ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣೇಭವಾನಿ. ೧೩ ಯಂತೆ ಭಾವಿಸಿ “ಮಾತೃ ಶ್ರೀ ಲಕ್ಷ್ಮಮ್ಮಣ್ಣಿಯವ' ರೆಂದು ಈಗಲೂ ಕರೆ ಯುತ್ತಾರೆ. ಆಹಾ! ಇಂತಹ ಸ್ತ್ರೀರತ್ನಗಳು ಭರತಖಂಡಕ್ಕೆ ಭೂಷಣಗಳಲ್ಲವೆ! ರಾಣ'ಭವಾನಿ. “ ಗುಣಾಃಪೂಜಾಸ್ಥಾನಂಗುಣಿಷುನಚಲಿಂಗಂನಚವಯಃ'-ಭವಭೂತಿ. ಪೂರ್ವಕಾಲದಲ್ಲಿ, ಉತ್ತರಹಿಂದೂಸ್ಥಾನದಲ್ಲಿ ರಾಜಕಾರ್ಯಧುರಂಧರತ್ವ ವನ್ನು ವಹಿಸಿದ ನಾರೀಮಣಿಗಳಲ್ಲಿ ರಾಣೀಭವಾನಿಯು ಅಗ್ರಗಣ್ಯೆಂದು ನುಡಿಯ ಬೇಕು, ಈಕೆಯು ಬಂಗಾಳಾದೇಶದಲ್ಲಿ ರುವ ರಾಜಶಾಯಿ ಪ್ರಾಂತ್ಯಕ್ಕೆ ಸೇರಿದ ಛಾತೀಮೆಂಬ ಗ್ರಾಮದ ನಿವಾಸಿ ಆತ್ಮಾರಾಂ ಚೌಧುರಿಯ ಮಗಳು, ಈಕೆಯ ವಾರ್ಧಕ್ಯದಲ್ಲಿ ಈಕೆಯನ್ನು ನೋಡಿದವರು ಈಗಲೂ ಬಂಗಾಳೆಯಲ್ಲಿ ರುವರೆಂದು ಹೇಳುತ್ತಾರೆ. (ಕ್ರಿ. ಶ. ೧೮೯೮.) ಈಕೆಯ ತಂದೆಯು ವಿಶೇಷ ಐಶ್ವರ್ಯವಂತ ನಲ್ಲದಿದ್ದರೂ ಈಕೆಯ ಅಸಮಾನ ಸೌಂದರವನ್ನೂ, ಸದ್ಗುಣಗಳನ್ನೂ ನೋಡಿ, ನಾಟೂರೂ ಸಂಸ್ಥಾನಾಧಿಪತಿಯಾದ ರಾಜಾರಾಮಾಜೀವನ್ ಯವರು ಈಕೆಯನ್ನು ತಮ್ಮ ಮಗನಿಗೆ ವಿವಾಹಮಾಡಿಕೊಂಡರು. ಈಕೆಯು ಬಾಲ್ಯದಲ್ಲಿಯೇ ವಿದ್ಯೆ ಯನ್ನು ಕಲಿತುಕೊಂಡಳೆಂದು ಕೆಲವರು ಬರೆದಿರುವರು. ದೈವಭಕ್ತಿ, ಧಬುದ್ಧಿ, ಕಾರ್ಯನಿರ್ವಾಹಕತ್ವವೆಂಬ ಈ ಗುಣ ತ್ರಯವು ಈ ವನಿತೆಯಲ್ಲಿ ಬಾಲ್ಯದಿಂದಲೂ ನೆಲೆಗೊಂಡಿದ್ದು ವು, ಪತಿಯು ರಾಜ್ಯ ಭಾರವನ್ನು ವಹಿಸಿದ್ದಾಗಲೂ, ಪತಿಯ ಮರಣಾನಂತರ ರಾಜ್ಯ ಪಾಲನೆಯನ್ನು ಮಾಡುತಲಿದ್ದಾಗಲೂ ಈ ಲಲನೆಯು ತನ್ನ ಸುಗುಣಗಳಿಂದ ಪ್ರಜೆಗಳನ್ನು ಸಂತೋಷಗೊಳಿಸಿದಳು. ಆದ್ದರಿಂದಲೇ ಈಕೆಯ ಕೀರ್ತಿಯು ಶಾಶ್ವತವಾಗಿದೆ. ಈಕೆಯು ಆಳುತಲಿದ್ದ ನಾಟೂರು ಸಂಸ್ಥಾನವನ್ನು ಪಡೆಯುವದರಲ್ಲಿ ಈಕೆಯ ದೊಡ್ಡ ಮಾವನಾದ ರಘುನಂದನರಾಯನು ತೋರಿದ ಧೈರ್ಯಚಾತುರ್ಯಗಳು ವರ್ಣನೀಯಗಳು, ರಾಣಿಭವಾನಿಯು ಹೊಂದಿದ ಅತ್ಯಂತ ಕೀರ್ತಿಗೆ ಮೂಲ ಕಾರಣವಾದ ಈ ಐಶ್ವರ್ಯ ಪ್ರಾಪ್ತಿಯನ್ನು ಕುರಿತು ಇಲ್ಲಿ ಸಂಗ್ರಹವಾಗಿ ಬರೆಯು ವೆನು. ಕಾಮದೇವನೆಂಬ ಬ್ರಾಹ್ಮಣನಿಗೆ ರಘುನಂದನ, ರಾಮಜೀವನ ಎಂಬ ಇಬ್ಬರು ಪುತ್ರರಿದ್ದರು. ಅವರು ದರ್ಪನಾರಾಯಣನೆಂಬ ಒಬ್ಬ ಚಿಕ್ಕ ಜಮಿಾನು ದಾರನ ಹತ್ತಿರ ನೌಕರಿಯನ್ನು ಮಾಡುತಲಿದ್ದರು. ಅವರಿಬ್ಬರಲ್ಲಿ ರಘುನಂದನನು