ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ರಮೇತೀಬಾಯಿ. 改编成 ಇದಕ್ಕೆ ಕರವೇತೀಬಾಯಿಯು ವಿಶೇಷವಾಗಿ ಚಿಂತಿಸಿ, ಪತಿಯಿಂದ ತಪ್ಪಿಸಿ ಕೊಂಡು ಬೃ೦ದಾವನಕ್ಕೆ ಹೋಗಬೇಕೆಂದು ನಿಶ್ಚಯಸಿಕೊಂಡಳು. ಒಂದು ದಿವಸ ರಾತ್ರಿ ಕರಮೇತೀಬಾಯಿಯು ಶಯನಮಂದಿರವನ್ನು ಬಿಟ್ಟು ಮನೆಯ ಹೊರಗಡೆಗೆ ಬಂದು ನಿಂತುಕೊಂಡಳು. ಆದರೆ ಪ್ರಾಕಾರದ್ವಾರಗಳೆಲ್ಲವು ಮುಚ್ಚಿದ್ದು ದರಿಂದ, ಏನುಮಾಡುವುದಕ್ಕೂ ತೋರದೆ, ಕೊನೆಗೆ ಮನೆಯಮೇಲೆ ಹತ್ತಿ ಪ್ರಾಕಾರದ ಗೋಡೆಯ ಆಚೆಗೆ ದುಮುಕಿದಳು. ಆದರೆ ಬೃಂದಾವನಕ್ಕೆ ಹೋಗುವ ಮಾರ್ಗವು ಆಕೆಗೆ ತಿಳಿಯದು. ಆಲಿನ್ಯ ವಾದರೆ ಯಾರಾದರೂ ತನ್ನನ್ನು ನೋಡುವರೆಂದು ಕರ ಮೆತೀಬಾಯಿಯ ಯಾವುದೋ ಒಂದು ಮಾರ್ಗ ವನ್ನು ಹಿಡಿದು ಓಡಲಾರಂಭಿಸಿದಳು. - ಮರುದಿನ ಪ್ರಾತಃಕಾಲವಾದಮೇಲೆ ಪರಶುರಾಮಪಂಡಿತನು ಎಚ್ಚರ ಗೊಂಡು ಪುತ್ರಿಯನ್ನು ಕಾಣದೆ ದುಃಖಿಸುತ್ತ, ರಾಜನ ಬಳಿಗೆ ಹೋಗಿ ನಡೆದ ವಿಷಯವನ್ನು ಬಿನ್ನವಿಸಿಕೊಂಡನು. ರಾಜನು ಒಡನೆಯೇ ಆಕೆಯನ್ನು ಹುಡುಕುವುದಕ್ಕೆ ಅನೇಕ ಭಟರನ್ನು ಕಳುಹಿಸಿದನು. ಕರಮೇತೀ ಬಾಯಿಯು ಸ್ವಲ್ಪ ದೂರ ನಡೆದು ಹಿ೦ದಿರಿಗಿ ನೋಡಲು ರಾಜ ಭಟರು ಬರುತ್ತಿರುವಂತೆ ಆಕೆಗೆ ಕಂಡುಬಂದಿತು. ಆ ರಾಜಭಟರು ತನ್ನನ್ನು ಹುಡುಕಿ ಕೊಂಡು ಬರುತ್ತಿರುವರು ಎಂದು ತಿಳಿದು, ಕರಮೇತೀಬಾಯಿಯು ತಪ್ಪಿಸಿಕೊಳ್ಳಲು ಉಪಾಯವನ್ನು ಆಲೋಚಿಸುತ್ತ ಇದ . ಆಕೆಯು ನಡೆಯುತಲಿದ್ದ ಪ್ರದೇಶವು ಲತಾವೃಕ್ಷಶೂನ್ಯವಾದ ಬೈಲಾಗಿತ್ತು. ಆದಕಾರಣ ಔತುಕೊಳ್ಳುವುದಕ್ಕೆ ಆಗಲಿಲ್ಲ. ಅದರಿಂದ ಆಕೆಗೆ ಬೇರೆ ಯೋಚನೆಯು ತೋರದೆ ವೇಗವಾಗಿ ಓಡಲಾರಂಭಿಸಿದಳು. ಈಕೆಯು ಸ್ವಲ್ಪ ದೂರ ಓಡಿದ ಮೇಲೆ ಅಲ್ಲಿ ಸತ್ತು ಬಿದ್ದಿದ್ದ ಒಂದು ಒ೦ಟೆಯು ಆಕೆಗೆ ಕಂಡುಬಂದಿತು. ನರಿಗಳು ಮಾಂಸವನ್ನು ತಿಂದಿದ್ದುದರಿಂದ ಅದರ ಹೊಟ್ಟೆಯು ಟೊಳ್ಳಾಗಿತ್ತು. ಅದನ್ನು ಕಂಡಕೂಡಲೆ ಕರವೇ ತೀಬಾಯಿಯು ದುರ್ಗಂಧಮಯವಾದ ಆ ಹೊಟ್ಟೆಯಲ್ಲಿ ಔತುಕೊಂಡಳು. ರಾಜಭಟರು ತಮ್ಮ ದಾರಿಯನ್ನು ಹಿಡಿದುಕೊಂಡು ಹೊರಟುಹೋದರು. ಒಂಟೆಯ ಹೊಟ್ಟೆಯಲ್ಲಿ ಔತುಕೊಂಡಿದ್ದ ಕರಮೇತೀಬಾಯಿಯನ್ನು ಅವರು ನೋಡಲಿಲ್ಲ. ರಾಜಭಟರು ಹೊರಟು ಹೋದ ಮೇಲೆ ಕರಮೇತೀ ಬಾಯಿಯು, ಅಲ್ಲಿಂದ ಹೊರಟು ದೊರೆತಾಗ ಊಟಮಾಡುತ್ಯ, ದೊರೆಯದೇ ಇದ್ದರೆ ಉಪವಾಸವಾ ಡುತ್ತ ನಡೆದು, ಕೊನೆಗೆ ಬೃ೦ದಾವನವನ್ನು ಸೇರಿ ಮನೋವಾಂಛಾ ಸಿದ್ದಿಯನ್ನು ಪಡೆದಳು. ಅ೦ದಿನಿ೦ದಲೂ ಆಕೆಯು ಬೃಂದಾವನದಲ್ಲಿ ವಾಸಮಾಡಿಕೊಂಡು, ಶ್ರೀಕೃಷ್ಣನನ್ನು ಆರಾಧಿಸುತ್ತ, ಸಂಕೀರ್ತನೆಯಲ್ಲಿ ಕಾಲವನ್ನು ಕಳೆಯುತಲಿದ್ದಳು. 36