ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈಸೂರು ಮಹಾರಾಣಿ ಲಕ್ಷ್ಮಮ್ಮಣ್ಣ. ಟಿಪ್ಪು ಸುಲ್ತಾನನು ಸರ್ವಾಧಿಕಾರಿಯಾದನು. ಹೀಗೆ ತಮ್ಮ ಪ್ರಯತ್ನಗಳಿಗೆ ನಡುವೆ ವಿಘ್ನಗಳುಂಟಾದರೂ ಲಕ್ಷ್ಮಮ್ಮಣ್ಣಿಯು ಪೂರ್ವ ಪ್ರಯತ್ನವನ್ನು ಬಿಡದೆ, ಒಳ ಗೊಳಗೆಯೇ ಕಂಪೆನಿಯವರೊಡನೆ ಕಾಗದಪತ್ರಗಳನ್ನು ನಡೆಸುತ್ತ ಟೀಪುವಿನ ವಿನಾಶಪ್ರಯತ್ನವನ್ನು ಗುಪ್ತವಾಗಿ ಮಾಡುತ್ತಲೇ ಇದ್ದಳು. ಆಗ ಇಂಗ್ಲೀಷರು ಟೀಪುವು ಮೈಸೂರು ಹುಲಿಯೆಂದೂ, ಇಂತಹ ಶೂರನನ್ನು ಹೇಗೆ ಜಯಿಸುವು ದೆಂದೂ ಸಂಶಯಪಡುತ್ತಲಿದ್ದರು. ಆಗಲೂ, ವೃದ್ದೆಯಾದ ಲಕ್ಷ್ಮಮ್ಮಣ್ಣಿಯು ಟೀಪುವನ್ನು ನಾಶಮಾಡಿ ಮೈಸೂರನ್ನು ಪುನಃ ಸಂಪಾದಿಸುವೆನೆಂಬ ಧೈರ್ಯ ವನ್ನೂ, ಇಚ್ಛೆಯನ್ನೂ ಬಿಡದೆ ಇದ್ದಳು, ಸನ್ ೧೭೯೦ ನೆಯ ಇಸವಿಯಲ್ಲಿ ರಾಣಿಯು ಜನರಲ್ ಮೆಡೋಸ್ ದೊರೆಗೆ ಬರೆದ ಪತ್ರಿಕೆಗಳು ಅತ್ಯುತ್ಸಾಹ ಪೂರ್ಣಗಳಾಗಿವೆ. ಆದರೆ ಅದಕ್ಕೆ ಆ ಸೇನಾಪತಿಯು ಬರೆದ ಪ್ರತ್ಯುತ್ತರಗಳು ಮಾತ್ರ ಅಷ್ಟು ಉತ್ಸಾಹಪ್ರದಗಳಾಗಿಲ್ಲ. ಮೈಸೂರು ಚರಿತ್ರೆಯನ್ನು ಸಂಪೂರ್ಣ ವಾಗಿ ತಿಳಿಯಲಪೇಕ್ಷಿಸುವರು ಈ ಉತ್ತರಪ್ರತ್ಯುತ್ತರಗಳನ್ನು ಅವಶ್ಯವಾಗಿ ನೋಡ ಬೇಕು, ಜನರಲ್ ಮೇಡೋಸ್ ದೊರೆಯು ೧೭೯೦ ನೆಯ ಇಸವಿಯಲ್ಲಿ ರಾಣಿ ಯವರಿಗೆ ಬರೆದ ಲೇಖನದಲ್ಲಿ, “ ಟೀಪುವು ಎಂದಿಗೆ ನಾಶವಾಗುವನೋ, ದೇಶವು ಎಂದಿಗೆ ಶಾಂತಿಯನ್ನು ಪಡೆವುದೋ ಪರಮೇಶ್ವರನಿಗೊಬ್ಬನಿಗೇ ತಿಳಿಯಬೇಕು. (ಅಂದರೆ ಈ ಕಾರ್ಯವು ಈಗ ನೆರವೇರುವಂತೆ ತೋರುವುದಿಲ್ಲ.) ಜಯ ವುಂಟಾಗುವುದು ಪರಮೇಶ್ವರಾಧೀನವು, ನಮಗೆ ಪರಮೇಶ್ವರನು ಯಶಸ್ಸಾ ಮರ್ಥ್ಯಗಳನ್ನು ಕೊಟ್ಟರೆ ನಾವು ಅತ್ಯಂತಾನಂದದೊಡನೆ ಮೈಸೂರು ರಾಜ್ಯವನ್ನು ತಮಗೆ ಸಮರ್ಪಿಸಬಲ್ಲೆವು. ರಾಜ್ಯವನ್ನು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ಕುರಿತು ನಾವೀಗ ಏನೂ ನುಡಿಯಲಾರೆವು, ಮರಾಟೆಯವರೂ ನಿಜಾಮನೂ ನಮಗೆ ಮಿತ್ರರಾದ್ದರಿಂದ ಅವರ ಆಲೋಚನೆಯಂತೆ ನಡೆಯುವುದು, ಸಂಪೂರ್ಣ ಯುದ್ಧವ್ಯಯಗಳನ್ನೂ ಗೆದ್ದ ಮೇಲೆ ಸೈನಿಕರಿಗೆ ಬಹುಮಾನಗಳನ್ನೂ ಕೊಡುವೆ ವೆಂದು ನೀವು ಬರೆದಿರುವಿರಿ. ಹಾಗೆ ಮಾಡುವುದು ಉತ್ತಮವಾದ ಕಾರ್ಯವೇ ಸರಿ,” ಎಂದು ಬರೆದರು. ಸಂಪೂರ್ಣ ಸಹಾಯವನ್ನು ಮಾಡುವರೆಂಬ ಭರವಸೆ ಯಿಂದ ಮಿತ್ರರನ್ನಾಗಿ ಮಾಡಿಕೊಂಡ ಇಂಗ್ಲೀಷರಿಂದ, ಇಂತಹ ಅಲ್ಪ ಸಮಾಧಾನ ವನ್ನು ಕೊಡುವ ಪ್ರತ್ಯುತ್ತರಗಳನ್ನು ಪಡೆದು ರಾಣಿಯು ಎಷ್ಟು ಮನೋವ್ಯಥೆ ಗೊಳಗಾಗಿರಬಹುದೆಂಬುದನ್ನು ಪಾಠಕರೇ ಯೋಚಿಸಬಲ್ಲರು, ಮಹಾರಾಣಿ ಲಕ್ಷ್ಮಮ್ಮಣ್ಣಿಯಲ್ಲಿರುವ ಸಂತತ ಪ್ರಯತ್ನಚ್ಛೆಯೂ, “ಸತ್ಯಮೇವ ಜಯತೇ " ಎಂಬ ವಾಕ್ಯದಲ್ಲಿ ಆಕೆಗಿರುವ ದೃಢವಿಶ್ವಾಸವೂ, ಇನ್ನೂ ಅನೇಕ ಸದ್ದು ಣಗಳೂ ಆಕೆಯು ಸಂಕಟಸಮಯದಲ್ಲಿ ತಿರುಮಲರಾಯನಿಗೂ, ಲಾರ್ಡ್ ಮಾರ್ನಿಂಗ್ ಟನ್ ದೊರೆಗೂ ಬರೆದ ಕಾಗದಗಳಿಂದ ಸ್ಪಷ್ಟವಾಗುತ್ತದೆ. ಅವು ಮನವನ್ನು ಕರಗಿಸುವವುಗಳಾಗಿಯೂ, ಕರುಣಾರಸಪೂರಿತಗಳಾಗಿಯೂ ಇರುವುದರಿಂದ ಅವು.