ಬ 4೧೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ಕೊಂಡು ಬಂದಿರುವ ಬ್ರಾಹ್ಮಣರೊಡನೆ, ವರನನ್ನು ನೋಡಿ ಲಗ್ನ ನಿಶ್ಚಯ ಮಾಡಿಕೊಂಡು ಬರಲು, ತಾವು ಒಬ್ಬ ಭೂಸುರನನ್ನು ಕಳುಹಿದರು. ಗಣಿತ ದಲ್ಲಿ ಪ್ರವೀಣಳಾದ ಸರಸವಾಣಿಯು ಅ೦ದಿಗೆ ಹದಿನಾಲ್ಕನೆಯ ದಿವಸದ ದಶ ಮಿಯು, ಶುಭಚಂದ್ರಯುಕ್ತವಾದ ಸುಮುಹೂರ್ತವು ಎಂದು ಬರೆದು ತಮ್ಮ ಬ್ರಾಹ್ಮಣನ ಕೈಯಲ್ಲಿ ಕೊಟ್ಟಳು. ಆಗ ಆ ಬ್ರಾಹ್ಮಣರು ಮುವ್ವರೂ ಕೆಲವು ದಿವಸಗಳಿಗೆ ಮಂಡನಮಿಶ್ರನ ಗ್ರಾಮಕ್ಕೆ ಹೋಗಿ ಆತನ ತಂದೆಯ ಕೈಯಲ್ಲಿ ಶುಭಲೇಖನವನ್ನು ಕೊಟ್ಟರು. ಆತನು ಅದನ್ನು ಓದಿಕೊಂಡು ಸಂತಸದೊಡನೆ ಬಂಧುಮಿತ್ರ ಸಮೇತನಾಗಿ ಶುಭದಿನದಲ್ಲಿ ಪ್ರಯಾಣವನ್ನು ಮಾಡಿ, ವಿಷ್ಣು ಶರ್ಮನ ಗ್ರಾಮವನ್ನು ಸೇರಿ ಮಗನಿಗೆ ಮದುವೆಯನ್ನು ಮಾಡಿದನು. ಮಗಳು ಅತ್ತೆ ಯಮನೆಗೆ ಹೋಗುವ ಸಮಯದಲ್ಲಿ ಸರಸವಾಣಿಯ ಜನನೀ ಜನಕರು ಆಕೆಗೆ “ ಪ್ರಿಯಕುಮಾರೀ ! ಈ ದಿನದಿಂದಲೂ ನಿನಗೆ ಅಪೂರ್ವ ವಾದ ಸ್ಥಿತಿಯು ಉಂಟಾಯಿತು. ಈ ಸುಸ್ಥಿತಿಗೆ ತಕ್ಕಂತೆ ಪ್ರವರ್ತಿಸು. ಬಾಲ್ಯ ಕ್ರೀಡೆಗಳನ್ನು ತ್ಯಜಿಸು. ಏಕಂದರೆ ನಿನ್ನ ಆಟಗಳು ನಮಗೆ ಸಂತೋಷಜನಕ ಗಳಾಗುವಂತೆ ಇತರರಿಗೆ ಸಂತೋಷವನ್ನು ಉಂಟುಮಾಡಲಾರವು, ಸ್ತ್ರೀಯು ಅವಿವಾಹಿತೆಯಾಗಿರುವಾಗ ತಾಯಿತಂದೆಗಳ ಆಜ್ಞೆಯಲ್ಲಿರಬೇಕು. ವಿವಾಹಾ ನಂತರ ಪತಿಯೇಗತಿ. ಆದಕಾರಣ ನೀನು ಪತಿಯ ಆಜ್ಞೆಯಂತೆ ನಡೆಯುತ ಲಿರು, ಪತಿಗಿಂತಲೂ ಮೊದಲು ಹಾಸಿಗೆಯನ್ನು ಬಿಟ್ಟಿದ್ದು ಸ್ನಾನವನ್ನು ಮಾಡು. ಪತಿಯು ಭುಜಿಸುವುದಕ್ಕೆ ಪೂರ್ವದಲ್ಲೆಂದಿಗೂ ಭುಜಿಸಬೇಡ, ಪತಿಯು ಪ್ರವಾಸ ದಲ್ಲಿರುವಾಗ ಭೂಷಣಾದಿಗಳನ್ನು ಧರಿಸಬೇಡ, ಅರುಂಧತ್ಯಾದಿ ಪತಿವ್ರತೆಯ ರಂತೆ ನಡೆಯುವುದೇ ನಿನಗೆ ಭೂಷಣವು, ಪತಿಯು ಕೋಪವಶನಾದರೆ ನೀನು ಮೌನವಾಗಿರು. ಆತನ ಕೋಪವನ್ನು ಸಹಿಸಿಕೊ, ನೀನು ಈ ವಿಧವಾಗಿ ನಡೆದರೆ ಆತನು ನಿನ್ನ ಮೇಲೆ ಕೋಪವನ್ನು ಬಿಟ್ಟು ಪ್ರೇಮದಿಂದ ಆದರಿಸುವನು; ಶಾಂತದೊಡನೆ ಸಮಾನವಾದುದು ಯಾವುದೂ ಇಲ್ಲ. ಪತಿಯು ಗೃಹದಲ್ಲಿ ಇಲ್ಲದ ಸಮಯದಲ್ಲಿ ಯಾರಾದರೂ ಅತಿಥಿಗಳು ಬಂದರೆ ಅವರನ್ನು ಸರಿಯಾಗಿ ಸನ್ಮಾನಿಸಿ ಆದರದೊಡನೆ ಕಳುಹಿಸು, ಇಲ್ಲದಿದ್ದರೆ ಅವರಲ್ಲಿ ಯಾರಾದರೂ ಮಹಾತ್ಮರಿದ್ದರೆ ಕುಲದಾಹವಾಗುವುದು. ಅತ್ತೆ ಮಾವಂದಿರನ್ನು ಜನನೀಜನಕ ರಂತೆಯೂ, ಭಾವಮೈದಂದಿರನ್ನು ಅಣ್ಣ ತಮ್ಮಂದಿರಂತೆಯೂ ಭಾವಿಸಿ ನಡೆ. ಇವರಿಗೆ ಕೋಪವುಂಟಾದರೆ ನಿನಗೂ ನಿನ್ನ ಪತಿಗೂ ಅನ್ನೋನ ಪ್ರೇಮವು ವಿಶೇಷವಾಗಿ ಇದ್ದರೂ ನಿಮ್ಮಲ್ಲಿ ನಿಮಗೆ ಭೇದವನ್ನು ಹುಟ್ಟಿಸುವರು. ನೀನು ಈ ವಿಧವಾಗಿ ನಡೆದರೆ ಉಭಯಲೋಕಗಳಲ್ಲಿಯೂ ಕೀರ್ತಿಯನ್ನು ಪಡೆಯುವೆ. ” ಎಂದು ಹೇಳಿದರು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೩೫
ಗೋಚರ