ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಮನಸ್ಸಿಗೆ ಸಮಾಧಾನವನ್ನು ಉಂಟುಮಾಡಲು ಅನೇಕ ಪುರಾಣ ವಚನಗಳನ್ನೂ, ಕಲ್ಪಿತ ಕಥೆಗಳನ್ನೂ, ವೇದಾಂತವಾಕ್ಯಗಳನ್ನೂ ಹೇಳುತ್ತ, ಆತನ ದುಃಖವನ್ನು ಕಡಮೆಮಾಡುತಲಿದ್ದಳು. ತನಗೆ ವಿಶೇಷ ದುಃಖ ಉಂಟಾದರೆ ತಾನೊಬ್ಬಳೇ ಏಕಾಂತದಲ್ಲಿ ದುಃಖಿಸಿ ಪತಿಯು ಬರುವ ಸಮಯಕ್ಕೆ ತಾನು ಸಮಾಧಾನವಾಗಿರು ವೆಂತೆ ಕಂಡುಬರುತಲಿದ್ದಳು! ೧೧, ಲಕ್ಷ್ಮಮ್ಮ,-ಈಕೆಯು ನಾಯಡು (ಇವರನ್ನು ಆಂಧ್ರ ದೇಶದಲ್ಲಿ ಶೂದ್ರರಲ್ಲಿ ಉತ್ತಮರಾದವರು ಎಂದು ಎಣಿಸುತ್ತಾರೆ) ಕುಲದಲ್ಲಿ ಜನ್ನಿಸಿದಳು, ಈಕೆಯ ನಿವಾಸಸ್ಥಳವು ಕೃಷ್ಣಾ ಮಂಡಲದಲ್ಲಿರುವ ಲಿಂಗಾಲ ಎಂಬ ಹಳ್ಳಿ, ಈಕೆಯು ಶೂದ್ರಳಾದರೂ ಬ್ರಾಹ್ಮಣ ಸ್ತ್ರೀಯರಿಗಿಂತಲೂ ಹೆಚ್ಚಾಗಿ ಪಾತಿವ್ರತ್ಯ ಧರ್ಮಗಳನ್ನು ಪಾಲಿಸುತಲಿದ್ದಳು ಲಕ್ಷ್ಮಮ್ಮನು ತನ್ನ ಸದ್ಗುಣ ಗಳಿಂದ ಪತಿಗೆ ಅತ್ಯಂತ ಪ್ರಿಯಳಾಗಿದ್ದಳು, ಗ್ರಾಮವಾಸಿಗಳು ಈಕೆಯನ್ನು ತಮ್ಮ ಭಾಗ್ಯದೇವತೆ ಎಂದು ಭಾವಿಸುತಲಿದ್ದರು. ಈಕೆಯ ಕೀರ್ತಿಯನ್ನು ಕೇಳಿ ಈಕೆಯ ಅತೆ ನಾದಿನಿಯರಿಗೆ ಅತ್ಯಂತ ಕೋಧ ಉಂಟಾಗಿ, ಅವರು ಅನೇಕ ತಂತ್ರಗಳಿಂದ ಲಕ್ಷ್ಮಮ್ಮನಮೇಲೆ ಅನೇಕ ದೋಷಾರೋಪಣೆಗಳನ್ನು ಮಾಡಿ ಆಕೆಯ ಪತಿ ಯಿಂದಲೇ ಕೊಲ್ಲಿಸಿದರು ಎಂದು ಹೇಳುತ್ತಾರೆ, ಆದರೆ ಅವರು ಆಕೆಯನ್ನು ಈ ವಿಧವಾಗಿ ಕೊಂದದ್ದರಿಂದ ಆಕೆಯ ನಶ್ವರವಾದ ದೇಹವು ಮಾತ್ರ ನಾಶ ವಾಯಿತು. ಆಕೆಯ ಅಖಂಡ ಕೀರ್ತಿಯು ಶಾಶ್ವತವಾಗಿನಿಂತಿತು. ಪ್ರಜೆಗಳು ಲಕ್ಷ್ಮಮ್ಮನು ಪಾತಿವ್ರತ್ಯಕ್ಕಾಗಿ ಪ್ರಾಣವನ್ನು ಕೊಟ್ಟ ದೇವಿ ಎಂದು ನಂಬಿ ಆಕೆಯ ಪ್ರತಿಮೆಯನ್ನು ಒಂದು ಆಲಯದಲ್ಲಿ ಸ್ಥಾಪಿಸಿ ಈಗಲೂ ಪೂಜಿಸುತ "ಲಿದಾರೆ. ಆ ಗ್ರಾಮದಲ್ಲಿ ಆಕೆಯ ಹೆಸರಿನಲ್ಲಿ ಪ್ರತಿ ವರ್ಷದಲ್ಲಿಯು ಜಾತ್ರೆಯು ನಡೆಯುತ್ತದೆ. ಈಕೆಯು ಪುಣ್ಯಲೋಕವನ್ನು ಹೊಂದಿ ಸುಮಾರು ೫೦ ವರ್ಷ ಗಳಾದವು. - ೧೨, ಲೀಲಾವತಿ,ಈಕೆಯು ಭೋಜರಾಜನ ಪತ್ನಿ, ಭೋಜರಾಜನ ಪತ್ನಿಯ ಹೆಸರು ಲೀಲಾವತಿ ಎಂದು ಕೆಲವರೂ, ಭಾನುಮತಿ ಎಂದು ಕೆಲವರೂ ನುಡಿಯುತ್ತಾರೆ. ಈ ಎರಡು ನಾಮಗಳು ಒಬ್ಬ ಸ್ತ್ರೀಗೆ ಇದ್ದಿತೋ, ಅಥವಾ ಈ ನಾಮಗಳುಳ್ಳ ಇಬ್ಬರು ಸ್ತ್ರೀಯರು ಭೋಜರಾಜನಿಗೆ ಪತ್ನಿಯರಾಗಿದ್ದರೋ ತಿಳಿ ಯದು, ಆದರೆ ಭೋಜರಾಜನಿಗೆ ಗಾರಡಿವಿದ್ಯೆಯಲ್ಲಿ • ಅಪಾರಪಾಂಡಿತ್ಯವುಳ್ಳ ಒಬ್ಬ ಪತ್ನಿಯು ಇದ್ದಳೆಂಬುದುಮಾತ್ರ ನಿಶ್ಚಯ. ಈಗಲೂ ಗಾರಡಿಯವರು ತಮ್ಮ ಆಟವನ್ನು ಪ್ರಾಂರಭಿಸುವಾಗ ಆಕೆಯನ್ನು ಪ್ರಾರ್ಥಿಸುತ್ತಾರೆ. ಭೋಜಪ್ರಬಂಧ ದಿಂದ ಭೋಜರಾಜನ ಪತ್ನಿಯು ದೊಡ್ಡ ವಿದುಷಿಯಾಗಿದ್ದಳು ಎಂದು ತಿಳಿಯ ಬರುತ್ತದೆ. ಆಕೆಯ ಆಜ್ಞೆಯಿಂದಲೆ ಭೋಜರಾಜನ ರಾಜ್ಯದಲ್ಲೆಲ್ಲ ಬಾಲಿಕಾಪಾಠ ಶಾಲೆಗಳು ಸ್ಥಾಪಿತವಾಗಿದ್ದವು. ಕ