ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರಿತ್ರೆಗಳು ಚೆನ್ನಾಗಿ ತಿಳಿಯದ ಕೆಲ ಸ್ತ್ರೀಯರ ವೃತ್ತಾಂತಗಳು, ೩೩೩ ಗಳಾಗಿದ್ದವು. ಈ ರಾಣಿಗೆ ವೇದಗಳಲ್ಲಿ ಸಂಪೂರ್ಣ ವಿಶ್ವಾಸ ವಿದ್ದುದರಿಂದಲೇ ಈಕೆಗೆ ವಿಶಾಲ ರಾಜ್ಯ ಕ್ಷೇಶಗಳಿದ್ದರೂ ಆನಂದದೊಡನೆ ಕಾಲವನ್ನು ಕಳೆಯುತ ಲಿದ್ದಳು. ಎರಡನೆಯ ಪಾರ್ವತಿ ಎನಿಸುವ ಈಕೆಯ ಮಹಾತ್ಯವನ್ನು ಯಾರು ವರ್ಣಿಸ ಬಲ್ಲರು ? ” ಈ ಮಹನೀಯಳ ಚರಿತ್ರೆಯು ಇದಕ್ಕಿಂತಲು ಹೆಚ್ಚಾಗಿ ತಿಳಿಯದ ಕಾರಣ ಇಲ್ಲಿಗೆ ಮುಗಿಸಬೇಕಾಯಿತು. → - 7 ಚು ತ್ರೆಗಳು ಚೆನ್ನಾಗಿ ತಿಳಿಯದ ಕೆಲ ಸ್ತ್ರೀಯರ ವೃತ್ತಾಂತಗಳು.


:೦:------

೧, ಭಾಮತಿ – ಭಾಗೀರಥೀ ತೀರದಲ್ಲಿರುವ ಪಾಟಲೀ ಪುತ್ರ (ಪಾಟಾ) ಎಂಬ ನಗರದಲ್ಲಿ ವಾಚಸ್ಪತಿ ಎಂದು ಕೀರ್ತಿಯನ್ನು ಪಡೆದ ಒಬ್ಬ ವಿದ್ವಾಂಸನು ವಾಸವಾಗಿದ್ದನು. ಈತನ ಭಾರ್ಯೆಯು ಭಾಮತಿ. ಈಕೆಯು ವಿಶೇಷ ವಿದ್ಯಾವತಿಯಾಗಿದ್ದಳು ವಾಚಸ್ಪತಿಕೃತವಾದ , ಕಲ್ಪತರು ಎಂಬ ಗ್ರಂಥಕ್ಕೆ ಈಕೆಯು ಟೀಕೆಯನ್ನು ಬರೆದಳು. ೨, ಆಕಾ, - ಈ ಭಕ್ತಳು ರುದ್ರಾಜೀ ಪಂತ್ ದೇಶಪಾಂಡೇ ಕರ್ಹಾಡ್ ರ್ಕಯವರ ಪುತ್ರಿ, ಮಹಾರಾಷ್ಟ್ರರಾಜ್ಯ ಸ್ಥಾಪಕನಾದ ಶಿವಾಜಿಗೆ ಗುರುವಾದ ರಾಮದಾಸಸ್ವಾಮಿಯ ಶಿಷ್ಯಳು. ಆಕಾ ಬಾಲವಿತ೦ತು. ಈಕೆಗೆ ಸ್ವಲ್ಪ ಜ್ಞಾನ ಉಂಟಾದಮೇಲೆ ತನ್ನ ದುಃಖಸಮುದ್ರಕ್ಕೆ ತೀರವನ್ನು ಕಾಣದೆ ಪರಮಾರ್ಥ ವಿಚಾರವನ್ನು ಮಾಡುತ್ತ, ತಂದೆಯ ಆಜ್ಞೆಯನ್ನು ಪಡೆದು ರಾಮದಾಸಸ್ವಾಮಿ ಯಲ್ಲಿ ಉಪದೇಶವನ್ನು ಹೊಂದಿದಳು. ಉಸದೇಶವಾದ ಮೊದಲ್ಗೊಂಡು ಈಕೆಯು ಗುರುಸನ್ನಿಧಾನದಲ್ಲಿಯೇ ಇದ್ದು ಆತನ ಸೇವೆಯನ್ನು ಮಾಡುತ ಲಿದ್ದಳು. ರಾಮದಾಸಸ್ವಾಮಿಯ ಅನಂತರ ಈಕೆಯು ವರಳೀ ಕಿಲ್ಲೆಯಲ್ಲಿ ಗುರು * ವಿಗೆ 'ಸಮಾಧಿಯನ್ನೂ, ಸಭಾಮಂಟಪವನ್ನೂ ಕಟ್ಟಿಸಿದಳು, ಆಚಾರ್ಯರ ಅನಂತರ ಆತನ ಸೋದರ ಪುತ್ರನನ್ನು, ಚಾಪಲ ಎಂಬ ಗ್ರಾಮದಲ್ಲಿರುವ ಆತನ ಪೀಠದಲ್ಲಿರಿಸಿ, ಆಪೀಠ ಸಂಸ್ಥಾನವನ್ನು ಈಕೆಯೇ ಮುವ್ವತ್ತಾರು ವರ್ಷ ಗಳು ಪಾಲಿಸಿದಳು, ಈಕೆಯು ಶಾ.. ೧೬೪೩ ನೆಯ ವರ್ಷದಲ್ಲಿ ಸಿದ್ದಿಯನ್ನು ಹೊಂದಿದಳು. ೩ ಕಾ ನೂಪಾತ್ರಾ,- ಈಕೆಯು ವೇಶ್ಯಾಕುಲದಲ್ಲಿ ಹುಟ್ಟಿದವಳಾ ದರೂ ಆ ಕುಲವನ್ನು ತಿರಸ್ಕರಿಸಿ, ಪಾತಿವ್ರತ್ಯದಲ್ಲಿ ಚಿತ್ರವನ್ನು ನಿಲ್ಲಿಸಿ, ಭಕ್ತಾ