ಆನ೦ದಮಯಿಾದೇವಿ. ೩೭೧ ರಾಜನಗರ ನಿವಾಸಿಯಾದ ಕೃಷ್ಣದೇವ ವಿದ್ಯಾವಾಗೀಶನ “ ಪುತ್ರನಾದ ಹರಿ ವಿದ್ಯಾಲಂಕಾರ ಎಂಬಾತನು, ಶಿವಪೂಜಾ ಪದ್ದತಿಯನ್ನು ಕುರಿತು ಒಂದು ಗ್ರಂಥ ವನ್ನು ಬರೆದು ಆನಂದಮಯಿಾದೇವಿಯ ಬಳಿಗೆ ಕಳುಹಿದನು. ಈ ಗ್ರಂಥದಲ್ಲಿ ಅನೇಕ ದೋಷಗಳು ಇದ್ದವು. ಅದರಿಂದ ಈಕೆಯು " ಪುತ್ರನ ವಿದ್ಯಾವಿಷಯ ದಲ್ಲಿ ನೀವು ಬಹಳ ಅಶ್ರದ್ದೆ ಯುಳ್ಳವರಾಗಿ ಇದೀರಿ ” ಎಂದು ಕೃಷ್ಣ ದೇವವಿದ್ಯಾ ವಾಗೀಶನ ಹೆಸರಿಗೆ ಪತ್ರವನ್ನು ಬರೆದಳು. ಸಂಸ್ಕೃತದಲ್ಲಿ ವಿಶೇಷ ಪಾಂಡಿತ್ಯವು ಇಲ್ಲದಿದ್ದರೆ ಶಿವಪೂಜಾಪದ್ಧತಿಯಲ್ಲಿ ದೋಷವನ್ನು ಕಂಡುಹಿಡಿಯುವುದಕ್ಕೆ ಸಾಧ್ಯ ವಾಗುತ್ತಿರಲಿಲ್ಲ ಆದುದರಿಂದ ಆನಂದಮಯಿಾದೇವಿಯು ಸಂಸ್ಕೃತಭಾಷೆಯಲ್ಲಿ ಉತ್ತಮಜ್ಞಾನವನ್ನು ಪಡೆದಿದ್ದಳು ಎಂದು ತಿಳಿಯಬಹುದು. - ಒಂದುಸಲ ರಾಜವಲ್ಲಭ ಎಂಬ ರಾಜನು, ಲಾಲಾರಾಮಗತಿರಾಯನಿಗೆ ಅಗ್ನಿಸ್ಕೊಮವಿಧಾನವನ್ನು ಕುರಿತು ಬರೆದು ಕಳುಹಿಸುವಂತೆ ಒಂದು ಪತ್ರವನ್ನು ಬರೆದನು. ಆಗ ರಾಮಗತಿರಾಯನು ಪುನಶ್ಚರಣೆಯಲ್ಲಿ ಇದ್ದುದರಿಂದ ತಾನು ಆ ವಿಷಯಕ್ಕೆ ಪ್ರತ್ಯುತ್ತರವನ್ನು ಬರೆಯಲಾರದೆ ತನ್ನ ಮಗಳಾದ ಆನಂದಮಯಿಾ ದೇವಿಯನ್ನು ಆ ಕಾರ್ಯಕ್ಕೆ ನಿಯಮಿಸಿದನು. ಆಕೆಯ ಪಾಂಡಿತ್ಯದಲ್ಲಿ ಸಂಪೂರ್ ವಿಶ್ವಾಸವು ಇದ್ದುದರಿಂದಲೇ, ಅನೇಕ ಪಂಡಿತರು ಇರುವ ಸಭೆಗೆ ಹೋಗುವ ಪ್ರತ್ಯುತ್ತರವನ್ನು ಬರೆಯುವುದಕ್ಕೆ ಆತನು ಪುತ್ರಿಯನ್ನು ನಿಯಮಿಸಿದನು. ತಂದೆಯ ಅನುಜ್ಞೆಯಂತೆ ಅಗ್ನಿಸ್ಕೊಮವಿಧಾನವನ್ನು ಬರೆದು, ಆನಂದಮಯಿಾ ದೇವಿಯು ರಾಜಸಭೆಗೆ ಕಳುಹಿಸಿದಳು. ಈಕೆಯು ಚಿಕ್ಕ ಚಿಕ್ಕ ಕಾವ್ಯಗಳನ್ನು ಬರೆದು, ಅವುಗಳಿಂದ ಮಾತೃಭಾಷೆ ಯನ್ನು ಅಲಂಕರಿಸಿದಳು, ಈಕೆಯ ಚಿಕ್ಕಪ್ಪನಾದ ಲಾಲಾಜಯನಾರಾಯಣನು ಕವೀಶ್ವರನು, ಈತನು ರಚಿಸಿದ ' ಹರಿಲೀಲಾ ' ಎಂಬ ಗ್ರಂಥದಲ್ಲಿ ಈಕೆಯು ರಚಿಸಿದ ಅನೇಕ ಪದ್ಯಗಳು ಇವೆಯೆಂದು ಹೇಳುತ್ತಾರೆ. ಈಕೆಯು ರಚಿಸಿದ ಯಾವಗ್ರಂಥವೂ ಈಗ ಪೂರ್ಣವಾಗಿ ದೊರೆಯುವದಿಲ್ಲ. ಆಯಾ ಗ್ರಂಥಗಳ ಕೆಲವು ಭಾಗಗಳು ಮಾತ್ರ ಅಲ್ಲಲ್ಲಿ ಕಾಣಬರುವುದು. ಜಯನಾರಾಯಣನು ರಚಿಸಿದ ಚ೦ಡೀಕಾವ್ಯದಲ್ಲಿ ಸಹ ಈಕೆಯು ರಚಿಸಿದ ಪದ್ಯಗಳು ಇವೆಯಂತೆ. ಈಕೆಯು ರಚಿಸಿದ ಗ್ರಂಥಗಳಲ್ಲಿ * ಉಮಾದೇವಿಯ ವಿವಾಹ ' ಎಂಬ ಗ್ರಂಥವು ಪ್ರಸಿದ್ದವಾದುದು, ಇದನ್ನು ಅನೇಕ ಜನರು ಕಂಠಸ್ಟ ಮಾಡಿಕೊಂಡು ಹಾಡುತ್ತಾರೆ. ಗಂಗಾಮಣಿಯು ಆನಂದಮಯಿಾದೇವಿಯ ಸೋದರತ್ತೆಯು, ಈಕೆಯೂ ವಿದ್ಯಾವತಿ, ಈಕೆಯು ರಚಿಸಿದ ಮಂಗಳಗಳನ್ನೂ, ಇತರ ಹಾಡುಗಳನ್ನೂ 37
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೮೬
ಗೋಚರ