೩೫ರಿ ಅಬಲಾ ಸಚ್ಚರಿತ್ರ ರತ್ನ ಮಾಲೆ. ಅರ್ಥ : ವಿಜಯ ' ಎಂಬ ಬಿರುದನ್ನುಳ್ಳ ಕರ್ಣಾಟಯು ಸರಸ್ವತಿ ಯಂತೆ ಜಯಹೊಂದುತಲಿದಾಳೆ. ಕಾಳಿದಾಸನ ಅನಂತರ ವೈದರ್ಭಿರೀತಿಯು ಈಕೆಯಲ್ಲಿಯೇ ವಾಸಮಾಡುತಲಿದೆ. ಈಕೆಯು ತನ್ನ ರನ್ನ ಕವಿತ್ವದಿಂದ ಕವಿಗಳನ್ನೆಲ್ಲ ಗೆದ್ದು, “ ವಿಜಯ ? ಎಂಬ ಬಿರುದನ್ನು ಹೊಂದಿದಳಾದುದರಿಂದ, ಪೂಜ್ಯರಾದ ವ್ಯಾಸವಾಲ್ಮೀಕಿಗಳನ್ನು ವಿನಹ ಮತ್ಯಾರನ್ನೂ ಮೆಚ್ಚು ತಲಿರಲಿಲ್ಲ. ಈಕೆಯು ತನ್ನನ್ನು ಕುರಿತು ಈ ವಿಧ ವಾಗಿ ಬರೆದುಕೊಂಡಿದಾಳೆ :- ಶ್ಲೋ ಏಕೋಭೂನ್ನಲಿನಾ ತಶ್ಚ ಪುಲಿನಾದ್ವಲ್ಮೀಕತಶ್ಚಾಪರಃ ತೇಸರ್ವೇಕವಯೋ ಭವನಿ ಗುರುವನ್ತೇ ಭೋನಮಸ್ಸು ರ್ಮಹೇ ! ಅಡ್ವಾಂಟೋಯದಿಗದ್ಯ ಪದ್ಯ ರಚನೈಶ್ವೇತಶ್ಚ ಮತ್ತು ತ್ವತೇ ತೇಷಾಂಮೂರಿದದಾಮಿನಾಮಚರಣಂ ಕರ್ಣಾಟರಾಜಪ್ರಿಯಾ || ಅರ್ಥ:-ಪೂರ್ವ ಕವಿಗಳಾದ ಬ್ರಹ್ಮ, ವ್ಯಾಸ, ವಾಲ್ಮೀಕಾದಿಗಳು ನನಗೆ ಗುರುಗಳು, ಅವರಿಗೆ ನಮಸ್ಕಾರವನ್ನು ಮಾಡುವೆನು ; ಆದರೆ ಆಧು ನಿಕ ಕವಿಗಳಾರಾದರು ಗದ್ಯ ಪದ್ಯ ರಚನೆಯಿಂದ ಚಿತ್ತರಂಜನೆಯನ್ನು ಮಾಡುವೆವು ಎಂದರೆ ಅವರ ಶಿರಸ್ಸಿನಮೇಲೆ ನನ್ನ ವಾಮಪಾದವನ್ನಿಡುವೆನು. ಈ ಶ್ಲೋಕದಲ್ಲಿರುವ " ಕರ್ಣಾಟ ರಾಜಪ್ರಿಯಾ' ಎಂಬ ಪದದಿಂದ ಈಕೆಯು ಮೋಹನಾಂಗಿಯಾಗಿರಬಹುದೇ ಎಂದು ತೋರುತ್ತದೆ. ಮೋಹ ನಾಂಗಿಯು ಕೃಷ್ಣ ದೇವರಾಯನ ಮಗಳೆಂತಲೂ, ರಾಮರಾಜನ ಪತ್ನಿಯೆಂತಲೂ, ಕವಯಿತ್ರಿಯೆಂತಲೂ ಪ್ರತೀತಿಯುಂಟು. ಆದರೆ ಇದನ್ನು ಕುರಿತು ಇನ್ನೂ ಪರಿಶೋಧಿಸಬೇಕು. ೪೦, ರಾಣೀ ರಾಜೇಂದ್ರ ಲಕ್ಷ್ಮಿ- ಈಕೆಯು ನೇಪಾಳಾಧೀಶ್ವರನ ಹೆಂಡತಿ, ಸಂಗಪ್ರತಾಪರಾಜನು ೧೭೭೫ ರಲ್ಲಿ ಮೃತನಾದನು. ಆಗೈ ಆತ ನಿಗೆ ಒಬ್ಬ ಮಗನಿದ್ದನು. ಆತನು ಬಾಲಕನಾದುದರಿಂದ ಆತನ ತಾಯಿ ಯಾದ ರಾಜೇಂದ್ರ ಲಕ್ಷ್ಮಿಯು ರಾಜ್ಯ ಸೂತ್ರಗಳನ್ನು ಹಿಡಿಯಬೇಕಾಯಿತು. ಈಕೆಯು ತನ್ನ ರಾಜ್ಯದಲ್ಲಿಯೂ, ಸೈನ್ಯದಲ್ಲಿಯೂ, ಕಾಲೋಚಿತವಾದ ಅನೇಕ ಮಾರ್ಪಾಟುಗಳನ್ನೂ, ಸಂಸ್ಕರಣೆಗಳನ್ನೂ ಮಾಡಿದಳು. ಧೀಮಂತಳೂ, ಧೈರ್ಯ ಸಾಹಸಯುತಳೂ ಆದ ಈ ರಾಣಿಯು ದಂಡೆತ್ತಿ ಹೋಗಿ ಅನೇಕ ಪರ ಸಂಸ್ಥಾನಗಳನ್ನು ಸ್ವಾಧೀನ ಮಾಡಿಕೊಂಡಳು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೭೫
ಗೋಚರ