ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

440 ಅಬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಸುತಲಿದ್ದಳು. ಬಾಲಬಾಲಕಿಯರು ಭಾನುವಾರದ ದಿವಸ ವನಲತಾದೇವಿಯ ಬಳಿಗೆ ಹೋಗಲು ಬಹು ಸಂತೋಷಪಡುತಲಿದ್ದರು. ಈಕೆಯು ಸುಮತೀಸಮಾಜಾನು ಮತದಿಂದ “ ಅಂತಃಪುರ ” ಎಂಬ ಮಾಸಪತ್ರಿಕೆಯನ್ನು ಸ್ತ್ರೀಯರಿಗಾಗಿ ಸ್ಥಾಪಿಸಿ ಮೂರುವರ್ಷಗಳು ನಡೆಸಿದಳು. ಈ ಪತ್ರಿಕೆಗೆ ಲೇಖಕರು, ಉಪಲೇಖಕರು, ಕಾರ್ಯದರ್ಶಿಗಳು ಎಲ್ಲರೂ ಸ್ತ್ರೀ ಯರೇ ಆಗಿದ್ದರು. ಇದರ ಅಂತಃಸ್ವರೂಪದಂತೆಯೆ ಬಾಹ್ಯ ಸ್ವರೂಪವು ಸಹ ಬಹು ಸುಂದರವಾಗಿತ್ತು. ಸಾಧಾರಣವಾಗಿ ಪ್ರತಿಯೊಬ್ಬ ಬಂಗಾಳಾ ಕುಟುಂ ಬಿಯೂ ಈ ಮಾಸಪತ್ರಿಕೆಗೆ ಚಂದಾದಾರನಾಗಿದ್ದನು. ಈ ಮಾಸಪತ್ರಿಕೆಯಿಂದ ಸ್ತ್ರೀಯರು ಸ್ವಾತಂತ್ರವಾಗಿ ಯಾವ ಕಾರ್ಯವನ್ನೂ ನೆರವೇರಿಸಲಾರರು ಎಂಬ ಭ್ರಮೆಯು ನಾಶವಾಯಿತು. ಆಕೆಯು ಮರಣಕ್ಕೆ ಪೂರ್ವದಲ್ಲಿ ವಿಶೇಷ ರೋಗ ಗ್ರಸ್ತೆಯಾಗಿದ್ದರೂ * ಅಂತಃಪುರ ' ಕೈ ವ್ಯಾಸಗಳನ್ನು ಬರೆಯುತ್ತಲೇ ಇದ್ದಳು. ಮರಣ ಸಮಯದಲ್ಲಿ ಆಕೆಯು ' ಅಂತಃಪುರ, ” “ಸುಮತೀಸಮಿತಿ ' ಎಂಬ ಎರಡು ಪದಗಳನ್ನು ಉಚ್ಚರಿಸಿ ಅವುಗಳ ಶಾಶ್ವತವನ್ನು ಕೋರುತ್ತ ಪ್ರಾಣ ವನ್ನು ಬಿಟ್ಟಳು. ರುಗ್ಧಶಯ್ಕೆಯಲ್ಲಿ ಇರುವ ಸಮಯದಲ್ಲಿ ಸಹ ಮನೆಗೆ ಬೇಕಾದ ಪದಾರ್ಥಗಳನ್ನು ತಾನೇ ತರಿಸುತ್ತ, ಅಡಿಗೆ ಮಾಡಬೇಕಾದ ಪದಾರ್ಥ ಗಳನ್ನು ತಿಳಿಸುತ್ತ ಮನೆಯಲ್ಲಿರುವವರ ಕ್ಷೇಮವನ್ನು ವಿಚಾರಿಸುತಲಿದ್ದಳು. ತನ್ನ ಬಳಿಯಲ್ಲಿಯೇ ಪುಸ್ತಕವನ್ನೂ ಸೀಸದಕಡ್ಡಿಯನ್ನೂ ಇರಿಸಿಕೊಂಡು ಮನೆಯ, ಆದಾಯವ್ಯಯಗಳನ್ನು ಬರೆಯುತಲಿದ್ದಳು, ಈಕೆಗೆ ಗೃಹಕೃತ್ಯ ದಲ್ಲಿರುವ ಶ್ರದ್ದೆಯೂ, ಶಿಶುಪೋಷಣೆಯಲ್ಲಿರುವ ಜಾಣತನವೂ ವರ್ಣನೀಯ ವಾದುವು. ವನಲತಾದೇವಿಯು ತನ್ನ ಪತಿಯನ್ನು ದೇವರಂತೆಭಾವಿಸಿ ಆತನ ಕೆಲಸ ಗಳನ್ನು ಸೇವಕರಿಂದಮಾಡಿಸದೆ ತಾನೇ ಸ್ವಂತವಾಗಿ ಮಾಡುತಲಿದ್ದಳು. ಆಕೆಯ ನಡತೆಯನ್ನು ನೋಡಿದವರೆಲ್ಲರು ಪತಿಭಕ್ತಿಯನ್ನು ಆಕೆಯಿಂದಲೇ ಕಲಿಯಬೇಕು ಎಂದು ಹೇಳುತಲಿದ್ದರು. ವ್ಯಾಧಿಯಿಂದ ಸ್ವಂತವಾಗಿ ಪತಿಗೆ ಭೋಜನವನ್ನು ಇಡಲು ಅಸಮರ್ಥಳಾಗಿದ್ದರೂ, ಪತಿ ಪುತ್ರರಿಗೆ ತನ್ನ ಸಮಕ್ಷಮ ದಲ್ಲಿ ಭೋಜನವನ್ನು ಆಡಿಸುತಲಿದ್ದಳು, ಈಕೆಯು ಮರಣ ದಿನದಲ್ಲಿ ಈಕೆಯಪತಿಗೆ ಶರೀರವು ಸ್ವಲ್ಪ ಅಸ್ವಸ್ಥವಾಗಿತ್ತು. ಈಕೆಯ ಮರಣಕ್ಕೆ ಅರ್ಧ ಗಂಟೆಗೆ ಪೂರ್ವದಲ್ಲಿ ಪತಿಯು ಬನಾತಿನ ಅಂಗಿಯನ್ನು ಹಾಕಿಕೊಳ್ಳದೆ ಇರುವು ದನ್ನು ನೋಡಿ ನಿಮಗೆ “ ಶರೀರವು ಅಸ್ವಸ್ಥನಾಗಿರುವಾಗ ಬೆಚ್ಚಗಿರುವ ಅಂಗಿಯನ್ನು ಧರಿಸಿಕೊಳ್ಳದೇ ಇರಬಹುದೇ ' ಎಂದು ನುಡಿದು ದಾಸಿಯಿಂದ ಅಂಗಿಯನ್ನು ತರಿಸಿ ಪತಿಯನ್ನು ಧರಿಸಿಕೊಳ್ಳುವಂತೆ ಮಾಡಿದಳು. ತನ್ನ ಮರಣವೇದನೆಯನ್ನು