ನಾಚಿ. ಈ ವಿದ್ವಾಂಸಳು ಏಲೇಶ್ವರೋಪಾಧ್ಯಾಯನ ಮಗಳು. ಈತನು ಆಂಧ್ರ ಬ್ರಾಹ್ಮಣನು; ದೊಡ್ಡ ವಿದ್ವಾಂಸನು. ಈತನ ನಿವಾಸಸ್ಥಳವು ಏಲೇಶ್ವರ ಪುರವು ; ಈ ಗ್ರಾಮವು ಶ್ರೀಶೈಲಕ್ಕೆ ಪಶ್ಚಿಮದಲ್ಲಿ ಇದೆ. ಈತನು ವಿಧ್ಯಾರ್ಥಿಗಳಿಗೆ ಪ್ರತಿ ದಿನವೂ ಮನೆಯಲ್ಲಿಯೇ ಸಂಸ್ಕೃತ ಭಾಷೆಯನ್ನು ಹೇಳಿಕೊಡುತಲಿದ್ದನು. ಈತನ ಮನೆಯಲ್ಲಿರುವವರೆಲ್ಲರೂ ಅದನ್ನು ಯಾವಾಗಲೂ ಕೇಳುತ್ತಲಿದ್ದುದರಿಂದ ಆ ಭಾಷೆಯನ್ನು ಬಹು ಚನ್ನಾಗಿ ಮಾತನಾಡುತಲಿದ್ದರಂತೆ. ಈತನೇ ಆಂಧ್ರ ದೇಶದಲ್ಲೆಲ್ಲ ನಾಡುಗಳ ಭೇದಗಳನ್ನು ಏರ್ಪಾಟುಮಾಡಿ ವಿವಾಹಾದಿಗಳು ಆಯಾ ನಾಡಿನವರಲ್ಲಿಯೇ ನಡೆಯಬೇಕು ಎಂದು ಏರ್ಪಾಟು ಮಾಡಿದನು ಎಂದು ಪ್ರತೀತಿಯುಂಟು. ಆ ವಿಭಾಗವು ಈಗಲೂ ಆಂಧ್ರ ದೇಶದಲ್ಲಿ ಪ್ರಚಾರ ದಲ್ಲಿದೆ. ಈತನಿಗೆ ಪುತ್ರ ಸಂತತಿಯು ಇಲ್ಲ. ಇಬ್ಬರು ಪುತ್ರಿಯರುಮಾತ್ರ ಇದ್ದರು. ಈತನು ಶಾಲಿವಾಹನ ಶಕದ ಏಳನೆಯ ಶತಾಬ್ದ ದಲ್ಲಿ ಇದ್ದಂತೆ ತಿಳಿಯ ಬರುತ್ತದೆ. ಆದುದರಿಂದ ನಾಚಿಯು ಸಹ ಆ ಶತಾಬ್ದ ದವಳು ಎಂದು ತಿಳಿಯ ಬೇಕು. ನಾಚಿಯು ಆಂಧ್ರಸೀಯಾದರೂ ಈಕೆಯ ಚರಿತ್ರೆಗೆ ಆಂಧ್ರ ದೇಶದಲ್ಲಿ ಯಾವ ಸಾಧನವೂ ದೊರೆಯದೆ, ಮಹಾರಾಷ್ಟ್ರದಲ್ಲಿ ದೊರೆತ ಆಧಾರಗಳಿಂದ ಈಕೆಯ ಅಲ್ಪ ಚರಿತ್ರೆಯನ್ನು ಬರೆಯಬೇಕಾಯಿತು. ಈಕೆಯು ಬಾಲವಿತಂತು ವಾದಕಾರಣ ಈಕೆಗೆ ದುಃಖವು ತೋರದಿರುವುದಕ್ಕಾಗಿ ಈಕೆಯು ತಂದೆಯು ವಿದ್ಯಾಭ್ಯಾಸವನ್ನು ಮಾಡಿಸುತಲಿದ್ದನು. ನಾಚಿಯು ತನಗೆ ವಿದ್ಯೆಯು ಶೀಘ್ರವಾಗಿ ಬರಲಿಲ್ಲವೆಂದು ಚಿಂತಿಸಿ, ತನ್ನ ತಂದೆಯು ವಿದ್ಯಾರ್ಥಿಗಳಿಗೆ ಬುದ್ದಿ ವೈಭವವನ್ನುಂಟು ಮಾಡುವುದಕ್ಕಾಗಿ ಸಿದ್ದಪಡಿಸಿ ಇಟ್ಟಿದ್ದ ಜ್ಯೋತಿಷ್ಯತಿ ಎಂಬ ತೈಲವನ್ನು ಯಾರಿಗೂ ತಿಳಿಯದಂತೆ ಕುಡಿದಳು, ಅದರಮೇಲೆ ಆಕೆಯ ದೇಹದಲ್ಲಿ ಅತ್ಯಂತ ತಾಪವು ಉಂಟಾಗಲು ಮನೆಯಲ್ಲಿದ್ದ ಬಾವಿಯೊಳಗೆ ದುಮುಕಿದಳು, ಅನಂತರ ಮನೆಯವರು ಆಕೆಯನ್ನು ಹುಡುಕಿ ಎಲ್ಲಿಯೂ ಕಾಣದೆ ಬಾವಿಯಲ್ಲಿ ನೋಡಿದರು. ಅಷ್ಟು ಹೊತ್ತಿಗೆ ಆಕೆಗೆ ತಾಪವು ಸ್ವಲ್ಪ ಕಡಮೆಯಾದ ಕಾರಣ ತನ್ನ ವೃತ್ತಾಂತ ನನ್ನೆಲ್ಲ ಅವರೊಡನೆ ಹೇಳಿದಳು. ಆಗ ಆಕೆಯ ತಂದೆಯು ಆಕೆಯನ್ನು ಇನ್ನು ಕೆಲವು ಗಳಿಗೆಗಳು ಬಾವಿಯಲ್ಲಿಟ್ಟು ಆಮೇಲೆ ಈಚೆಗೆ ತೆಗೆದನು. ನಾಚಿಗೆ ಆದಿವಸ ಮೊದಲ್ಗೊಂಡು ವಿಶೇಷ ತಿಳುವಳಿಕೆಯೂ, ಜ್ಞಾಪಕಶಕ್ತಿಯೂ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೩೨
ಗೋಚರ