ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಖನಾಬಾಯಿಕಿ ಬೇ. ೩೦೩ ೧೮೪೪ ನೆಯ ಇಸವಿಯಲ್ಲಿ ಖಂಡೇರಾವ್ ಹೋಳಕರನು ಮೃತನಾದನು. ಆಗ ರಾಜ್ಯಕ್ಕೆ ವಾರಸದಾರರು ಯಾರೂ ಇಲ್ಲದುದರಿಂದ ಎಲ್ಲರಿಗೂ ಬಹುಚಿಂತೆ ಯುಂಟಾಯಿತು. ಆ ಸಮಯದಲ್ಲಿ ರೆಸಿಡೆಂಟ್ ದೊರೆಯೂ, ರಖಮಾ ಬಾಯಿಯೂ ರಾಜ್ಯಾಧಿಪತಿಯನ್ನು ಏರ್ಪಾಟುಮಾಡಲು ಬಹುಕಷ್ಟಗಳನ್ನು ಅನುಭ ವಿಸಿದರು. ಏಪ್ರಿಲ್ ತಿಂಗಳಿನ ೪ ನೆಯ ತಾರೀಖಿನಲ್ಲಿ ವೇಡ್ (ರೆಸಿಡೆಂಟನ ಹೆಸರು) ದೊರೆಯನ್ನು ಬೇರೊಂದು ಸ್ಥಳಕ್ಕೆ ವರ್ಗಮಾಡಿ, ಆ ಸ್ಥಳಕ್ಕೆ ಹ್ಯಾಮಿರ್ಲ್ಟದೊರೆ ಯನ್ನು ನಿಯಮಿಸಿದರು. ಆಗ ವೇಡ್‌ ದೊರೆಯು, ಹ್ಯಾಮಿರ್ಲ್ಟದೊರೆಯನ್ನು ರಖನಾಬಾಯಿಯ ಬಳಿಗೆ ಕರೆತಂದು ಈಕೆಗೆ ನೀವು ಸಹಾಯಮಾಡಬೇಕೆಂದು ತಿಳಿಸಿದನು. ರಖಮಾಬಾಯಿಯು ಸಂಸ್ಥಾನದ ವಿಷಯವಾಗಿ ತನಗಿರುವ ಚಿಂತೆ ಯನ್ನೆಲ್ಲ ತಿಳಿಸಿದಳು. ಹ್ಯಾಮಿರ್ಲ್ಟದೊರೆಯು ರಾಜ್ಯಕ್ಕೆ ವಾರಸನನ್ನು ಏರ್ಪಾಟು ಮಾಡುವುದರಲ್ಲಿ ರಖನಾಬಾಯಿಗೆ ಸಹಾಯಮಾಡಲೊಪ್ಪಿಕೊಂಡನು. ಭಾವುಕರ್ ಯವರ ಇಬ್ಬರು ಪುತ್ರರಲ್ಲಿ ಯಾವ ಬಾಲಕನನ್ನು ದತ್ತನಾಗಿ ಸ್ವೀಕರಿಸಬೇಕೆಂಬ ಯೋಚನೆಯು ಕೆಲವು ದಿವಸಗಳವರೆಗು ನಡೆಯುತಲಿತ್ತು. ರಖಮಾಬಾಯಿಯು ಅವರಲ್ಲಿ ಚಿಕ್ಕವನನ್ನು ಮೆಚ್ಚಿ ಆ ಬಾಲಕನೇ ರಾಜ್ಯಾಧಿ ಪತಿಯಾಗಲು ಅರ್ಹನೆಂದು ತಿಳಿಸಿದಳು. ಆಕೆಯ ಅಭೀಷ್ಟದಂತೆಯೇ ಆ ಬಾಲಕನನ್ನು ದತ್ತ ಪುತ್ರನಾಗಿ ಸ್ವೀಕರಿಸಿದರು. ಈ ಬಾಲಕನೇ ಅನಂತರ ತುಕೋಜೀ ಮಹಾರಾಜನೆಂದು ಪ್ರಸಿದ್ದಿ ಯನ್ನು ಪಡೆದನು. ಈತನು ಯಾವ ಜೀವವೂ ರಖಮಾಬಾಯಿಯ ಉಪಕಾರವನ್ನು ಮರೆಯದೆ ಆಕೆಯನ್ನು, ಆಕೆಯ ವಂಶಸ್ಥರನ್ನು ಮನ್ನಣೆಯಿಂದ ಕಾಣುತಲಿದ್ದನು. ಕುಮಾರನು ದೊಡ್ಡವನಾದಮೇಲೆ ವ್ಯವಹಾರಗಳನ್ನಾತನಿಗೆ ಒಪ್ಪಿಸಿ, ರಖಮಾಬಾಯಿಯು ದಾನಧರ್ಮಗಳಲ್ಲಿ ಮನಸ್ಸಿಟ್ಟು ಕಾಲವನ್ನು ಕಳೆಯುತ ಲಿದ್ದಳು. ಆಕೆಯು ಹರಿದ್ವಾರದಿಂದ ರಾಮೇಶ್ವರಕ್ಕೆ ಹೋಗುವ ದಾರಿಯಲ್ಲಿ ಅಲ್ಲಲ್ಲಿ ಅನ್ನ ಸತ್ರಗಳನ್ನಿಡಿಸಿದಳು. ಕಾಶಿಯಲ್ಲೊಂದು ದೇವಾಲಯವನ್ನು ನಿರ್ಮಿಸಿ ವಿಠಲಮೂರ್ತಿಯನ್ನು ಸ್ಥಾಪಿಸಿದಳು. ಕಾಶಿಯಲ್ಲಿಯೂ, ಇತರ ಸ್ಥಳಗಳಲ್ಲಿಯೂ ಇರುವ ವರ್ತಕ ಶಾಲೆಗಳಲ್ಲಿ ಸ್ವಲ್ಪ ದ್ರವ್ಯವು ದಾನಧರ್ಮ ಗಳಿಗೆ ಉಪಯೋಗಿಸುವಂತೆ ಏರ್ಪಾಟು ಮಾಡಿದಳು. ಹೀಗೆ ಕೆಲವು ಕಾಲ ಕಳೆದಮೇಲೆ ಆಕೆಗೆ ದ್ವಾರಕಾ ಯಾತ್ರೆಯನ್ನು ಮಾಡಬೇಕೆಂಬ ಅಭಿಲಾಷೆಯು ಉಂಟಾಗಿ ಬಹು ವೈಭವದೊಡನೆ ಯಾತ್ರೆಗೆ ಹೊರಟಳು. ಮಾರ್ಗದಲ್ಲಿ ಗಾಯಕವಾಡ್ ಮಹಾರಾಜರು ರಖಮಾಬಾಯಿ