ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಗಳಲ್ಲಿ ಕೆಲವನ್ನು ಇಲ್ಲಿ ಬರೆವೆನು, “ ನಾವು ನಮ್ಮ ದೀನಾವಸ್ಥೆಯನ್ನು ಕುರಿತು ಅನೇಕ ಸಲ ನಿಮಗೆ ತಿಳಿಸಿದ್ದೇವೆ, ನೀವು ಮೈಸೂರನ್ನು ಬಿಟ್ಟು ೨೨ ವರ್ಷಗಳಾ ದುವು, ಪ್ರತಿದಿವಸವೂ ಈ ಯವನರಾಕ್ಷಸನು (ಹೈದರನ ಮಗನಾದ ಟೀಪುವು) ಕೊಡುವ ಅನೇಕ ವಿಧವಾದ ಬಾಧೆಗಳನ್ನು ನಾವು ಅನುಭವಿಸುತ್ತಲಿದ್ದೇವೆ. ಇವನು ನಮ್ಮನ್ನು ಕ್ರಮೇಣ ಹೆಚ್ಚು ಬಾಧೆಗಳಿಗೊಳಪಡಿಸುತ್ತಲಿದಾನೆ, ಟೀಪುವು ಸ್ಫೋಟಕದ ಕಾರಣವನ್ನು ಹೇಳಿ ಚಾಮರಾಜಒಡೆಯರನ್ನು ರಹಸ್ಯವಾಗಿ ಕೊಂದು ಹಾಕಿದನು. ನನಗೆ ಶರೀರಾಚ್ಚಾದನೆಗೊಂದು ಒಳ್ಳೆಯ ವಸ್ತ್ರವನ್ನಾದರೂ ಕೊಡದೆ ಹಿಂಸಿಸುತಲಿದ್ದಾನೆ, ನಮ್ಮನ್ನು ರಾಜಮಂದಿರದಲ್ಲಿ ರಗೊಡದೆ ಅಲ್ಲಿಂದ ಹೊರಡಿಸಿದನು, ನಾವು ಅಲ್ಲಿಂದ ಹೊರಟುಬರುವಾಗ ಅಲ್ಲಿದ್ದ ಕಾವಲಿನವರು ನಮ್ಮನ್ನು ಪರೀಕ್ಷಿಸಿ ನೋಡಿ ಅವಮಾನ ಮಾಡಿದರು, ಅವರು ನಮ್ಮ ದೇಹದಲ್ಲಿ ರುವ ಒಡವೆಗಳೆಲ್ಲವನ್ನೂ ತೆಗೆದುಕೊಂಡು ನಮಗೆ ಧರಿಸಿಕೊಳ್ಳುವುದಕ್ಕೆ ಒರಟಾದ ಬಟ್ಟೆಗಳನ್ನು ಕೊಟ್ಟರು. ಕಾಂತಿರಾಯರ ಹಳೆಯಮನೆಯ ಒಂದು ಭಾಗವನ್ನು ನಮ್ಮ ನಿವಾಸಕ್ಕೆ ಕೊಟ್ಟು, ನಮ್ಮ ಸುತ್ತಲು ಪಹರೆಯನ್ನಿಟ್ಟಿದ್ದಾರೆ. ನಮ್ಮ ದಾಸಿಯರಲ್ಲಿ ಹನ್ನೆರಡು ಮಂದಿಯನ್ನು ಕೊಟ್ಟು ಮಿಕ್ಕವರಲ್ಲಿ ಕೆಲವರನ್ನು ಮಹ ಮ್ಮದೀಯ ಮತಕ್ಕೆ ಸೇರಿಸಿಕೊಂಡು, ಅವರಿಂದ ಅತಿ ನೀಚವಾದ ಕೆಲಸಗಳನ್ನು ಮಾಡಿಸುತಲಿದ್ದಾರೆ. ಕೆಲವರನ್ನು