ರಾಮಮಣಣ.
ವಂಗದೇಶದ ವಿದುಷಿಯರಲ್ಲಿ ರಾಮಮಣಿಯು ಬಹು ಪ್ರಾಚೀನಳು, ಈಕೆಯು ಚಂಡೀದಾಸನೆಂಬ ಮಹಾಕವಿಯಕಾಲದಲ್ಲಿ ಇದ್ದಳು, ಈಕೆಯು ಶ್ರೀರಾಧಾ ಕೃಷ್ಣರ: ಪ್ರೇಮಲೀಲೆಯನ್ನು ಕುರಿತು ಕೆಲವು ಕೀರ್ತನೆಗಳನ್ನು ರಚಿಸಿದಳು. ಈ ಕೀರ್ತನೆಗಳು ಬಹು ಮನೋಹರವಾಗಿವೆಯಂತೆ. ಈಕೆಯು ಕುಲದಲ್ಲಿ ನಾಪಿತೆಯು, ಈಕೆಯು ಏಕಾಕಿನಿಯಾಗಿ ದೇಶ ಸಂಚಾರಮಾಡುತ್ತ ವೀರಭೂಮಿ ಜಿಲ್ಲೆಯಲ್ಲಿ ಇರುವ ವಿಶಾಲಾಕ್ಷಿಯ ಮಂದಿರಕ್ಕೆ ಬಂದಳು. ಆಗ ಚಂಡೀದಾಸನು ಅಲ್ಲಿ ಪೂಜಾರಿಯಾಗಿ ಇದ್ದನು. ಆತನು ರಾಮನುಣಿಯ ಅವಸ್ಥೆಯನ್ನು ನೋಡಿ, ಆಕೆಯನ್ನು ದೇವಾಲಯದಲ್ಲಿ ದಾಸಿ ಯಾಗಿ ನಿಯಮಿಸಿದನು. ಅಂದಿನಿಂದ ರಾಮಮಣಿಯು ದೇವೀಪ್ರಸಾದವನ್ನು ಭುಜಿಸುತ್ತ ಅಲ್ಲಿಯೇ ಕಾಲವನ್ನು ಕಳೆಯುತ್ತ ಇದಳು. ಚಂಡೀದಾಸನು ಈಕೆಯನ್ನು ತಾಯಿಯಂತೆ ಭಾವಿಸಿ ಇದ್ದನು. ಆತನು ತನ್ನ ಕಾವ್ಯಗಳಲ್ಲಿ ರಾಮಮಣಿಯನ್ನು ತಾಯಿ ಎಂತಲೂ, ಗುರಿ ಎಂತಲೂ ಸಂಬೋಧಿಸಿ ಇದಾನೆ. ರಾಮಮಣಿಯು ಸಹ ಚಂಡೀದಾಸನಲ್ಲಿ ವಿಶೇಷ ಪ್ರೇಮಉಳ್ಳವಳಾಗಿ ಇದ್ದಳು. ಮಾಧವೀದೇವಿ, ಈಕೆಯ ನಿವಾಸಸ್ಥಳವು ಜಗನ್ನಾಧ, ಚೈತನ್ಯ ಸ್ವಾಮಿಯ ಶಿಷ್ಯರಲ್ಲಿ ಪ್ರಸಿದ್ಧನಾದ ಶಿಖೀಮಹತಿಯು ಮಾಧವೀದೇವಿಯ ಸೋದರನು. ಚೈತನ್ಯ ಸ್ವಾಮಿಯು ದಕ್ಷಿಣದೇಶದಿಂದ ನೀಲಾಚಲಕ್ಕೆ ಬಂದ ಸಮಯದಲ್ಲಿ ಮಾಧವೀದೇವಿಯು ಆತನನ್ನು ನೋಡಿದಳು. ಆಸಮಯದಲ್ಲಿ ಈಕೆಯ ಹೃದಯದಲ್ಲಿ ಭಗವದ್ಭಕ್ತಿಯು ಅಂಕುರಿಸಿತು. ಕ್ರಮಕ್ರಮವಾಗಿ ಭಕ್ತಿಯು ಅಭಿವೃದ್ಧಿಯಾಗಿ ಕೊನೆಗೆ ಮಹಾಭಕ್ತಳಾದಳು. ಚೈತನ್ಯ ಸ್ವಾಮಿಯು ಸನ್ಯಾಸವನ್ನು ಸ್ವೀಕರಿಸಿದ