ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೪ ಅಬಲಾ ಸಚ್ಚರಿತ್ರ ರತ್ನ ಮಾಲೆ. ರಾಣಿಯು ಆಕೆಯ ಸ್ಥಿತಿಯನ್ನು ನೋಡಿ ಏನೂತೋರದೆ ದುಃಖಿಸುತಲಿದ್ದಳು. ಮೊದಲು ಈ ಕಾರ್ಯದಲ್ಲಿ ರಾಜಪತ್ನಿಗೆ ಸಹಾಯಕರಾದವರೆಲ್ಲರೂ, ಈಗ ಆಕೆ ಯನ್ನು ನಿಂದಿಸತೊಡಗಿದರು. ರಾಣಿಯು ಸಪರಿವಾರವಾಗಿ ಶೋಕಿಸುತ್ತಿರಲು, ರಾಜನೂ ಜಯದೇವನೂ ಪುರವನ್ನು ಪ್ರವೇಶಿಸಿ, ಮನೆಗೆ ಬಂದು ಪದ್ಮಾ ವತಿಯ ಮರಣವೃತ್ತಾಂತವನ್ನು ಕೇಳಿ ಆಕೆಯನ್ನು ಸವಿಾಪಿಸಿದರು. ಜಯ ದೇವನು ಪತ್ನಿಯನ್ನು ನೋಡಿ ದುಃಖವನ್ನು ತಡೆಯಲಾರದೆ ಸ್ವಲ್ಪ ಹೊತ್ತು ದುಃಖಿ ಸಿದನು. ಮೊದಲಿನ ದುಃಖವು ಸ್ವಲ್ಪ ಕಡಮೆಯಾದಮೇಲೆ ಜಯದೇವನು ಸ್ವಲ್ಪ ಧೈರ್ಯವನ್ನು ವಹಿಸಿ, ತನ್ನ ಸಂಗೀತವು ಪದ್ಮಾವತಿಗೆ ಬಹು ಪ್ರಿಯವಾದು ದಾದಕಾರಣ, ತನ್ನ ವೀಣೆಯನ್ನು ತರಿಸಿ, ತಾನು ರಚಿಸಿದ ಗೀತಗೋವಿಂದವನ್ನು ಬಹು ಮನೋಹರವಾಗಿ ಹಾಡಲು ಪ್ರಾರಂಭಿಸಿದನು. ಸಂಗೀತವನ್ನು ಪ್ರಾರಂಭ ಸಿದ ಸ್ವಲ್ಪ ಹೊತ್ತಿಗೆ ಆಕೆಯ ಮುಖದಲ್ಲಿ ಸ್ವಲ್ಪ ಕಳೆಯು ಉಂಟಾಯಿತು. ಇಪ್ಪತೈದನೆಯ ಅಷ್ಟಪದಿಯು ಮುಗಿದ ಕೂಡಲೆ ಆಕೆಯು ಎಚ್ಚತ್ತು ಕಣ್ಣು ತೆರೆದು ಜಯದೇವನನ್ನು ನೋಡಿ ಅತಿಹರ್ಷದೊಡನೆ ಎದ್ದು ಪತಿಯ ಪಾದಗಳಿಗೆ ನಮಸ್ಕರಿಸಿದಳು. - ರಾಜನು ಈ ಅನರ್ಥಕ್ಕೆಲ್ಲ ತನ್ನ ಪತ್ನಿಯೇ ಕಾರಣವಾದುದರಿಂದ ಆಕೆಯನ್ನು ತ್ಯಜಿಸಲು ಎಣಿಸಿದನು. ದಯಾಮಯಳಾದ ಪದ್ಮಾವತಿಯು ರಾಜನನ್ನು ಸಮಾಧಾನಗೊಳಿಸಿ, ಆ ದಂಪತಿಗಳು ಸಖ್ಯವಾಗಿರುವಂತೆ ಮಾಡಿ ದಳು. ಅನಂತರ ಜಯದೇವ ಪದ್ಮಾವತಿಯರು ವಾರಣಾಸಿ ನಗರಕ್ಕೆ ಹೋಗಿ ಅಲ್ಲಿ ಪುರುಷರಿಗೆ ಭಕ್ತಿಯನ್ನೂ, ಸ್ತ್ರೀಯರಿಗೆ ಪಾತಿವ್ರತ್ಯವನ್ನೂ ಬೋಧಿಸುತ್ತ ತಮ್ಮ ಪ್ರವರ್ತನೆಯಿಂದ ಅವರಿಗೆ ಸನ್ಮಾರ್ಗವನ್ನು ತೋರಿಸುತ್ತ ಕೆಲವುಕಾಲ ಅಲ್ಲಿದ್ದು ಅನಂತರ ತಮ್ಮ ಗ್ರಾಮಕ್ಕೆ ಹೋಗಿ ಅಲ್ಲಿಯೇ ಮೃತರಾದರು. ಪದ್ಮಾವತಿಯು ರಾಜಪತ್ನಿಗೆ ಉಪದೇಶಿಸಿದ ಒಂದು ಉಪನ್ಯಾಸವು ಆಂಧ್ರಮಹಾಭಕ್ತ ವಿಜಯದಲ್ಲಿದೆ. ಅದನ್ನು ಕೆಳಗೆ ಬರೆದಿರುವೆನು. “ ಅಮಾ! ಲೋಕದಲ್ಲಿ ಸತಿಗಳಿಗೆ ಮುಖ್ಯವಾಗಿ ಬೇಕಾದ ಧರ್ಮವು ಒಂದಿರುವುದು, ಪತಿ ಹೊರತು ಬೇರೆಗತಿಯಾಗಲಿ, ಪತಿ ಹೊರತು ಬೇರೆ ಬಂಧು ವಾಗಲಿ, ಪತಿ ಹೊರತು ಬೇರೆ ದೈವವಾಗಲಿ, ಪತಿ ಹೊರತು ಬೇರೆ ಸಂಪ ತ್ತಾಗಲಿ, ಪತಿಸೇವೆಗಿಂತಲೂ ಉತ್ಕೃಷ್ಟವಾದ ಧರ್ಮವಾಗಲಿ ಇಲ್ಲ ಎಂತಲೂ, ಪಾತಿವ್ರತ್ಯಕ್ಕೆ ಎಂದಿಗೂ ಭಂಗ ಉಂಟಾಗದಂತೆ ಕಾಪಾಡಿಕೊಳ್ಳುವುದೇ ಬ್ರಹ್ಮ ಜ್ಞಾನವೆಂತಲೂ, ಅನವರತವು ಪತಿನಾಮವನ್ನು ಸ್ಮರಿಸುತಲಿರುವುದೇ ಬ್ರಹ್ಮ ಧ್ಯಾನವೆಂತಲೂ, ಪತಿಯನ್ನು ಸರ್ವದಾ ಎಡಬಿಡದಿರುವುದೇ ಬ್ರಹ್ಮಾನಂದ