ಅತಿ ದೂಷ್ಯವಾದ ವೇಶ್ಯಾವೃತ್ತಿಯನ್ನೂ ಅವ ಲಂಬಿಸುವಂತೆ ಮಾಡಿದ್ದಾರೆ, ಇನ್ನು ಕೆಲವರಿಂದ ಶೌಚ ಕೂಪಗಳನ್ನು ತೊಳೆಸು ತಿದ್ದಾರೆ. ನಿತ್ಯವೂ ನಮಗೆ ಭಿಕ್ಷುಕರಿಗೆ ಕೊಡುವಂತಹ ಧಾನ್ಯವನ್ನು ಕೊಡು ತ್ತಾರೆ. ನಾವು ಮಡಕೆಗಳಲ್ಲಿ ಅಡಿಗೆಮಾಡಿಕೊಂಡು, ಪರ್ಣ ಪುಟಗಳಲ್ಲಿ ಊಟ ಮಾಡುತಿರುವೆವು, ಟೀಪುವು ನಮ್ಮನ್ನು ತೊರೆಯಲ್ಲಿಯೇ ಕೊಲ್ಲುವಂತೆ ಪ್ರತಿಜ್ಞೆ ಯನ್ನು ಮಾಡಿದನಂತೆ, ಅವನು ಯಾವಾಗ ನಮ್ಮ ಪ್ರಾಣಗಳನ್ನು ತೆಗೆಯು ವನೋ ತಿಳಿಯದು. ನಮಗೆ ಒಳ್ಳೆಯದನ್ನು ಮಾಡಲೆಣಿಸಿ ನೀವು ಅನೇಕ ವಿಧ ವಾದ ಸಂಕಟಗಳನ್ನನುಭವಿಸಿದಿರಿ, ನಮಗಾಗಿ ನೀವು ಇಂಗ್ಲೀಷರೊಡನೆ ಸ್ನೇಹ ಮಾಡಲೆಣಿಸಿ ಜಾನ್ಸಲಿವನ್ ದೊರೆಯೊಡನೆಯೂ, ಇತರ ಇಂಗ್ಲೀಷ್ ಸರದಾರ ರೊಡನೆಯೂ ಮಾತನಾಡಿ, ಅವರು ನಮಗೆ ಸಹಾಯಕರಾಗುವಂತೆ ಮಾಡಿದಿರಿ. ಇದಲ್ಲದೆ ನಮಗೋಸ್ಕರ ನಿಮ್ಮ ಮಿತ್ರರನ್ನೂ ಬಂಧುಗಳನ್ನೂ ಈ ಮಾನವರಾಕ್ಷ ಸನು ಬಲಿಯಾಗಿ ತೆಗೆದುಕೊಂಡನು. ಹೀಗೆ ನಿಮಗೆ ಉಂಟಾದ ಅನೇಕ ಕಷ್ಟ ಗಳನ್ನು ನೆನೆದರೆ ನನ್ನ ಹೃದಯವು ಕರಗುವುದು. ಇಷ್ಟು ಕಷ್ಟ ನಷ್ಟಗಳುಂಟಾ ದರೂ ನಮ್ಮ ಪ್ರಯತ್ನವು ಕೊನೆಗೊಂಡು ನಮ್ಮ ರಾಜ್ಯಕ್ಕೆ ಸ್ವಾತಂತ್ರ್ಯವುಂಟಾಗ ದಿರುವುದು ಅಧಿಕ ಸಂತಾಪಕರವಾಗಿದೆ. ಇನ್ನು ಶೀಘ್ರದಲ್ಲಿ ನಮ್ಮ ನಾಶವುಂಟಾ ಗುವುದಕ್ಕೆ ಸಂದೇಹವಿಲ್ಲ. ಟೀಪುವಿನ ಬಳಿಗೆ ಈಗ ಒಬ್ಬ ಫ್ರೆಂಚ್ ವಕೀಲನು ಬಂದಿದಾನೆ. ಅವನು ನಮ್ಮನ್ನು (ಕಾಣಿಯನ್ನು ಕೊಲ್ಲದಿದ್ದರೆ ಟೀಪುವಿಗೆ ಶೀಘ್ರ