಬ್ಬ ಪರಿಚಾರಿಕೆಯು ದೀನಮುಖ ದೊಡನೆ ಬಂದು, “ ಅಡವಿಯಲ್ಲಿ ಆಕಸ್ಮಿಕವಾಗಿ ಜಯದೇವನು ಹುಲಿಯಬಾಯಿಗೆ ತುತ್ತಾದನು ಎಂದು ಗದ್ದ ದಸ್ವರದೊಡನೆ ನುಡಿದಳು ! ವಜ್ರಘಾತದಂತಹ ಆ ಮಾತನ್ನು ಕೇಳಿದೊಡನೆಯೇ ಪದ್ಮಾವತಿಯು ನಿಚ್ಚೇಷ್ಟಿತಳಾಗಿ ಸ್ವಲ್ಪ ಹೊತ್ತಿಗೆ ಎಚ್ಚತ್ತು ಪತಿಯನಾಮವನ್ನು ಸ್ಮರಿಸುತ್ತ ಮರಣತುಲ್ಯವಾದ ಮೂರ್ಲೆಯನ್ನು ಹೊಂದಿದಳು, ಆ ಸಮಯದಲ್ಲಿ ಅಲ್ಲಿದ್ದವರೆಲ್ಲರೂ ಆಕೆಯು ಸತ್ಯವಾಗಿ ಮೃತ ಛಾದಳು ಎಂದು ತಿಳಿದರು. ಪದ್ಮಾವತಿಯ ಪಾತಿವ್ರತ್ಯವನ್ನು ಪರೀಕ್ಷಿಸಲು ಈ ತಂತ್ರವನ್ನು ಮಾಡಿದ