ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಾಂದ ಬೀಬಿ. ೩೧೭ ಅನಂತರ ಬಹದುರನನ್ನು ಕಾರಾಗೃಹದಿಂದ ಬಿಡಿಸಿ ಆತನಿಗೆ ಪಟ್ಟಾಭಿ ಷೇಕವನ್ನು ಮಾಡಿ ಅಹಮ್ಮದ್ ಖಾನ್ ಎಂಬವನಿಗೆ ದಿರ್ವಾಗಿರಿಯನ್ನು ಕೊಟ್ಟು ತಾನು ರಾಜ್ಯ ತಂತ್ರಗಳನ್ನು ನಡೆಸುತಲಿದ್ದಳು. ಕೆಲವು ದಿವಸಗಳಿಗೆ ಆತನಿಗೆ ರಾಜ್ಯ ಕಾಂಕ್ಷೆಯು ಹೆಚ್ಚಾದುದರಿಂದ ಆತನು ಚಾಂದಬೀಬಿಯನ್ನು ಲಕ್ಷ ಮಾಡುತಲಿರಲಿಲ್ಲ. ಈ ವಿಷಯವು ಸೈನಿಕರಿಗೆ ತಿಳಿಯಬರಲು ಅವರು ಅಹಮ್ಮದ್‌ಖಾನನನ್ನು ಬಂಧಿಸಿ ಚಾಂದಬೀಬಿಯ ವಶಮಾಡಿದರು. ಆಮೇಲೆ ಆ ಕೆಲಸವನ್ನು ನೇಹಾಂಗಖಾನನಿಗೆ ವಹಿಸಲು ಆತನೂ ಕೆಲವು ದಿವಸಗಳಿಗೆ ಚಾಂದಬೀಬಿಗೆ ವೈರಿಯಾದನು. ಈ ಸಮಯದಲ್ಲಿಯೇ ಮಹಾಪುರದಲ್ಲಿ. ಮುರಾವನು ಕಾಲವಾದನು. ಆಗ ಅಕ್ಸರ್ ಬಾದಷಹನು ತನ್ನ ಚಿಕ್ಕ ಮಗನಾದ ಡಾನಿಯಲ್ ಎಂಬವನನ್ನು ಮುರಾದನಿಗೆ ಬದಲಾಗಿ ಕಳುಹಿ ಖಾನ್ ಖಾನ್ ಎಂಬವನಿಗೆ ಮಂತ್ರಿತ್ವವನ್ನು ಕೊಟ್ಟನು. ಆಮೇಲೆ ಅಕ್ಟರನು ಕ್ರಿ.ಶ. ೧೫೯೯ ರಲ್ಲಿ 'ಬೀರಾರಿಗೆ ಬಂದು ಡಾನಿಯಲನನ್ನು ಅಹಮ್ಮದ್‌ ನಗರದ ಮೇಲಕ್ಕೆ ಯುದ್ಧ ಮಾಡುವುದಕ್ಕೆ ಕಳುಹಿಸಿದನು. ಈ ಸಮಯದಲ್ಲಿ ನಿಜಾಮ್ರಾಹಿಯು ಅತ್ಯಂತ ಅವ್ಯವಸ್ಥೆಯಲ್ಲಿತ್ತು. ಧೀಮತಿಯಾದ ಚಾಂದಬೀಬಿಯು ರಾಜ್ಯವನ್ನು ಪಾಲಿಸುತಲಿದ ರೂ, ಆಕೆಗೆ ವಿಶ್ವಾಸ ಪಾತ್ರರಾದವರಾರೂ ಇಲ್ಲದ ಕಾರಣ ಆಕೆಯ ಏನೂ ಮಾಡಲಾರದಿದ್ದಳು. ನೇಹಾಂಗಖಾನನು ಚಾಂದಬೀಬಿಯೊಡನೆ ಆಲೋಚಿಸಿ ವೈರಿಗಳನ್ನು ಮಾರ್ಗದಲ್ಲಿ ಅಡಗಿಸಲು ಹೋದನು. ಆದರೆ ಶತ್ರುಗಳು ಬೇರೊಂದು ಮಾರ್ಗದಿಂದ ಬಂದು ನಗರವನ್ನು ಮುತ್ತಿದರು. ಆಗ ಚಾಂದ ಬೀಬಿಯು ತನ್ನ' ಆಜ್ಞೆಯನ್ನು ಪಾಲಿಸು ವವರಾರೂ “ಇಲ್ಲದಕಾರಣ ಬಾಲರಾಜನನ್ನು ಕರೆದುಕೊಂಡು ಜುನ್ನರ್ ಎಂಬ ಗ್ರಾಮಕ್ಕೆ ಹೋಗಲು ನಿಶ್ಚಯಿಸಿದಳು, ಈ ವಿಷಯವು ಆಕೆಯ ಸವಿಾಪದಲ್ಲಿದ್ದ ಹಖಾದ್ ಖಾನನಿಗೆ ಸರಿಬೀಳದೆ, ಅವನು ಚಾಂದಬೀಬಿಯು ರಾಜ್ಯವನ್ನು ಹಗೆ ಗಳಿಗೆ ಒಪ್ಪಿಸುತಲಿದಾಳೆ ಎಂದು ಊರಿನಲ್ಲೆಲ್ಲ ಸಾರಲು ಪ್ರಾರಂಭಿಸಿದನು. ದಕ್ಷಿಣ ತುರುಷ್ಠರು ಆ ಮಾತನ್ನು ನಿಜವೆಂದು ನಂಬಿ, ಹಮಾದನನ್ನು ಮುಂದಿಟ್ಟು ಕೊಂಡು ಅಂತಃಪುರವನ್ನು ಪ್ರವೇಶಿಸಿ ನಿರ್ದಯರಾಗಿ ಚಾಂದಬೀಬಿ ಯನ್ನು ಸಂಹರಿಸಿದರು. ಹಿಂದೂಸ್ಥಾನದ ಚರಿತ್ರೆಯಲ್ಲಿ ಪ್ರಸಿದ್ಧಳಾದ ಈ ಶೂರ ರಮಣಿಯ ಜೀವಿತವು ಈ ಪರಿಯಾಗಿ ಮುಗಿಯಿತು. ಈಕೆಯು ಪ್ರಥಮದಲ್ಲಿ ಮೈದುನನ ಮಗನಿಗಾಗಿ ಆದಿಲ್‌ಶಾಹಿಯನ್ನು ರಕ್ಷಿಸಿದಳು. ಅನಂತರ ತಮ್ಮನ ಪೌತ್ರನಾದ ಬಹದುರನಿಗಾಗಿ ನಿಜಾಮಶಾಹಿ ಯನ್ನು ಬಹು ಕುಶಲತ್ವದಿಂದ ರಕ್ಷಿಸಿ, ಸರ್ವಭೌಮನಾದ ಅಕ್ಟರನ ಸೈನ್ಯಗಳನ್ನು ಸಹ ಹಿಂದಿರುಗುವಂತೆ ಮಾಡಿದಳು. ಆದರೆ ಮೂರ್ಖರಾದ ಜನರು ಆಕೆಯ