ಗಣಪಾಂಒ.
- --- -
ಈಕೆಯು ಬೇಟರಾಜನ ಪತ್ನಿ, ಗಣಪತಿದೇವನ ಪುತ್ರಿ. ಈ ಗಣಪತಿ ದೇವನು ಕ್ರಿ.ಶ. ೧೨೫೭ ನೆ ಇಸವಿಯಿಂದ ೧೨೯೨ ನೆ ಇಸವಿಯ ವರೆಗು ಓರುಗಂಟ ರಾಜ್ಯವನ್ನು ಪಾಲಿಸಿದ ರಾಜನಾಗಿದ್ದ ಪಕ್ಷದಲ್ಲಿ ಈಕೆಯು ರುದ್ರಮ ದೇವಿಯ ಪುತ್ರಿ ಎಂದು ಊಹಿಸಲು ಅವಕಾಶವಿತ್ತು. ಆದರೆ ಇದಕ್ಕೆ ಪ್ರಬಲ ನಿದರ್ಶನಗಳಾವುವೂ ಇಲ್ಲದುದರಿಂದ ಈಕೆಯು ನಿಶ್ಚಯವಾಗಿ ರುದ್ರಮದೇವಿಯ ಪುತ್ರಿ ಎಂದು ಹೇಳಲಾಗುವದಿಲ್ಲ. ಈಕೆಯು ತನ್ನ ಪತಿಯ ಅನಂತರ ಆರುಸಾವಿರ ಗ್ರಾಮಗಳನ್ನು ಬಹು ಚೆನ್ನಾಗಿ ಪಾಲಿಸಿದಳು. ಗಣಪಾಂಬನ ಧರ್ಮಕೃತ್ಯಗಳನ್ನು ತಿಳಿಸುವ ಒಂದು ಶಿಲಾಶಾಸನವು ಕೃಷ್ಣಾ ಮಂಡಲಕ್ಕೆ ಸೇರಿದ ಗುಂಟೂರು ತಾಲೂಕಿನಲ್ಲಿದೆ. ಅದರೊಳಗಿರುವ ಕೆಲವಿಷಯಗಳನ್ನು ಕೆಳಗೆ ಬರೆದಿರುವೆನು. - * ಬಹು ಪ್ರಸಿದ್ದಿಯನ್ನು ಪಡೆದ ಕಾಕತೀಯ ವಂಶದಲ್ಲಿ ಅನೇಕ ಪ್ರಭು ಗಳು ರಾಜ್ಯವನ್ನಾಳಿದ ಮೇಲೆ ವೈರಿ ಭೀಕರನಾದ ಬೇಟರಾಜನು ಸಿಂಹಾಸನಾ ರೂಢನಾದನು. ಶಿವನಿಗೆ ಪಾರ್ವತಿಯಂತೆಯೂ, ವಿಷ್ಣುವಿಗೆ ಲಕ್ಷ್ಮಿ ಯಂತೆಯೂ ಬೇಟರಾಜನಿಗೆ ಗಣಪಾ೦ಬನು ಧರ್ಮ ಪತ್ನಿಯಾದಳು ಈತನು ಧರ್ಮಕಟಕ ಪುರಿಯನ್ನು ಬಹು ಯೋಗ್ಯವಾಗಿ ಪಾಲಿಸಿ ಕೀರ್ತಿರೇಷನಾದನು. ಅನಂತರ ಆತನ ಪತ್ನಿಯಾದ ಗಣಪಾಂಬೆಯು ಸಿಂಹಾಸನವನ್ನು ಏರಿದಳು. ಈಕೆಯು ಪತಿಯ ಸುಗತಿಯನ್ನು ಅಭಿಲಷಿಸಿ, ಆತನ ಹೆಸರಿನಲ್ಲಿ `ಧನ ಕಟಕ ಪುರಿಯಲ್ಲಿ ಒಂದು ದೇವಾಲಯವನ್ನು ನಿರ್ಮಿಸಿದಳು. ಈ ಯುದ್ದೇಶದಿಂದಲೇ ಚಿನ್ನದ ಕಳಶವುಳ್ಳ ಬೇರೊಂದು ದೇವಾಲಯವನ್ನು ಕಟ್ಟಿಸಿ, ಅದರಲ್ಲಿ ಬೇಟೇಶ್ವರ ಎಂಬ ಲಿಂಗವನ್ನು ಪ್ರತಿಷ್ಟಿ ಸಿದಳು, ದೇವಾಲಯಕ್ಕಾಗಿ ಈ ದೇವಿಯು ಫಲವಂತವಾದ ಬೀನದೀವಿ ಎಂಬ ಗ್ರಾಮವನ್ನು ಕೊಟ್ಟಳು. ಈ ಮಹನೀಯಳು ಧರ್ಮಕಟಕ ಪುರಿಯಲ್ಲಿ ೧೨ ಜನ ಭೂಸುರರಿಗೆ ೧೨ ಭೂ ವಸತಿಗಳನ್ನೂ, ೧೨ ಗೃಹಗಳನ್ನೂ ದಾನಮಾಡಿದಳು, ಮತ್ತು ಈಕೆಯ ತಂದೆಯ ಹೆಸರಿನಲ್ಲಿ ಗಣಪೇಶ್ವರಾಲಯ ಎಂಬ ಶಿವಾಲಯವನ್ನು ಕಟ್ಟ ಸಿದಳು, ಈ ದೇವಸ್ಥಾನಕ್ಕಾಗಿ ಚಿ೦ತವಾಡ ಎಂಬ ಗ್ರಾಮವನ್ನು ಕೊಟ್ಟಳು. ಈಕೆಯ ಹಸ್ತಗಳು ಸತತವು ಶಿವಾರ್ಚನೆಯಲ್ಲಿಯೇ ವಿನಿಯೋಗಿಸಲ್ಪಟ್ಟವು. ಶಿವ ಮಹಾತ್ಮವನ್ನು ಪ್ರಕಟಿಸುವ ಶ್ಲೋಕಗಳು ಈಕೆಗೆ ಆನಂದದಾಯಕ