ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರಿತ್ರೆಗಳು ಚೆನ್ನಾಗಿ ತಿಳಿಯದ ಕೆಲ ಸ್ತ್ರೀಯರ ವೃತ್ತಾಂತಗಳು, ೩೪೯ ಎಲ್ಲವನ್ನು ಸಿದ್ಧಮಾಡಿರಿ, ” ಎಂದು ಅವರನ್ನು ಕೇಳಿದಳು, ಅವರು ಹಾಗೆಯೇ ಚಿತೆಯನ್ನು ಸಿದ್ದ ಮಾಡಲು ಆ ಸಾಧಿಯು ಯುದ್ಧಭೂಮಿಯಲ್ಲಿಯೇ ಸಹಗಮನವನ್ನು ಮಾಡಿದಳು. ೩.೮, ಬಸವಾಈ ಪತಿವ್ರತಾ ತಿಲಕವು ಮಾಳವದೇಶದ ಒಡ್ಡರ ಕುಲದಲ್ಲಿ ಜನ್ನಿಸಿದಳು, ಈಕೆಯು ಅನುಪಮಾನ ಸೌಂದರ್ಯವುಳ್ಳವಳಾ ಗಿದ್ದುದರಿಂದ, ಈಕೆಯ ರೂಪವನ್ನು ಕೇಳಿ ಕರ್ಣರಾಜನ ಪುತ್ರನಾದ ಜಯ ಸಿಂಹನು ಈಕೆಯಲ್ಲಿ ಇಚ್ಛೆಯುಳ್ಳವನಾದನು, ಅದರಿಂದ ಆತನು ಸಹಸ್ರ ಲಿಂಗ ಎಂಬ ಕೆರೆಯನ್ನು ಕಟ್ಟಿಸುವ ನೆಪದಿಂದ ಮಾಳವದೇಶದಲ್ಲಿರುವ ಒಡ್ಡರನ್ನೆಲ್ಲ ಕರೆ ಯಿಸಿದನು. ಅವರೊಡನೆ ಜಸಮಾಪತಿ ಸಹಿತಳಾಗಿ ಅಲ್ಲಿಗೆ ಬಂದಳು. ಜಯ ಸಿಂಗನು ಆಕೆಗೆ ತನ್ನ ಅಭೀಷ್ಟವನ್ನು ತಿಳಿಸಿ, ಆಕೆಯು ತನ್ನನ್ನು ವರಿಸಿದರೆ ರಾಜ್ಯಕ್ಕೆ ಆಕೆಯನ್ನೇ ಒಡತಿಯಾಗಿ ಮಾಡಿ, ಆಕೆಯ ಪುತ್ರನಿಗೆ ಯುವರಾಜ ಪದವಿಯನ್ನು ಕೊಡುವಂತೆ ಹೇಳಿದನು, ಮತ್ತು ನನ್ನ ಅನಂತರ ನಿನ್ನ ಪುತ್ರನೇ ರಾಜ್ಯಾಧಿಪತಿಯಾಗುವನೆಂತಲು ತಿಳಿಸಿದನು. ಆದರೆ ಜಸಮಾ ಅದಕ್ಕೆ ಸಮ್ಮತಿಸದೆ ಪಾತಿವ್ರತ್ಯವನ್ನು ಕೆಡಿಸಿಕೊಂಡು ರಾಣಿಯಾಗಿ ರಾಜ್ಯವನ್ನಾಳು ವುದಕ್ಕಿಂತಲು, ಪತಿವ್ರತೆಯಾಗಿದ್ದು ಮಣ್ಣನ್ನು ಅಗೆದು ಜೀವಿಸುವದೇ ಶ್ರೇಷ್ಠ ವಾದುದೆಂದು ತಿಳಿಸಿದಳು! ಅನಂತರ ರಾಜನು ಆಕೆಯನ್ನು ಬಲಾತ್ಕಾರದಿಂದ ವಶಮಾಡಿಕೊಳ್ಳ ಬೇಕೆಂದು ಪ್ರಯತ್ನವನ್ನು ಮಾಡಲು ಜಸಮಾ ಭಯಭ್ರಾಂತ ಳಾಗಿ ತನ್ನ ದೇಶಕ್ಕೆ ಹೊರಟಳು. ಜಯಸಿಂಗನು ಆಕೆಯನ್ನು ಸೈನ್ಯದೊಡನೆ ಹಿ೦ಬಾಲಿಸಿದನು. ಇದರಿಂದ ಜಸಮಾ ತಾನು ರಾಜನಿಗೆ ಸಿಕ್ಕಿಬೀಳುವೆ ನೆಂದು ತಿಳಿದು ಅರಣ್ಯದಲ್ಲಿ ಒಂದು ಚಿತಿಯನ್ನು ಸಿದ್ದ ಮಾಡಿ ಅದರಲ್ಲಿ ಬಿದ್ದು ಪ್ರಾಣತ್ಯಾಗ ಮಾಡಿದಳು ! ಈಕೆಯು ಬೆಂಕಿಯಲ್ಲಿ ಬೀಳುವಾಗ ಸಹಸ್ರ ಲಿಂಗದಲ್ಲಿ ನೀರು ಒಣಗಿ ಹೋಗಲಿ ಎಂದು ಶಾಪವನ್ನಿಟ್ಟಳಂತೆ ! ಈಕೆಯ ಚರಿತ್ರೆಯಿಂದ ಸ್ತ್ರೀಯರ ಸ್ವಭಾವವು ಮೂಢತ್ವದಲ್ಲಿಯೂ ಸದ್ಗುಣಗಳ ಕಡೆಗೆ ಆಕರ್ಷಿಸಲ್ಪಡುವುದೆಂದು ತಿಳಿಯಬರುತ್ತದೆ. ಇಂತಹ ಸುಸ್ವಭಾವವುಳ್ಳ ಶ್ರೀ ಯರು ಸದ್ವಿದ್ಯೆಯನ್ನು ಕಲಿತರೆ ಕೆಡುವರೆಂದು ಹೇಳುವುದಕ್ಕಿಂತಲೂ ವೈಪ ರೀತ್ಯವಾವುದುಂಟು ? ೩೯, ಕರ್ಣಾಟ- ಈ ಕವಯಿತ್ರಿಯ ನಾಮವಾವುದೋ ತಿಳಿಯದು. ಈಕೆಯು ಕರ್ಣಾಟ ದೇಶಸ್ಥಳಾದುದರಿಂದ ಈಕೆಯನ್ನು ಕರ್ಣಾಟಿಯೆಂದೇ ಕರೆಯುತ್ತಾರೆ. ಈಕೆಯನ್ನು ಕುರಿತು ಸೂಕ್ತಿಮುಕ್ತಾವಳಿಯಲ್ಲಿ ಹೀಗೆ ಬರೆದಿದೆ :- ಶ್ಲೋ! ಸರಸ್ವತೀವಕರ್ಣಾಟೀ ವಿಜಯಾಂ ಕಾಜಯತ್ಯಸಾ । ಯಾವೈದರ್ಭಗಿರಾ೦ವಾಸಃ ಕಾಲಿದಾಸಾದನಂತರಂ