ಪ್ರವೀಣಾ ಬಾಯಿ. ೩೫೫ ಮಿಸರು ಮಿಶ್ರನೂ, ಮಿತಾಕ್ಷರ ಟೀಕೆಯನ್ನು ರಚಿಸಿದ ಬಾಲಂಭಟ್ಟನೂ, ಲಕ್ಷ್ಮೀದೇವಿಯ ಆಶ್ರಯದಿಂದಲೂ, ಪ್ರೋತ್ಸಾಹದಿಂದಲೂ ಕೀರ್ತಿಯನ್ನು ಪಡೆದರು. ಈಕೆಯು ದರನಶಾಸ್ತ್ರಗಳಲ್ಲಿ ವಿಶೇಷ ಪಂಡಿತೆಯಾಗಿ ಇದಳ, ಆದುದ ರಿಂದಲೇ ಈಕೆಯು ಪಂಡಿತರೊಡನೆ ವಾದಮಾಡಲು ಸಾಮರ್ಥ್ಯವುಳ್ಳವಳಾಗಿ ಇದ್ದಳು. ಲಕ್ಷ್ಮೀದೇವಿಯು ಮಿತಾಕ್ಷರವ್ಯಾಖ್ಯಾನ ಎಂಬ ಗ್ರಂಥವನ್ನು ರಚಿಸಿದಾಳೆ. ಪ್ರವೀಣಾಬಾಂಪಿ. `+ ++-- ಬುಂದೆಲು ಖಂಡದ ರಾಜನಾದ ಇಂದ್ರಜಿಂಹನ ಸಭೆಯಲ್ಲಿ ಅನೇಕ ಕವಿರತ್ನಗಳು ಪ್ರಕಾಶಿಸುತಲಿದ್ದರು. ಅವರೆಲ್ಲರಲ್ಲಿಯೂ ವಿದುಷೀಮಣಿಯಾದ ಪ್ರವೀಣಾಬಾಯಿಯೂ, ಕೇಶವದಾಸಪಂಡಿತನೂ ವಿಶೇಷ ಪ್ರಸಿದ್ದರಾಗಿದ್ದರು. ಪ್ರವೀಣಾಬಾಯಿಯ ಕವಿತ್ವವು ಸರ್ವಜನ ಸನ್ಮಾನಾರ್ಹವಾಗಿದ್ದಿತು. ಮಹಾ ಕವಿಯಾದ ಕೇಶವದಾಸ ಪಂಡಿತನು ಈಕೆಯನ್ನು ಸನ್ಮಾನಿಸುವಸಲುವಾಗಿ * ಕವಿಪ್ರಿಯ ' ಎಂಬ ಕಾವ್ಯವನ್ನು ರಚಿಸಿದನು. ಪ್ರವೀಣಾಬಾಯಿಯು ಕವಿತ್ವವನ್ನು ಹೇಳುವುದಕ್ಕೆ ಕಲಿತ ಕೆಲವು ಕಾಲದಲ್ಲಿಯೇ ಈಕೆಯ ಯಶಶ್ಚಂದ್ರಿಕೆಯು ನಾಲ್ಕು ದಿಕ್ಕುಗಳಿಗೂ ವ್ಯಾಪಿಸ ಲಾರಂಭಿಸಿತು. ಅಕ್ಷರುಚಕ್ರವರ್ತಿಯು ಈಕೆಯ ಯಶಸ್ಸನ್ನು ಕೇಳಿ ತನ್ನ ಸಭೆಗೆ ಈಕೆಯನ್ನು ಆಹ್ವಾನಮಾಡಿದನು ಆದರೆ ಇಂದ್ರಜಿತ್ಸ೦ಹನು ಈಕೆಯನ್ನು ಕಳುಹಿಸಲು ಅಂಗೀಕರಿಸಲಿಲ್ಲ. , ಅದರಿಂದ ಅಕ್ಷರನು ಆಗ್ರಹಗ್ರಸ್ತನಾಗಿ, ಹತ್ತು ಲಕ್ಷ ರೂಪಾಯಿಗಳನ್ನು ಅಪರಾಧವಾಗಿ ಕೊಡಬೇಕೆಂದು ಇಂದ್ರಜಿತ್ತಿ೦ಹನಿಗೆ ದಂಡನೆಯನ್ನು ವಿಧಿಸಿದನು. ಆಸಮಯದಲ್ಲಿ ಕೇಶವದಾಸನು ದರ್ಬಾರಿಗೆ ಹೋಗಿ ವೀರಬಲನಸಹಾಯದಿಂದ ಇಂದ್ರಜಿತ್ಸ೦ಹನನ್ನು ಅರ್ಥದಂಡನೆಯಿಂದ ತಪ್ಪಿಸಿದನು. ಕೊನೆಗೆ ಪ್ರವೀಣಾಬಾಯಿಯನ್ನು ದರ್ಬಾರಿಗೆ ಅಕ್ಷರನು ಕರೆಯಿಸಿಕೊಂಡನು. ಚಕ್ರವರ್ತಿಯು ಈಕೆಯ ವಿದ್ಯಾತಿಶಯವನ್ನು ನೋಡಿ ಸಂತೋಷಿಸಿದನು. ಪ್ರವೀಣಾಬಾಯಿಯು ಕೆಲವು ದಿನಗಳು ದರ್ಬಾರಿನಲ್ಲಿ ಇದ್ದು, ಅನಂತರ ಸ್ವಸ್ಥಾನಕ್ಕೆ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೮೦
ಗೋಚರ