444 ಬ ಆಬಲಾ ಸಚ್ಚರಿತ್ರ ರತ್ನ ಮಾಲೆ. ಗ್ರೇಸರಳಾದುದರಿಂದ ಸರ್ವಜನರಿಗೂ ಪೂಜ್ಯಳಾದಳು. ಮಂಗಳವೇಢ ಎಂಬ ಗ್ರಾಮದಲ್ಲಿ ಶ್ಯಾಮ ಎಂಬ ಒಬ್ಬ ವೇಶ್ಯು ಇದ್ದಳು. ಆಕೆಗೆ ಕಾನೂಪಾತ್ರಾ ಒಬ್ಬಳೇ ಮಗಳು. ಈಕೆಯು ಬೆಳೆಯುತ್ತ ಬೆಳೆಯುತ್ತ ಅಸಮಾನ ಸೌಂದರ್ಯ ವತಿಯೂ ಸಂಗೀತ ವಿದ್ಯಾ ಪ್ರವೀಣಳೂ ಆದಳು, ಈಕೆಯ ರೂಪವೂ, ಸಂಗೀತವೂ ಎಲ್ಲೆಲ್ಲಿಯೂ ಹರಡಿಕೊಂಡಿತು, ಈಕೆಯು ಯುಕ್ತ ವಯಸ್ಕಳಾದ ಮೇಲೆ ಈಕೆಯ ತಾಯಿಯು ಮಗಳನ್ನು ಬೇದರಿಗೆ ಕರೆದುಕೊಂಡುಹೋಗಿ ಬಾದಷಹನಿಗೆ ಕೊಡಬೇಕು ಎಂದು ಎಣಿಸಿದಳು, ಕಾನೂ ಪಾತ್ರೆಯು ತಾಯಿಯ ಅಭಿಪ್ರಾಯಕ್ಕೆ ಸಮ್ಮತಿಸದೆ, ಪಂಡರಪುರಕ್ಕೆ ಹೋಗಿ, ವಿಠಲದೇವಾಲಯವನ್ನು ಪ್ರವೇಶಿಸಿ, ವಿಠಲನನ್ನು ಸ್ತೋತ್ರಮಾಡುತಲಿದ್ದಳು. ಆಗ ಈಕೆಯ ಪ್ರವರ್ತನೆ ಯನ್ನು ನೋಡಿದವರೆಲ್ಲರು ಆಶ್ಚರ್ಯಯುತರಾದರು. ದಿನ ಕ್ರಮೇಣ ಈಕೆಯ ವಿಷಯವು ಬೀದರ್ ಬಾದಷಹನಿಗೆ ತಿಳಿದು, ಆತನು ಕಾನೂಪಾತ್ರೆಯನ್ನು ಕರೆತರಲು ಭಟರನ್ನು ಕಳುಹಿಸಿದನು. ಅವರು ಪಂಡರಪುರಕ್ಕೆ ಹೋಗಿ, ಆಕೆಗೆ ರಾಜಾಜ್ಞೆಯನ್ನು ತಿಳಿಸಿದರು. ಆಕೆಯು ವಿಠಲನನ್ನು ದರ್ಶಿಸಿ ಬರುವೆನು ಎಂದು ಹೇಳಿ ಗರ್ಭಾಲಯವನ್ನು ಪ್ರವೇಶಿಸಿ ಸ್ವಾಮಿಯನ್ನು ಬಹುವಿಧವಾಗಿ ಪ್ರಾರ್ಥಿಸುತ್ತ ಅಲ್ಲಿಯೇ ಪ್ರಾಣವನ್ನು ಬಿಟ್ಟಳು. ೪, ಜನಾಬಾಯಿ.- ಈಕೆಯು ಶೂದ್ರಳು, ಈಕೆಯು ಮಹಾರಾಷ್ಟ್ರ ಮಹಾಭಕ್ತರಲ್ಲಿ ಒಬ್ಬಳು. ವಿಖ್ಯಾತನಾದ ನಾಮದೇವ ಎಂಬ ಭಕ್ತನ ಮನೆ ಯಲ್ಲಿ ಈಕೆಯು ಪರಿಚಾರಿಕೆಯಾಗಿ ಕೆಲಸವನ್ನು ಮಾಡಿಕೊಂಡಿದ್ದಳು, ಈಕೆಯು ಜನ್ಮವನ್ನೆಲ್ಲ ಕನ್ಯಾತ್ವದಲ್ಲಿಯೇ ಕಳೆದಳು, ಈಕೆಯಿಂದ ರಚಿತವಾದ ಅನೇಕ ಮಹಾರಾಷ್ಟ್ರ ಪದ್ಯಗಳನ್ನು ಭಗವದ್ಭಕ್ತರು ಬಹು ಆದರದೊಡನೆ ಪಠಿಸುತ್ತಾರೆ. ೫, ಪ್ರೇಮಾಬಾಯಿ.-ಈ ಸಾಧಿಯ ನಿವಾಸಸ್ಥಳವು ತಿಳಿಯದು. ಈಕೆಯು ಶಾ.ಶ. ೧೯ ನೆಯ ಶತಾಬ್ದ ದಲ್ಲಿದ್ದಳು ಎಂದು ಕೆಲವರು ಹೇಳುತ್ತಾರೆ. ಈಕೆಯ ಹೆಸರು ಭಕ್ತ ವಿಜಯದಲ್ಲಿದೆ. ಈ ಯುವತಿಯು ಕೃಷ್ಣಭಕ್ತಳಾಗಿ ಸದಾ ಭಾಗವತ ಶ್ರವಣವನ್ನು ಮಾಡುತಲಿದ್ದಳು, ಈಕೆಯು ರಚಿಸಿದ ಅಭಂಗಗಳು,. ಕೀರ್ತನೆಗಳು ಬಹು ಚನ್ನಾಗಿವೆ. ಈಕೆಯ ಮಗನು ಸಹ ಈಕೆಯಂತೆಯೆ ಭಗವದ್ಭಕ್ತನು. ಒಂದು ಸಮಯದಲ್ಲಿ ಈಕೆಯು ಪುತ್ರನಿಗೆ ಪರಮಾರ್ಥೋಪ ದೇಶವನ್ನು ಮಾಡುತ್ತ ಪರಮಪದವನ್ನು ಸೇರಿದಳು. ೬, ಬಾಯಿಜಾಬಾಯಿ ಸಿಂಧೆ-ಸಿಂಧೆ ವಂಶೀಕನಾದ ದೌಲತ್ ರಾವ್ ಸಿಂಧೆಗೆ ಈಕೆಯು ಪತ್ನಿ, ಅಹಲ್ಯಾಬಾಯಿ ಹೋಳಕರೀಣ್ಯವರ ಕೀರ್ತಿಯಂತೆ ತನ್ನ ಕೀರ್ತಿಯು ಶಾಶ್ವತವಾಗಿರಬೇಕು ಎಂದು ಈಕೆಯು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೫೯
ಗೋಚರ