ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣೀಭವಾನಿ. ೧೫ ಪ್ರೀತಿಸುತಲಿದ್ದನು. ರಾಮಕಾಂತನು ಇವನನ್ನು 'ಅಣ್ಣಾ' ಎಂದು ಸಂಬೋ ಧಿಸುತಲಿದ್ದನು, ಮೃತ್ಯು ಕಾಲದಲ್ಲಿ ರಾಮಜೀವನನು ಪುತ್ರನನ್ನು ಕರೆದು ಪ್ರತಿ ಕಾರ್ಯದಲ್ಲಿ ಯೂ ದಯಾರಾಮನ ಇಷ್ಟಾನುಸಾರವಾಗಿ ನಡೆಯುವಂತೆ ಬೋಧಿಸಿ ಪ್ರಾಣವನ್ನು ತ್ಯಜಿಸಿದನು. ಬಾಲ್ಯದಲ್ಲಿಯೇ ಸಂಸ್ಥಾನಾಧಿಕಾರವು ದೊರೆತುದದರಿಂದ ರಾಮಕಾಂತನು ಗರ್ವಿಸಿ, ರಾಜ್ಯ ಕಾರ್ಯಗಳಲ್ಲಿ ಮನಸ್ಸಿಡದೆ ಸ್ವಚ್ಚಾನುಸಾರವಾಗಿ ನಡೆಯುತ್ತ ರಾಜ್ಯವನ್ನು ಹಾಳುಮಾಡಲಾರಂಭಿಸಿದನು. ಕೈಗೆ ಸಿಕ್ಕಿದ ಧನವೆಲ್ಲವನ್ನೂ ವಿಷಯ ಸುಖಗಳಿಗೆ ವ್ಯಯಮಾಡಿದನು. ಇದೆಲ್ಲ ವನ್ನೂ ನೋಡಿ ದಯಾರಾಮನು ಅನೇಕವಿಧವಾಗಿ ಬುದ್ದಿಯನ್ನು ಹೇಳಿದನು. ಆದರೆ ಆ ಗರ್ವಿಷ್ಟನು ಆತನ ಮಾತುಗಳನ್ನು ಗಣಿಸದೆ ದಯಾರಾಮನನ್ನು ದೇಶ ಭ್ರಷ್ಟನನ್ನಾಗಿ ಮಾಡಿದನು. ನಾಟೂರಿನಿಂದ ಹೊರಡಿಸಲ್ಪಟ್ಟ ದಯಾರಾಮನು, ರಾಮಕಾಂತನ ಮೇಲೆ ದ್ವೇಷವನ್ನು ವಹಿಸಿ ಅಲ್ಲಿಂದ ಮುರ್ಷಿದಾಬಾದಿಗೆ ಹೊರ ಟನು. ಆಗ ಅಲ್ಲಿ ರಾಜ್ಯವನ್ನಾಳುತ್ತಲಿದ್ದ ನವಾಬನ ಹೆಸರು ಅಲಿವರ್ದಿಖರ್ಾ. ಅಲ್ಲಿಗೆ ಹೋದಮೇಲೆ ದಯಾರಾಮನು ಪ್ರತಿದಿನವೂ ದರ್ಬಾರಿಗೆ ಹೋಗುತ ಲಿದ್ದನು. ಸ್ವಲ್ಪ ದಿವಸಗಳಲ್ಲಿಯೇ ತನ್ನ ಬುದ್ಧಿ ಕೌಶಲ್ಯದಿಂದ ಅವನು ನವಾಬನ ಅನುಗ್ರಹಕ್ಕೆ ಪಾತ್ರನಾದನು. ದಯಾರಾಮನು ಒಂದು ದಿನ ನವಾಬನ ಬಳಿಗೆ ಹೋಗಿ, “ ಪ್ರಭುಗಳ ಧನವನ್ನೆಲ್ಲವನ್ನೂ ರಾಮಕಾಂತನು ಹಾಳುಮಾಡುತಲಿದಾನೆ, ಧನವನ್ನೆಲ್ಲವನ್ನೂ ಅಪಹರಿಸಿ ರಾಜದ್ರೋಹವನ್ನು ಮಾಡಲೆಣಿಸಿದಾನೆ,” ಎಂದು ಹೇಳಿದನು, ಆಗಿನ ನವಾಬರು ವಿಚಾರಶೂನ್ಯರು. ಯುಕ್ತಾಯುಕ್ತ ವಿಚಾರ ವನ್ನು ಮಾಡಿ ಕಾರ್ಯವನ್ನು ನಡೆಸತಕ್ಕವರಲ್ಲ. ಒಂದುಮಾತಿನಿಂದ ಒಬ್ಬನನ್ನು ಲಕ್ಷಾಧೀಶನನ್ನಾಗಿಯೂ, ಇನ್ನೊಬ್ಬನನ್ನು ಭಿಕ್ಷಾಧೀಶನನ್ನಾಗಿಯೂ ಮಾಡುತ ಲಿದ್ದರು. ಆದಕಾರಣ ದಯಾರಾಮನ ಮಾತುಗಳನ್ನು ಕೇಳಿದೊಡನೆಯೇ ಈ ಮಾತು ಸತ್ಯವೇ ಅಸತ್ಯವೇ ಎಂಬುದನ್ನು ವಿಚಾರಮಾಡದೆ, ರಾಮಕಾಂತನನ್ನು ಪದಚ್ಯುತನನ್ನಾಗಿ ಮಾಡಿ, ಆತನ ಧನವನ್ನೆಲ್ಲವನ್ನೂ ಕೊಳ್ಳೆ ಹೊಡೆಯುವು ದಕ್ಕೂ ರಾಮಕಾಂತನ ದೊಡ್ಡಪ್ಪನಮಗನಿಗೆ ರಾಜ್ಯವನ್ನು ಕೊಡುವುದಕ್ಕೂ ದಯಾರಾಮನೊಡನೆ ಸೈನ್ಯವನ್ನು ಕಳುಹಿದನು. ನವಾಬನ ಆಜ್ಞೆಯಂತೆ ದಯಾರಾಮನು ಸೈನ್ಯ ಸಹಿತನಾಗಿ ನಾಟೂರನ್ನು ಪ್ರವೇಶಿಸಿ ಭಂಡಾಗಾರವನ್ನು ಕೊಳ್ಳೆ ಹೊಡೆಯಲು ಪ್ರಾರಂಭಿಸಿದನು. ಕೋಟೆಯೊಳಕ್ಕೆ ಸೈನ್ಯವು ಪ್ರವೇಶಿಸಿ ದಾಗ ರಾಮಕಾಂತನು ಅಂತಃಪುರದಲ್ಲಿ ದ್ದನಂತೆ. - ಅವನು ನವಾಬನ ಸೈನ್ಯವು ದಂಡೆತ್ತಿ ಬಂದ ಸಮಾಚಾರವನ್ನು ಕೇಳಿ ಅವ ರೊಡನೆ ಯುದ್ಧ ಮಾಡಲಸಮರ್ಥನಾದಕಾರಣ, ವಜ್ರಾಹತನಾದವನಂತೆ ನಿಶ್ ದ್ವಿತನಾಗಿದ್ದನು. ಆತನು ಹಾಗೆಯೇ ಇನ್ನು ಕೆಲನಿಮಿಷಗಳಿದ್ದ ಪಕ್ಷದಲ್ಲಿ ಶತ್ರು ಗಳಾತನನ್ನು ಸೆರೆಹಿಡಿಯುತಲಿದ್ದರು. ಆದರೆ ಸಮಯಸ್ಫೂರ್ತಿಯುಳ್ಳ ಭವಾ