ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಯುದ್ಧಾನಂತರ ಆಕೆಯನ್ನು ಕೊಂಡಾಡಿ, ಆಕೆಯ ಹೇಳಿಕೆಯಂತೆ ಮೈಸೂರು ರಾಜ್ಯದಲ್ಲಿ ತಕ್ಕ ಏರ್ಪಾಟುಗಳನ್ನು ಮಾಡಿದರು. ರಾಣಿಯು ವಯೋವೃದ್ದ ನೂ ವಿಚಾರಜ್ಞನೂ ಆದ ಪೂರ್ಣಯ್ಯನೆಂಬ ಮಂತ್ರಿ ಪುಂಗವನೊಡನೆ ಆಲೋಚಿಸಿ, ಕಂಪೆನಿಯವರೊಡನೆ ಮಾಡಿಕೊಳ್ಳಬೇಕಾದ ಸಂಧಿಯ ವಿಷಯವೆಲ್ಲವನ್ನೂ ನಿರ್ಣ ಯಿಸಿದಳು. ರಾಣಿಯ ಆಲೋಚನೆಯಂತೆ ರಾಜ್ಯವು ಕೃಷ್ಣರಾಜ ಪ್ರಭುವಿಗೆ ದೊರೆಯಿತು. ಆಕೆಯ ಅಭೀಷ್ಟಗಳಲ್ಲಿ ತಿರುಮಲರಾಯನನ್ನು ಮಂತ್ರಿಯನ್ನಾಗಿ ನಿಯಮಿಸಬೇಕೆಂಬಪೇಕ್ಷೆಯೊಂದು ಮಾತ್ರ ನೆರವೇರಲಿಲ್ಲ, ರಾಜತಂತ್ರಗಳನ್ನೆಲ್ಲ ವನ್ನೂ ನಡೆಸುತಲಿದ್ದ ಪುರಾತನ ಮುತ್ಸದ್ಧಿ ಯಾದ ಪೂರ್ಣಯ್ಯನಿಗೆ ದಿವಾನ್ ಗಿರಿಯು ದೊರೆಯಿತು. ರಾಜ್ಯ ವ್ಯವಹಾರಗಳೆಲ್ಲವೂ ಯಥಾಪ್ರಕಾರವಾಗಿ ನಡೆಯಲು ಪ್ರಾರಂಭವಾದ ಮೇಲೆ ರಾಣಿಯು ಪರಮಾರ್ಥವಿಚಾರದಲ್ಲಿ ಕಾಲವನ್ನು ಕಳೆಯಲು ನಿಶ್ಚಯಿಸಿ ದಳು. ಆಕೆಯು ಪರಮೇಶ್ವರನಲ್ಲಿ ಬಹು ಭಕ್ತಿಯುತೆಯಾದುದರಿಂದಲೇ ಮಹ ತರವಾದ ಸಂಕಟಗಳನ್ನು ಧೈರ್ಯದಿಂದ ಪರಿಹರಿಸಿ ಸೌಖ್ಯ ಪರ್ವತದ ಶಿಖರವನ್ನು ಏರಲು ಶಕ್ತಿ ಯಾದಳು. ಆಕೆಯು ಯಾವಾಗಲೂ ಸಂಪೂರ್ಣ ಭಕ್ತಿರಸದಿಂದ ತನ್ಮಯತ್ವವನ್ನು ಹೊಂದಿ, ದೀನದಯಾಳುವಾದ ಪರಮೇಶ್ವರನನ್ನು ಧ್ಯಾನಿಸುತ ಲಿದ್ದಳು, ಕೆಲದಿವಸಗಳ ಬಳಿಕ ಈ ಯದ್ವಿತೀಯ ರಮಣಿಯು ೧೮೧೫ ನೆಯ ಇಸವಿಯಲ್ಲಿ ಪರಮಪದವನ್ನೈದಿದಳು. ಪತಿಯು ಮೃತನಾದನಂತರ ಈಕೆ ೪೫ ವರ್ಷಗಳು ಜೀವಿಸಿದ್ದಳು. ಆಗ ಆಕೆಗೆ ಅನೇಕ ಸ್ಥಿತ್ಯಂತರಗಳುಂಟಾದುವು, ಅವುಗಳೆಲ್ಲವನ್ನೂ ತನ್ನ ಬುದ್ದಿ ಬಲ ದಿ೦ದ ನಿವಾರಣೆ ಮಾಡಿಕೊಂಡು ಕೊನೆಗೆ ಸ್ವಾತಂತ್ರ ಸುಖವನ್ನನುಭವಿಸಿದಳು. ಮೈಸೂರು ದೇಶದ ಚರಿತ್ರೆಯನ್ನು ಬರೆದ ಕರ್ನಲ್ವಿಲ್ಕ್ಸ್‌ಯಂಬಾತನು ೧೮೦೮ ನೆಯ ಇಸವಿಯಲ್ಲಿ ಈ ರಾಣಿಯನ್ನು ಕುರಿತು, “ ಈ ವೃದ್ದರಾಣಿಯು ಲೋಕಪೂಜೆಯೂ, ವಿಚಾರಶೀಲೆಯೂ ಆಗಿರುವಳು. ಆಕೆಯ ಅನುಭವವೂ, ಆ ಅನುಭವದಿಂದ ಆಕೆಗೆ ತೋರಿದ ಸದ್ವಿಚಾರಗಳೂ ಅತ್ಯಂತ ಪ್ರಶಂಸನೀಯ ಗಳಾಗಿರುತ್ತವೆ,” ಎಂದು ಬರೆದಿರುವನು, ಮೃತ್ಯು ಸಮಯದಲ್ಲಿ ಈಕೆಗೆ ಸುಮಾರು ಎಂಭತ್ತು ವರುಷ ವಯಸ್ಸಾಗಿದ್ದರೂ ಆಕೆಗೆ ಇಂದ್ರಿಯಪಟುತ್ವವು ಕಡಮೆಯಾಗ ಲಿಲ್ಲವಂತೆ. ಈ ಮಹಾ ಸಾಧಿಯು ಆಪದ್ದೆಶೆಯಲ್ಲಿ ಧೈರ್ಯವನ್ನವಲಂಬಿಸಿ ದ್ದಂತೆ ಅಧಿಕಾರವನ್ನು ಪಡೆದ ಕಾಲದಲ್ಲಿ ಶಾಂತಿ, ಭೂತದಯೆಗಳನ್ನು ಅವಲಂಬಿಸಿ ದಳು, ಸೇವಕರನ್ನು ದಯಾದೃಷ್ಟಿಯಿಂದ ನೋಡುತಿದ್ದಳು. ಬಡಜನರಿಗೆ ಈಕೆಯು ಮಾಡಿದ ಅಪರಿಮಿತ ಸಹಾಯದಿಂದ ಪ್ರಜೆಗಳು ಈಕೆಯನ್ನು ತಾಯಿ