ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

פר ೧೧ - ಮೈಸೂರು ಮಹಾರಾಣಿ ಲಕ್ಷ್ಮಮ್ಮಣ್ಣಿ. ದಲ್ಲಿಯೇ ನಾಶವುಂಟಾಗುವುದೆಂದು ಬೋಧಿಸಿದನಂತೆ, ಬಳಿಕ ನಮ್ಮನ್ನು ಕ್ಷಿಪ್ರ ದಲ್ಲಿ ಕೊಲ್ಲುವಂತೆ ನಿಶ್ಚಯಿಸಿದರಂತೆ, ಟೀಪುವಿಗೂ, ಫ್ರೆಂಚರಿಗೂ ನಡೆದ ಕರಾ ರನ್ನು ಇದರೊಂದಿಗೆ ಕಳುಹಿಸಿದ್ದೇವೆ. ನೀವು ಅದನ್ನು ಇಂಗ್ಲೀಷು ಗವರ್ನರ್ ಜನರಲ್ ದೊರೆಗೆ ತೋರಿಸಬೇಕು, ಫ್ರೆಂಚರು ಇಲ್ಲಿಗೆ ಪ್ರವೇಶಿಸುವುದಕ್ಕೆ ಪೂರ್ವವೇ ಇಂಗ್ಲೀಷರು ತಮ್ಮ ಸೈನ್ಯವನ್ನು ಇಲ್ಲಿಗೆ ಕಳುಹಿಸಿ ಆ ಯವನರಾಕ್ಷಸ ನನ್ನು ಅಡಗಿಸದಿದ್ದರೆ ಕಂಪೆನಿಯವರ ರಾಜ್ಯವೂ ಸಹ ಅಧಿಕಭಯಕ್ಕಾಸ್ಪದವಾಗು ವುದು, ಇಂಗ್ಲೀಷ್ ಗವರ್ನರಿಗೆ ನಮ್ಮ ವಿಜ್ಞಾಪನೆಯನ್ನು ಕುರಿತು, ನಮ್ಮ ಪ್ರಾಣ ರಕ್ಷಣೆಯನ್ನು ಕುರಿತು ಚಿಂತೆಯಿಲ್ಲದಿದ್ದರೂ ಕಂಪೆನಿಯವರ ರಾಜ್ಯವನ್ನು ಕಾಪಾಡಿ ಕೊಳ್ಳುವುದಕ್ಕಾದರೂ ಸೈನ್ಯವನ್ನು ಶೀಘ್ರವಾಗಿ ಕಳುಹಿಸಬೇಕೆಂದು ನೀವು ಆತ ನೊಡನೆ ತಿಳಿಸಬೇಕು, ಅಷ್ಟರ ವರೆಗೆ ಹೇಗಾದರೂ ನಮ್ಮ ಪ್ರಾಣವನ್ನು ರಕ್ಷಿಸಿ ಕೊಂಡಿರುವೆವು. ರಾಜ್ಯವು ನಮಗೆ ಲಭಿಸಿದ ಪಕ್ಷಕ್ಕೆ ಹೂಣರಿಗೆ ಒಂದು ಕೋಟಿ ರೂಪಾಯಿ ಗಳನ್ನು ಕೊಡುವೆವು, ಅವರು ಸಲಿರ್ವ ದೊರೆಯೊಡನೆ ಮಾಡಿದ ಕರಾರನ್ನು ನಡೆಸಬೇಕು, ಸಲಿರ್ನ ಮೊದಲಾದ ಸರದಾರರಿಗೆಲ್ಲರಿಗೂ ಅಗ್ರಹಾರಗಳನ್ನು ಕೊಡುವೆವು, ಅತಿ ಕ್ರೂರನಾದ ಈ ಯವನರಾಕ್ಷಸನಿಂದ ಪ್ರಜೆಗಳು ವಿಶೇಷ ಬಾಧೆಗಳನ್ನನುಭವಿಸುತಲಿದ್ದಾರೆ. ಆದಕಾರಣ ಎಲ್ಲರೂ ಅವನ ನಾಶವನ್ನೇ ಅಪೇಕ್ಷಿಸುವರು. ಇಂತಹ ಸಮಯದಲ್ಲಿ ಆಂಗ್ಲೆಯ ಸೈನ್ಯಕ್ಕೆ ಇಲ್ಲಿಯ ಸೈನಿಕರು ಬೇಕಾದಷ್ಟು ಸಹಾಯವನ್ನು ಮಾಡಬಲ್ಲರು. ಹೂಣರ ಸೈನ್ಯವು ಯಾವ ಕಡೆ ಯಿಂದ ಬಂದರೂ, ಭೋಜನಪಾನೀಯಾದಿ ಸಾಮಗ್ರಿಗಳು ಪುಷ್ಕಳವಾಗಿ ದೊರೆ ವುವು. ಆದುದರಿಂದ ನೀವು ನಿಮ್ಮ ಸಾಮರ್ಥ್ಯವೆಲ್ಲವನ್ನೂ ವ್ಯಯಮಾಡಿ ಯುದ್ಧ ಪ್ರಯತ್ನವನ್ನು ಮಾಡಿದರೆ ಶ್ರೀರಂಗನಾಥನು ನಿಮಗೆ ಸಹಾಯವನ್ನು ಮಾಡುವ ನೆಂದು ನಂಬಿರುವೆನು, ” ಎಂದು ಮಹಾರಾಣಿಯಿಂದ ಬರೆದ ಲೇಖನವು ತಿರು ಮಲರಾಯನಿಗೆ ಪ್ರೇಷಿತವಾಯ್ತು. ಆ ಬಳಿಕ ಪೂನಾ ಪೇಷೆಯೂ, ಹೈದರಾಬಾದು ನೈಜಾಮನೂ, ಆ೦ಗ್ಲೀಯರೂ ಸೇರಿ ೧೭೯೯ ನೆಯ ಇಸವಿಯಲ್ಲಿ ಟೀಪುವಿನೊಡನೆ ನಡೆಸಿದ ಯುದ್ಧವು ಇತಿಹಾಸ ವನ್ನೋದಿದವರಿಗೆಲ್ಲರಿಗೂ ತಿಳಿದ ವಿಷಯವಾದುದರಿಂದ ಅದನ್ನು ಇಲ್ಲಿ ವರ್ಣಿಸ ಬೇಕಾದುದಿಲ್ಲ. ಶ್ರೀರಂಗಪಟ್ಟಣದಲ್ಲಿ ನಡೆದ ಈ ಘೋರ ಸಂಗ್ರಾಮದಲ್ಲಿ, ಟೀಪುಸುಲ್ತಾನನು ಮೇ ತಿಂಗಳು ೪ ನೆಯ ತಾರೀಖಿನಲ್ಲಿ ಹತನಾದುದರಿಂದ ಮೈಸೂರು ಸಿಂಹಾಸನವು ಬಂಧಮುಕ್ತವಾಯಿತು. ಆ ಯುದ್ದದಲ್ಲಿ ಹೂಣರಿಗೆ ಮಹಾರಾಣಿ ಲಕ್ಷ್ಮಮ್ಮಣ್ಣಿಯು ಮಾಡಿದ ವಿಶೇಷ ಸಹಾಯದಿಂದ ಅವರು ಆಕೆಯನ್ನು ಬಹಳ ಗೌರವದಿಂದ ಕಂಡುದಲ್ಲದೆ