ವನಲತಾ ದೇವಿ. 4೩೧ ಒಂದು ಮೂಲೆಯಲ್ಲಿ ಇಟ್ಟು ಪತಿ ಕಲ್ಯಾಣವನ್ನೇ ಅಪೇಕ್ಷಿಸುತಲಿದ್ದ ಈ ಪರಮಸಾಧಿಯನ್ನು ಹೇಗೆ ಸ್ತುತಿಸಬೇಕೋ ನಾನು ಅರಿಯೆನು ! ಅನೇಕ ಪುತ್ರ ಪುತ್ರಿಯರನ್ನು ಪಡೆದು, ಅವರನ್ನು ಬೆಳೆಸಿ ದೊಡ್ಡವರನ್ನಾಗಿಮಾಡಿ ತನ್ನ ಶಿಶುಪಾಲನಾ ನೈಪುಣ್ಯವನ್ನು ಲೋಕಕ್ಕೆ ತೋರಲು ಈಕೆಗೆ ಅವಕಾಶವಿಲ್ಲ ದಿದ್ದರೂ, ಈಕೆಯು ಬಹು ಅಕ್ಕರೆಯಿಂದ ಸಾಕಿ ಬಿಟ್ಟು ಹೋದ ಮೂರುವರ್ಷದ ಬಾಲಕನಿಂದ ವನಲತಾದೇವಿಗೆ ತಿಳಿದ ಮಾತೃ ಮಹತ್ವ ಕರ್ತೃತ್ವ ಶಕ್ತಿಯು ಇತರ ಮಾತೆಯರಿಗೆ ತಿಳಿಯುವುದು ದುಸ್ತರವಾದುದು ಎಂದು ತಿಳಿದುಕೊಳ್ಳ ಬಹುದು. ಈ ಮೂರುವರ್ಷದ ಬಾಲಕನು ತಾಯಿಯ ಆಜ್ಞೆಯಂತೆ ನಡೆ ಯುತಲಿದ್ದನು. ವನಲತಾದೇವಿಯು ಮಗನಿಗೆ ಅನೇಕ ನೀತಿಗಳನ್ನು ಕಲಿಸಿ ದ್ದಳು, ಈಕೆಗೆ ತನ್ನ ವ್ಯಾಧಿಯು ನಿವಾರಣೆಯಾಗುವದಿಲ್ಲ ಎಂದು ತಿಳಿದ ಮೇಲೆ, ಒಂದು ದಿವಸ ಯಾರೂ ಇಲ್ಲದ ಸಮಯದಲ್ಲಿ ಮಗನನ್ನು ಕರೆದು, “ ಅಪ್ಪಾ! ನನ್ನ ಶರೀರದಲ್ಲಿ ರೋಗವು ಹೆಚ್ಚಿತು. ಅದು ಇಲ್ಲಿ ವಾಸಿಯಾಗ ಲಾರದು. ನಾನು ಪರಮೇಶ್ವರನ ಸನ್ನಿಧಿಗೆ ಹೋದರೆ ನನ್ನ ಬಾಧೆಯು ನಿವಾ ರಣೆಯಾಗುವುದು, ಅನಂತರ ಇಲ್ಲಿಗೆ ಬರುವೆನು, ನಾನು ಹೋಗುವಾಗ ನೀನು ಅಳದೆ ಸಂತೋಷವಾಗಿ ಬುದ್ಧಿವಂತನಾಗಿರು ” ಎಂದು ಹೇಳಲು ಆ ಬಾಲಕನು, " ಹಾಗೆಯೇ ಆಗಲಿ. ಎಂದನು. ಅನಂತರ ವನಲತಾದೇವಿಯು ೧೯೦೦ ನೆಯ ನವಂಬರ್ ೩ ನೆಯ ತಾರೀಖಿನಲ್ಲಿ ಸ್ವರ್ಗಸ್ಥಳಾದಳು. ಆಕೆ ಗಾಗಿ ಆಕೆಯ ಬಂಧುಗಳೆಲ್ಲರು ದುಃಖಿಸುತಲಿದ್ದರು. ಆದರೆ ತಾಯಿಯ ಮಾತಿ ನಲ್ಲಿ ಸಂಪೂರ್ಣ ವಿಶ್ವಾಸವನ್ನುಳ್ಳ ಆಕೆಯ ಪುತ್ರನು ಮಾತ್ರ ಅಳದೆ, ಗುಲಾಬಿಯ ಪುಷ್ಪಗಳನ್ನು ತಂದು ತಾಯಿಯ ಶವದಮೇಲಿರಿಸಿ, “ ಅಮ್ಮಾ! ದೇವರ ಬಳಿಗೆ ಹೋಗಿ ಆರೋಗ್ಯವನ್ನು ಹೊಂದಿ ಬಾ.” ಎಂದು ಹೇಳಿದನು. ಆಕೆಯನ್ನು ತೆಗೆದುಕೊಂಡು ಹೋದಮೇಲೆ ಅಳುವವರನ್ನು ನೋಡಿ, ಆ ಬಾಲಕನು, “ ನೀವೇಕೆ ಅಳುವಿರಿ ? ನಮ್ಮ ತಾಯಿಯ ವ್ಯಾಧಿಯು ಇಲ್ಲಿ ವಾಸಿಯಾಗಲಿಲ್ಲ ವಾದಕಾರಣ ದೇವರ ಬಳಿಗೆ ಹೋಗಿದಾಳೆ. ಅಲ್ಲಿ ವಾಸಿಮಾಡಿಕೊಂಡು ಮರಳಿ ಬರುವಳು. ಹೀಗೆಂದು ನನ್ನೊಡನೆ ಹೇಳಿದಳು ” ಎಂದು ತನ್ನ ಮುದ್ದು ಮಾತು ಗಳಿಂದ ನುಡಿದನು. ವನಲತಾದೇವಿಯ ಮರಣಕ್ಕೆ ಆಕೆಯ ಬಂಧುಗಳೂ ಆಕೆಯ ಪರಿಚಯವುಳ್ಳವರೆಲ್ಲರೂ ಬಹಳ ದುಃಖಿಸಿದರು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೫೬
ಗೋಚರ