As ಅಬಲಾ ಸಚ್ಚರಿತ್ರ ರತ್ನ ಮಾಲೆ. ಪಾತಿವ್ರತ್ಯವನ್ನು ಕೆಡಿಸಿಕೊಂಡುದುದರಿಂದಲ್ಲವೇ ಪಾಷಾಣವಾಗಿ ಬಿದ್ದಿದ್ದು ಚಿರ ಕಾಲ ದುಃಖವನ್ನು ಅನುಭವಿಸಬೇಕಾಯಿತು, ಈಗಲೂ ವಿವಾಹಕಾಲದಲ್ಲಿ ಕಲ್ಲು ಎಂಬ ನೆಪದಿಂದ ಅಹಲ್ಲೆಯನ್ನು ಕಸ್ಯೆಯಿಂದ ತುಳಿಸುವುದೂ, ಅರುಂಧತಿಯನ್ನು ತೋರಿಸಿ ಪೂಜೆಮಾಡಿಸುವುದೂ ಆಚಾರವಾಗಿದೆ. ದೇವತಾಚಾರ್ಯನ ಪತ್ನಿ ಯಾದ ತಾರೆಯು ಚಂದ್ರನ ಸಂಪರ್ಕದಿಂದ ಶಾಶ್ವತವಾದ ಅಪಕೀರ್ತಿಯನ್ನು ಅನುಭವಿಸುತಲಿರುವಳು. ಸಖಿಯರೊಡನೆ ಜಲಕ್ರೀಡೆಯನ್ನು ಮಾಡುತಲಿದ್ದ ಚಿತ್ರರಥನನ್ನು ನೋಡಿ ಭ್ರಮಿಸಿದುದರಿಂದಲ್ಲವೆ ರೇಣುಕೆಯು ಮರಳಿನಲ್ಲಿ ಮಡಿಕೆ ಯನ್ನು ಮಾಡಲಾರದೆ ಪತಿಯ ಆಗ್ರಹಕ್ಕೆ ಪಾತ್ರಳಾಗಿ ಪುತ್ರನಿಂದ ಕಡಿಯ ಲ್ಪಟ್ಟಳು ? ಬ್ರೌಪದಿಯು ಕರ್ಣನಮೇಲೆ ಕಣ್ಣಿಟ್ಟು ದುದರಿಂದ ತಪೋಧನನಿಗೆ ಉಪಯೋಗವಾದ ಫಲವನ್ನು ವೃಕ್ಷಕ್ಕೆ ಏರಿಸಲಾರದೆ ನಾಚಿಕೆಗೊಳ್ಳಬೇಕಾಯಿತು. ಪಾತಿವ್ರತ್ಯವನ್ನು ಕಾಪಾಡಿಕೊಳ್ಳದೆ ಉಪವಾಸಾದಿ ವ್ರತಗಳನ್ನು ಮಾಡುವುದು ನಿಷ್ಟ್ರಯೋಜನವಾದುದು. ಮೃತರಾದವರನ್ನು ಬದುಕಿಸಬೇಕಾದರೂ, ಭೂತಲ ವನ್ನು ತಲೆಕೆಳಗೆ ಮಾಡಬೇಕಾದರೂ ಪತಿವ್ರತೆಯರಿಗೆ ಅಸಾಧ್ಯವಲ್ಲ. ಸರ್ವೋ ತಷ್ಟವಾದ ಬ್ರಹ್ಮನಿಷ್ಠೆಯು ಪುರುಷರಿಗೆ ಚಿತ್ತಶುದ್ದಿಯನ್ನುಂಟುಮಾಡಿ, ಪೂಜ್ಯ ವಾದ ಮೋಕ್ಷಸಾಮ್ರಾಜ್ಯವನ್ನು ಅನುಗ್ರಹಿಸುವಂತೆ ಪಾತಿವ್ರತ್ಯವು ಸತಿಯರಿಗೆ ಪರಮಪದವಿಯನ್ನೀಯುವುದು, ಏಕಪತ್ನಿವ್ರತರಾದ ಪುರುಷರಿಗೆ ಅನ್ಯ ಸಹವಾಸವು ವಿಸರ್ಜನೀಯವಾದಂತೆ ಪತಿವ್ರತೆಯರಿಗೆ ಅನ್ಯ ಪುರುಷ ಸಹವಾಸವು ಸರ್ವದಾ ವರ್ಜನೀಯವಾದುದು. ಏಕಾಂತದಲ್ಲಿ ಏಕಾಸನದಲ್ಲಿ ಕುಲ ಭಾಮಿನಿಯು ಪುತ್ರನೊಡನೆಯಾದರೂ ಕುಳಿತುಕೊಳ್ಳಬಾರದು, ಕೈಹಿಡಿದ ವನು ಧನಿಕನಾದರೂ, ನಿರ್ಧನಿಕನಾದರೂ, ರೂಪವಂತನಾದರೂ, ರೂಪಹೀನ ನಾದರೂ, ವಿವೇಕಿಯಾದರೂ, ವಿವೇಕಹೀನನಾದರೂ, ರೋಗಿಯಾದರೂ, ನಿರೋಗಿಯಾದರೂ ಆತನಲ್ಲಿ ಕಪಟವಿಲ್ಲದೆ ನಡೆದುಕೊಳ್ಳಬೇಕಾದುದು ಪತ್ನಿಯ ಧರ್ಮವು, ಪತಿಯು ಯಾವ ಪದಾರ್ಥವನ್ನು ಕೊಟ್ಟರೂ ತೃಪ್ತಿಯನ್ನು ಹೊಂದಬೇಕಲ್ಲದೆ ಅತೃಪ್ತಿಯನ್ನು ತೋರಿಸಬಾರದು, ಪತಿಯು ತಂದುಕೊಟ್ಟ ವಸ್ತುಗಳನ್ನು ಭದ್ರವಾಗಿಟ್ಟು ಆತನು ಕೇಳಿದಾಗ ನಿಷ್ಕಪಟವಾಗಿ ಕೊಡಬೇಕು. ಬಲಿಭಿಕ್ಷೆಯನ್ನು ತಪ್ಪದೆ ಇಡುತ್ತಿರಬೇಕು, ದೇವಪಿತೃ ಪೂಜಾಕಾಲಗಳಲ್ಲಿ ತನ್ನ ಪತಿಗೆ ಅನವರತವು ಶುಭ ಉಂಟಾಗುವಂತೆ ಪ್ರಾರ್ಥಿಸಬೇಕು, ಪತಿಯ ಅನುಮತಿಯಿಲ್ಲದೆ ದೇವತೆಗಳನ್ನಾಗಲಿ, ಪಿತೃಗಳನ್ನಾಗಲಿ ಪೂಜಿಸಬಾರದು. ಹಾಗೆ ಪೂಜಿಸಿದರೆ ಸತಿಯು ಸದ್ದತಿಯನ್ನು ಹೊಂದಲಾರಳು, ಈ ವಿಷಯದಲ್ಲಿ ಪಾರ್ವತಿದೇವಿಯು ನುಡಿದ ಒಂದು ಇತಿಹಾಸವನ್ನು ನುಡಿಯುವೆನು, ಪೂರ್ವ ದಲ್ಲಿ ಒಬ್ಬ ಬ್ರಾಹ್ಮಣನಿಗೆ ಇಬ್ಬರು ಪತ್ನಿಯರಿದ್ದರು. ಅವರಲ್ಲಿ ಒಬ್ಬಳು ಪತಿಯ ಅನುಮತಿಯಂತೆ ವಿನಯದಿಂದ ನಡೆದುಕೊಳ್ಳುತಲಿದ್ದಳು, ಇನ್ನೊಬ್ಬಳು ತನ್ನ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೨೧
ಗೋಚರ