೩೪೬ ಅಬಲಾ ಸಚ್ಚರಿತ್ರ ರತ್ನ ಮಾಲೆ. : ೩೨, ಅಕ್ಕ ಮಹಾದೇವಿ.-ಈ ವೈರಾಗ್ಯಶೀಲೆಯು ಕ್ರಿ.ಶ. ೧೨ ನೆಯ ಶತಾಬ್ದ ದಲ್ಲಿದ್ದಂತೆ ತಿಳಿಯಬರುತ್ತದೆ. ಈಕೆಯ ತಾಯಿಯ ಹೆಸರು ಸುಗತಿ, ತಂದೆಯ ಹೆಸರು ವಿಮಲನು. ಇವರ ನಿವಾಸಸ್ಥಳವು ಕರ್ಣಾಟಕ ದಲ್ಲಿರುವ ಯುಡತಡಿ ' ಎಂಬ ಗ್ರಾಮ, ಇವರು ಲಿಂಗಬಲಿಜಿಗಳು, ಈಕೆಯು ಬಾಲ್ಯದಿಂದಲು ಶಿವಭಕ್ತಳಾಗಿದ್ದಳು, ಈಕೆಯು ವಿಶೇಷ ಸೌಂದರ್ಯವತಿ ಯಾದುದರಿಂದ ಆ ದೇಶದರಾಜನು ಈಕೆಯನ್ನು ಮೋಹಿಸಿ ವಿವಾಹ ಮಾಡಿ ಕೊಳ್ಳಲೆಣಿಸಿದನು. ಆದರೆ ಅಕ್ಕ ಮಹಾದೇವಿಯು ಭಕ್ತಿಯೇ ಮುಕ್ತಿ ಸಾಧನ ವಾದುದೆಂದು ರಾಣಿಯ ಪದವಿಯನ್ನು ಸಹ ಧಿಕ್ಕರಿಸಿ ಅವಿವಾಹಿತೆಯಾಗಿರಲು ನಿಶ್ಚಯಿಸಿಕೊಂಡು, ರಾಜನಿಗೆ ಹೆದರದೆ ಆತನನ್ನು ತಿರಸ್ಕರಿಸಿ ಆ ರಾಜ್ಯದಲ್ಲಿ ಇರಬಾರದೆಂದು ಅಲ್ಲಿಂದ ಹೊರಟು, ಸರ್ವಸಂಗರಹಿತಳಾಗಿ ಲಿಂಗಮತ ಹಸದ ಬಸವನ ಸಭೆಗೆ ಬಂದು ಅಲ್ಲಿ ನಲ್ಲಮಪ್ರಭುವೆಂಬ ಮಹಾನುಭಾವ ನಿಂದ ಜ್ಞಾನೋಪದೇಶವನ್ನು ಪಡೆದಳು ಈಕೆಯು ಮದುವೆಯನ್ನು ಮಾಡಿ ಕೊಳ್ಳದೆ, ಶೈವ ಮತವನ್ನು ಸ್ಥಾಪಿಸುವುದರಲ್ಲಿ ಬಸವಣ್ಣನಿಗೆ ಬಹಳ ಸಹಾಯ ವನ್ನು ಮಾಡಿದಳು, ಈಕೆಯ ದೃಢನಿಶ್ಚಯವನ್ನೂ , ಭಕ್ತಿಯನ್ನೂ, ಜ್ಞಾನ ವನ್ನೂ, ಸತ್ವಗುಣವನ್ನೂ ಕಂಡು ಜನರು ಅಕ್ಕಮಹಾದೇವಿಯು ಪಾರ್ವತಿಯ ಸಾತ್ವಿಕಾಂಶ ಸಂಭೂತಳೆಂದು ನಂಬಿದ್ದರು. ೩೩, ತ್ರಿಪುರಾಧೀಶ್ವರನ ಪತ್ನಿ.-ಭರತವರ್ಷಕ್ಕೆ ಪೂರ್ವದಿಕ್ಕಿನಲ್ಲಿ ಪ್ರಾಚೀನಕಾಲದಿಂದಲು ಒಂದು ರಾಜ್ಯವಿದೆ. ಈ ರಾಜ್ಯವು ಅತಿ ಪ್ರಾಚೀನ ಕಾಲದಿಂದ ವರ್ತಮಾನಕಾಲದವರೆಗೂ ಸ್ವದೇಶ ಪ್ರಭುಗಳ ಪಾಲನೆಯಲ್ಲಿಯೇ ಇದೆ. ಇದರ ಹೆಸರು ತ್ರಿಪುರ (ಟಿಪಾರಾ), ಈ ರಾಜ್ಯಾಧಿಪತಿಯ ಪತ್ನಿಯೇ ಈ ಚರಿತ್ರೆ ನಾಯಕಿಯು, ೬೬೦ ವರ್ಷಗಳ ಕೆಳಗೆ ಆ ರಾಜ್ಯವನ್ನು ಮಹಾರಾಜಾ ಚೇಥಮ್ಯಾ ಎ೦ಬ ದೊರೆಯು ಆಳುತಲಿದ್ದನು. ಆಗ ಆ ರಾಜ್ಯದಲ್ಲಿ ಹೀರಾವಂತ ನೆಂಬ ಒಬ್ಬ ಧನಿಕನು ವಾಸಮಾಡುತಲಿದ್ದನು. ಆತನ ಬ೦ಗಾಳಾ ರಾಜನಬಳಿ ಯಲ್ಲಿ ಒಂದು ದೊಡ್ಡ ಅಧಿಕಾರದಲ್ಲಿದ್ದು ಪರಾಕ್ರಮವಂತನೆಂದು ಹೆಸರುಹೊಂದಿ ದನು. ಈ ಹೀರಾವಂತನು ಒಂದು ಸಲ ತ್ರಿಪುರಾಧೀಶ್ವರನನ್ನು ಅವಮಾನ ಗೊಳಿಸಿದನು, ಅದರಿಂದ ಆ ರಾಜನು ಬಹಳ ಆಗ್ರಹಗೊಂಡು ಆತನ ಮೇಲೆ ತನ್ನ ಸೇನಾನಾಯಕರನ್ನು ವಿಪುಲ ಸೈನ್ಯ ಸಹಿತವಾಗಿ ಕಳುಹಿಸಿದನು. ಈ ಸೈನ್ಯವನ್ನು ನೋಡಿ ಹೀರಾವಂತನು ಭೀತನಾಗಿ ವಂಗದೇಶಾಧಿಪತಿಯ ಸಹಾಯವನ್ನು ಕೇಳಲು, ಆತನು ತ್ರಿಪುರಾಧೀಶನ ಸೈನ್ಯಕ್ಕೆರಡರಷ್ಟು ಸೈನ್ಯವನ್ನು ಕೊಟ್ಟನು. ಹೀರಾವಂತನು ಚೇಥವಾ ಸೈನ್ಯಗಳು ಬರುವುದರೊಳಗಾಗಿಯೇ ತನ್ನ ಸೈನ್ಯಗಳನ್ನು ತೆಗೆದು ಕೊಂಡು ತ್ರಿಪುರರಾಜ್ಯವನ್ನು ಸವಿಾಪಿಸಿದನು. ತ್ರಿಪುರರಾಜನು ಹೀರಾವಂತನ ಸೈನ್ಯಗಳು ತನ್ನ ಸೈನ್ಯಕ್ಕಿಂತಲು ಅಧಿಕವಾಗಿರುವುದನ್ನು ನೋಡಿ ಯುದ್ಧ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೭೧
ಗೋಚರ