ಚರಿತ್ರೆಗಳು ಚೆನ್ನಾಗಿ ತಿಳಿಯದ ಕೆಲ ಸ್ತ್ರೀಯರ ವೃತ್ತಾಂತಗಳು, ೩೪೭ ಮಾಡಲು ಸಂದೇಹಿಸಿದನು, ಈ ವಿಷಯವನ್ನು ಕೇಳಿ ರಾಜಪತ್ನಿಯು ತನ್ನ ಪತಿಗೆ ಅನೇಕ ಉತ್ಸಾಹವಚನಗಳನ್ನು ನುಡಿದು ಯುದ್ಧಕ್ಕೆ ಹೋಗುವಂತೆ ಹೇಳಿದಳು. ಆದರೆ ರಾಜನು ಅನೇಕ ಆಟಂಕಗಳನ್ನು ಹೇಳಿ ಯುದ್ಧಕ್ಕೆ ಹೋಗುವುದಿಲ್ಲವೆಂದು ಹೇಳಿದನು. ಆಗ, ರಾಣಿಯು ತಾನೇ ಯುದ ಕ್ಕೆ ಹೋಗಲು ನಿಶ್ನ ಯಿಸಿ, ಯುದ್ಧಕ್ಕೆ ಸಿದ್ಧವಾಗಿರುವಂತೆ ಸೇನಾಧಿಪತಿಗೆ ಆಜ್ಞೆಯನ್ನು ಕಳುಹಿಸಿ ದಳು, “ ನಾನೇ ರಣರಂಗಕ್ಕೆ ಬಂದು ಸ್ವದೇಶ ಕೀರ್ತಿಯನ್ನು ಕಾಪಾಡು ವೆನು, ನೀವು ಹೆದರದೆ ಯುದ ವನ್ನು ಮಾಡಿ ” ರೆಂದು ಸೈನಿಕರಿಗೆ ತಿಳಿಸಿದಳು. ರಾಣಿಯ ಮಾತುಗಳಿ೦ದ ಸೈನಿಕರು ಧೈರ್ಯಯುತರಾದರು. ರಾಣಿಯು ಯುದ್ದವು ನಡೆಯುವುದಕ್ಕೆ ಮುಂದಿನ ದಿವಸವೆ ಸೈನ್ಯವನ್ನೆಲ್ಲ ಯುದ್ಧ ಭೂಮಿಗೆ ಕಳುಹಿಸಿ, ಮಾರನೆಯದಿವಸ ಸೈನ್ಯಾಧಿಪತಿಯೊಡನೆ ತಾನು ಸಂಗ್ರಾಮ ಭೂಮಿಗೆ ಹೋದಳು. ಅನಂತರ ಎರಡು ಪಕ್ಷದವರಿಗೂ ದೊಡ್ಡ ಯುದ್ಧವು ನಡೆದು, ರಾಣಿಯ ಶೌರ್ಯಧೈರ್ಯಗಳಿಂದ ಆಕೆಯ ಸೇನೆಯು ಅಲ್ಪ ಸಂಖ್ಯೆಯುಳ್ಳ ದ್ವಾದರೂ ಆಕೆಗೆ ಜಯವುಂಟಾಯಿತು. ಶತ್ರುಗಳು ಹೇಳದೆ ಕೇಳದೆ ಓಡಿ ಹೋದರು. ರಾಜ ಮಹಿಷಿಯು ಜಯದುಂದುಭಿಗಳ ಧ್ವನಿಯೊಡನೆ ಮಹಾ ವಿಭವದಿಂದ ಪುರವನ್ನು ಪ್ರವೇಶಮಾಡಿದಳು. ೩೪, ಕೈಲಾಸಕಾಮಿನಿ.- ಈಕೆಯು ದೊಡ್ಡ ವಿದ್ವಾಂಸಳು, ಈಕೆಯ ತಂದೆಯ ಹೆಸರು ಭುವನಮೋಹನದೇದ್ ಸರ್ಕಾರ್, ತಾಯಿಯ ಹೆಸರು ಮನಮೋಹಿನಿ, ಕೈಲಾಸಕಾಮಿನಿಗೆ ತಾಯಿತಂದೆಗಳು ಬಾಲ್ಯದಲ್ಲಿಯೇ ಸತ್ತು ಹೋದರು. ಅನಂತರ ಈಕೆಯು ಕಲಿಕತ್ತೆಗೆ ಹೋಗಿ ಬೆರ್ಥ ವಿದ್ಯಾಲಯದಲ್ಲಿ ಓದುಬರಹಗಳನ್ನು ಕಲಿಯುತಲಿದ್ದಳು. ಆ ಪಾಠಶಾಲೆಯಲ್ಲಿಯೇ ಈಕೆಗೆ ಬ್ರಹ್ಮಮತವನ್ನು ಕುರಿತು ಸ್ವಲ್ಪ ಪರಿಚಯವಾಯಿತು. ಅನಂತರ ಒಬ್ಬ ಬ್ರಾಹ್ಮ ಮತಾವಲಂಬಿಯು ಈಕೆಗೆ ಪತಿಯಾದನು. ಶಿಶುಪಾಲನೆಯಲ್ಲಿಯೂ, ಗೃಹಕೃತ್ಯ ಗಳನ್ನು ನಿರ್ವಹಿಸುವುದರಲ್ಲಿ ಯೂ ಈಕೆಯು ವಿಶೇಷ ಬುದ್ದಿ ಸೂಕ್ಷ್ಯವನ್ನು ತೋರಿಸುತಲಿದ್ದಳು, ಈಕೆಯು ತನ್ನ ಕಾರ್ಯಗಳನ್ನು ನಿಯಮಿತಸಮಯಕ್ಕೆ ಮುಗಿಸುತಲಿದ್ದಳು. ಅಧ್ಯಯನಾಧ್ಯಾಪನೆಗಳಲ್ಲಿ ಈಕೆಯು ಪ್ರಖ್ಯಾತಳಾದಳು. ಪತಿಭಕ್ತಿ ಎಂಬುದು ಈಕೆಯ ಸ್ವಾಭಾವಿಕಗುಣವಾಗಿತ್ತು. ಈ ಸತಿಯ ಸದ್ದು ಣ ಗಳನ್ನು ಕಂಡು ಕೇಶವಚಂದ್ರಸೇನನು ಈಕೆಯನ್ನು ಪುತ್ರಿಯ ತೆ ಭಾವಿಸಿ ಪ್ರೇಮಿ ಸುತಲಿದ್ದನು. ಈಕೆಯು ಬ್ರಹ್ಮಸಮಾಜಕ್ಕೆ ವಿಶೇಷ ಸಹಾಯವನ್ನು ಮಾಡುತ ಲಿದ್ದಳು, ಈಕೆಯು ಕ್ರಿ.ಶ. ೧೮೯೮ ರಲ್ಲಿ ಪರಲೋಕಕ್ಕೆ ಹೋದಳು. ೩೫, ಹಠೀವಿದ್ಯಾಲಂಕಾರ್-ಈಕೆಯು ಹಠಾಜಾತಿಯ ಬ್ರಾಹ್ಮಣ ಕುಲಕ್ಕೆ ಸೇರಿದವಳು, ಈಕೆಯು ಸ್ಮೃತಿಗಳನ್ನು, ನ್ಯಾಯಶಾಸ್ತ್ರ ಮೊದಲಾದವು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೭೨
ಗೋಚರ