ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಅಬಲಾ ಸಚ್ಚರಿತ್ರ ರತ್ನ ಮಾಲೆ. ಸೂಕ್ಷಬುದ್ಧಿಯುಳ್ಳವನಾಗಿದ್ದನು, ಆ ಜಮಾನುದಾರನು ರಘುನಂದನನ ಸೂಕ್ಷ, ಬುದ್ಧಿಗೆ ಮೆಚ್ಚಿ, ಮುರ್ಷಿದಾಬಾದು ನವಾಬನ ದರ್ಬಾರಿನಲ್ಲಿ, ಆತನನ್ನು ತನ್ನ ಕಡೆಯ ವಕೀಲನನ್ನಾಗಿ ನಿಯಮಿಸಿದನು. ಆ ದರ್ಬಾರಿನಲ್ಲಿರುವವರೆಲ್ಲರೂ ಆತ ನನ್ನು ವಿಶೇಷವಾಗಿ ಸನ್ಮಾನಿಸುತಲಿದ್ದರು. ದಿವಾನನು ಸಹ ಈತನ ಸದ್ದು ಣ ಗಳಿಂದ ಪ್ರೀತನಾಗಿ ತನ್ನ ಕೈಮುದ್ರೆಯನ್ನೂ ಈತನಿಗೆ ಕೊಡುತಲಿದ್ದನು. ಈ ಸಮಯದಲ್ಲಿ ಮುರ್ಷಿದಾಬಾದು ನವಾಬನಿಗೆ ವಿಶೇಷ ದ್ರವ್ಯವು ಬೇಕಾ ದುದರಿಂದ ಆತನು ಭಂಡಾರದಲ್ಲಿರುವ ಹಣವೆಲ್ಲವನ್ನೂ ವ್ಯಯಮಾಡಿದನು. ಆ ಹಣವು ಪುನಹ ಭಂಡಾರವನ್ನು ಸೇರುವ ಮಾರ್ಗವು ಕಾಣಬರಲಿಲ್ಲವಾದುದರಿಂದ, ಡಿಲೀಶ್ವರನು ತನ್ನನ್ನು ರಾಜಭ್ರಷ್ಟನನ್ನಾಗಿ ಮಾಡುವನೆಂದು ನವಾಬನು ಭೀತ ನಾಗಿ ಸುಳ್ಳು ಲೆಕ್ಕಗಳನ್ನು ಬರೆದು ಡಿಲ್ಲಿಗೆ ಕಳುಹಿಸಬೇಕೆಂದು ನಿಶ್ಚಯಿಸಿದನು. ಆದರೆ ರಘುನಂದನನು ಇಂತಹ ನೀತಿದೂರವಾದ ಕಾರ್ಯವನ್ನು ಮಾಡಲೊಪ್ಪದೆ, ತಾನು ಡಿಲ್ಲಿಗೆ ಹೋಗಿ ಸುಳ್ಳು ಲೆಕ್ಕಗಳಿಲ್ಲದೇ ಡಿಲೀಶ್ವರನನ್ನು ಸಮಾಧಾನಗೊಳಿಸಿ ಬರುವೆನೆಂದು ನವಾಬನೊಡನೆ ನುಡಿದನಂತೆ. ಅದರಂತೆಯೇ ನವಾಬನು ರಘು ನಂದನನ್ನು ಡಿಲ್ಲಿಗೆ ಕಳುಹಲು, ಆತನು ತನ್ನ ವಾಕ್ಚಾತುರ್ಯದಿಂದ ಬಾದಶಹ ನನ್ನು ಸಮಾಧಾನಗೊಳಿಸಿ ಮುರ್ಷಿದಾಬಾದಿಗೆ ಬಂದನಂತೆ. ಅಂದಿನಿಂದಲೂ ನವಾಬನು ರಘುನಂದನನಿಗೆ ದೊಡ್ಡ ದೊಡ್ಡ ಅಧಿಕಾರಗಳನ್ನು ಕೊಟ್ಟು ಕಡೆಗೆ ದಿವಾನ್ ಕೆಲಸವನ್ನು ಮತ್ತು 'ರಾಯ ' ಎಂಬ ಬಿರುದನ್ನೂ ಇತ್ಯನು. ಹೀಗೆ ಪೂರ್ಣಾಧಿಕಾರವು ದೊರೆತ ಮೇಲೆ ಆತನು ತನ್ನ ತಮ್ಮನಿಗೆ ಎರಡು ಕೋಟಿ ರೂಪಾಯಿಗಳ ಬೆಲೆಬಾಳುವ ಜಮಿಾನನ್ನು ಕೊಡಿಸಿದನು. ಕೆಲವು ದಿವಸಗಳಿಗೆ ನವಾಬನು ರಾಮಜೀವನಿಗೆ 'ರಾಜಾ' ಯೆಂಬ ಬಿರುದನ್ನು ಕೊಟ್ಟನು. ರಾಜಾ ರಾಮಜೀವನಿಗೆ ಇಬ್ಬರು ಪುತ್ರರು ಜನ್ನಿಸಿದ್ದರು. ಅವರಲ್ಲೊಬ್ಬನು ಶೈಶವದಲ್ಲಿ ಯೇ ಲೋಕಾಂತರವನ್ನೈದಿದನು. ಎರಡನೆಯವನಾದ ರಾಮು ಕಾಂತನು ರಾಜಾಧಿಕಾರವನ್ನೂ 'ರಾಜಾ' ಎಂಬ ಬಿರುದನ್ನೂ ತಂದೆಯು ಕಾಲ ವಾದನಂತರ ಹೊಂದಿದನು. ಈ ರಾಮಕಾಂತನ ಪತ್ನಿಯೇ ನಮ್ಮ ಚರಿತ್ರ ನಾಯಿಕೆ ರಾಣೀಭವಾನಿಯು, ವಿವಾಹ ಸಮಯದಲ್ಲಿ ರಾಮಕಾಂತನಿಗೆ ೧೮ ವರುಷ, ಭವಾನಿಗೆ ೧೫ ವರುಷ ವಯಸ್ಸಾಗಿತ್ತು. ಈ ದಂಪತಿಗಳು ಪರಸ್ಪರ ಪ್ರೇಮಾನುರಾಗವುಳ್ಳವರಾಗಿದ್ದರು. ಸ್ವಲ್ಪ ಕಾಲದಲ್ಲಿ ರಾಜಕಾರ್ಯ ವಿಷಯ ಗಳಿಂದ ಇವರಿಗೆ ಬಹಳ ಕಷ್ಟವು ಪ್ರಾಪ್ತವಾಯಿತು. ರಾಜಾ ರಾಮಜೀವನ ಕಾಲದಲ್ಲಿ ಆತನ ಹತ್ತಿರ ದಯಾರಾಮನೆಂಬ ಬುದ್ದಿವಂತನಾದೊಬ್ಬ ಮಂತ್ರಿಯಿದ್ದನು. ರಾಮಜೀವನನು ಇವನನ್ನು ಪುತ್ರನಂತೆ