ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರಿತ್ರೆಗಳು ಚೆನ್ನಾಗಿ ತಿಳಿಯದ ಕೆಲ ಸ್ತ್ರೀಯರ ವೃತ್ತಾಂತಗಳು, ೩೫ಗೆ ೪೧, ಮುಕ್ಕಾಬಾಯಿ.-ಈಕೆಯು ಮಹಾರಾಷ್ಟ್ರ ದೇಶದಲ್ಲಿದ್ದಳು. ಈಕೆಯು ಕವಯಿತ್ರಿಯೂ, ಅಧ್ಯಾತ್ಮ ತತ್ವ ವಿಶಾರದೆಯೂ ಆಗಿದ್ದಳು, ಈಕೆಯ ಅಗ್ರಸೋದರನಾದ ಜ್ಞಾನದೇವನು ಭಗವದ್ಗೀತೆಗೆ ಟೀಕೆಯನ್ನು ಬರೆದನು. ಮುಕ್ತಾಬಾಯಿಯು ಅವಿವಾಹಿತೆಯಾಗಿ ಜನ್ಮವನ್ನು ಕಳೆದಳು, ಈಕೆಯು ಒಂದು ಸಲ ಚಾಂಗದೇವ್ ಎಂಬ ಸಿದ್ದನೊಡನೆ ವಾದಮಾಡಿ ಆತನನ್ನು ಗೆದ್ದು ತನ್ನ ಶಿಷ್ಯನಾಗಿ ಮಾಡಿಕೊಂಡಳು. ಈಕೆಯಿಂದ ರಚಿತವಾದ ಕೀರ್ತ ನೆಗಳು, ಪದ್ಯಗಳು ಭಕ್ತಿರಸ ಸರಿಪು ತಗಳಾಗಿ ಇರುವುದರಿಂದ ಮಹಾರಾಷ್ಟ್ರ ದೇಶೀಯರು ಬಹು ಭಕ್ತಿಯಿಂದ ಪಠಿಸುತ್ತಾರೆ. ೪೨, ಅನುಲ-ಈಕೆಯು ಸಂಗಮಿತ್ರೆಯ ಕಾಲದಲ್ಲಿ ಇದ್ದಳು. ಸಿಂಹಳ ರಾಜನಾದ ತಿಷ್ಯನ ಪತ್ನಿ, ಸಿಂಹಳದ್ವೀಪದಲ್ಲಿ ಬೌದ್ಧ ಧರ್ಮವನ್ನು ಈಕೆಯು ಬಹು ಶ್ರದ್ದೆಯೊಡನೆ ವೃದ್ದಿ ಮಾಡಿದಳು, ಈಕೆಯು ಬೌದ್ಧ ಧರ್ಮದಲ್ಲಿ ವಿಶೇಷ ಜ್ಞಾನವನ್ನು ಪಡೆದಿದ್ದಳು, ಈಕೆಯು ಇತರರಿಗೆ ಆ ಧರ್ಮವನ್ನು ಬೋಧಿಸಿ ಅವರು ಅದರಂತೆ ನಡೆಯಬೇಕೆಂದು ಉಪದೇಶಿಸುತ್ತಿದಳು. ಈಕೆಗೆ ಇರುವ ಬೌದ್ದಧರ್ಮಾ ಸಕ್ತಿಯನ್ನು ನೋಡಿ, ಈಕೆಯ ಆಚಾರ್ಯ ಳಾದ ಸಂಗಮಿತ್ರೆಯು ಈಕೆಯನ್ನು ಬೌದ್ಧಧರ್ಮಾಚಾರ್ಯಾ ಎಂದು ಸಂಬೋಧಿಸುತ್ತಿದ್ದಳು. ೪೩, ಮದಿನ ಸುಭದ್ರಮ್ಮ -- ಈಕೆಯು ಶ್ರೀ ಸರ್ ಮಹಾರಾಜಾ ಗೋಡೆನಾರಾಯಣ ಗಜಪತಿರಾಯರ ಸೋದರತ್ತೆ. ಶತಕಗಳನ್ನು ರಚಿಸುವ ಸ್ತ್ರೀಯರಲ್ಲಿ ಈಕೆಯು ಅಗ್ರಗಣ್ಯಳು. ಈಕೆಯು ತರಿಗೊಂಡವೆಂಗಮಾಂಬೆಯ ಸಮಕಾಲೀನಳು, ಈಕೆಯು “ ಶ್ರೀರಾಮದಂಡಕ', “ ರಘುನಾಯಕಶತಕ,? - ಕೇಶವಶತಕ ', 'ಕೃಷ್ಣಶತಕ ', ರಾಘವರಾಮಶತಕ' ಗಳನ್ನು ರಚಿಸಿದಳು. ೪೪, ಐವತ್ತೆಂಟು ಮಹಾರಾಣಿಯರು-ಇವರೆಲ್ಲರು ವಿ.ಶ. ೧೬೯೦ ಸಂವತ್ಸರ ಪ್ರಾಂತದಲ್ಲಿ ಘರ್ಜರ, ಮಹಾರಾಷ್ಟ್ರ, ಮಾರ್ವಾಡೆಗಳನ್ನು ಬಹು ಪರಾಕ್ರಮದಿಂದ ಆಳಿದ ಅಜಿತಸಿಂಗನ ಪತ್ನಿಯರು. ಈ ಮಹಾ ಯೋಧನು ಒಂದು ಸಲ ಮಹಮ್ಮದುಷಾ ಎಂಬ ಮಹಮ್ಮದೀಯನೊಡನೆ ಯುದ್ಧ ಮಾಡಿದನು. ಆ ಸಮಯದಲ್ಲಿ ಶೂರರಾದ ಈತನ ಪತ್ನಿಯರೆಲ್ಲರು ಸೇನಾ ನಾಯಕತ್ವವನ್ನು ವಹಿಸಿ ಯುದ್ಧಕ್ಕೆ ಹೊರಟರು. ಯುದ್ಧರಂಗಕ್ಕೆ ಬಂದು ಪತಿಯೊಡನೆ ಸಮಾನವಾಗಿ ತನ್ನ ಸೇನೆಗಳನ್ನು ಹತಮಾಡುತಲಿರುವ ಈ ನಾರಿ ಯರನ್ನು ನೋಡಿ ಮಹಮ್ಮದುಷಾ ನಿರ್ವಿಣ್ಣನಾದನು. ಆತನ ಸೈನಿಕರು ಆ ಶೂರ ರಮಣಿಯರ ಖಡ್ಡ ಪ್ರಹಾರಕ್ಕೆ ನಿಲ್ಲಲಾರದೆ ಓಡಲಾರಂಭಿಸಿದರು, ಆದರೆ