೩೩೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ವಿವಾಹವೇ ಮೊದಲಾದ ಶುಭಕಾರ್ಯಗಳ ಸಮಯದಲ್ಲಿ ಹಾಡುತ್ತಾರೆ. ಈಕೆಯು ಸೀತಾವಿವಾಹವನ್ನು ಕುರಿತು ಬರೆದ ಪದ್ಯಮಾಲಿಕೆಯು ಪ್ರಶಂಸಾರ್ಹ ವಾದುದಾಗಿದೆ. ವೈಜಯಂತಿ. --:೦:. ಈಕೆಯ ಜನ್ಮಸ್ಥಾನವು ವಂಗದೇಶದ ಫರಿದು ಪುರಿಜಿಲ್ಲೆಗೆ ಸೇರಿದ - ದನುಕಾ? ಎಂಬ ಗ್ರಾಮವು, ಮಹಾಪಂಡಿತನಾದ ಮಯೂರ ಭಟ್ಟನ ವಂಶದಲ್ಲಿ ಈಕೆಯು ಜನ್ನಿಸಿದಳು, ಈಕೆಗೆ ಬಾಲ್ಯದಿಂದಲೂ ವಿದ್ಯಾರ್ಜನೆಯಲ್ಲಿ ಆಸಕ್ತಿಯು ಹೆಚ್ಚು, ಆದಕಾರಣ ಈಕೆಯ ತಂದೆಯು ಈಕೆಗೆ ವಿಶೇಷ ಶ್ರದ್ದೆಯಿಂದ ಓದು ಬರಹವನ್ನು ಕಲಿಸುತಲಿದ್ದನು. ಈಕೆಯು ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಬಹು ಸ್ವಲ್ಪ ಕಾಲದಲ್ಲಿಯೇ ಸಂಸ್ಕೃತಭಾಷೆಯಲ್ಲಿ ಉತ್ತಮ ಜ್ಞಾನವನ್ನು ಪಡೆದ ಳಂತೆ, ವೈಜಯಂತಿಯು ವ್ಯಾಕರಣಶಾಸ್ತ್ರವನ್ನು ಅಭ್ಯಸಿಸಿದಮೇಲೆ ಧರ್ಮ ಶಾಸ್ತ್ರಗಳನ್ನು ಓದುವುದಕ್ಕೆ ಪ್ರಾರಂಭಿಸಿದಳು. ದುರ್ಗಾದಾಸ ತರ್ಕವಾಗೀಶನ ಪುತ್ರನಾದ ಕೃಷ್ಣನಾಥ ಪಂಡಿತನಿಗೆ ವೈಜಯಂತಿಯನ್ನು ಕೊಟ್ಟು ಆಕೆಯ ತಂದೆಯು ವಿವಾಹವನ್ನು ಮಾಡಿದನು. ಆದರೆ ಈಕೆಯ ತಂದೆಗಿ೦ತಲೂ ಮಾವನು' ವಂಶಮರ್ಯಾದೆಯಲ್ಲಿ ಶ್ರೇಷ್ಠ ನಾಗಿದ್ದುದರಿಂದ, ಆತನು ಪ್ರಥಮದಲ್ಲಿ ವೈಜಯಂತಿಯನ್ನು ತನ್ನ ಸೊಸೆಯಾಗಿ ಅಂಗೀಕರಿಸಲು ಇಷ್ಟ ಪಡಲಿಲ್ಲ. ಕೊನೆಗೆ ವೈಜಯಂತಿಯ ವಿದ್ಯಾಸಂಪತ್ತಿಗೆ ಮೆಚ್ಚಿ, ತರ್ಕವಾಗೀಶನು ಈಕೆಯನ್ನು ತನ್ನ ಮಗನಿಗೆ ತಂದುಕೊಳ್ಳಲು ಸಮ್ಮತಿಸಿ ದನು. ದುರ್ಗಾದಾಸ ತರ್ಕವಾಗೀಶನು ವಂಶಮರ್ಯಾದೆಯ ಅಭಿಮಾನ ವನ್ನು ಬಿಟ್ಟರೂ ಆತನ ಪುತ್ರನು ವಂಶಾಭಿಮಾನವನ್ನು ತ್ಯಜಿಸಲು ಒಪ್ಪಲಿಲ್ಲ. ಆದರೆ ತಂದೆಯ ಆಜ್ಞೆಯನ್ನು ಮಾರಲಾರದೆ ಆತನು ವೈಜಯಂತಿಯನ್ನು ವಿವಾಹಮಾಡಿಕೊಂಡನ ಮಾವನು ಜೀವಿಸಿ ಇರುವವರೆಗೂ ವೈಜಯಂತಿಯು ಕೆಲವು ಕಾಲ ಭರ್ತೃ ಗೃಹದಲ್ಲಿಯೂ, ಕೆಲವು ಕಾಲ ತೌರುಮನೆಯಲ್ಲಿಯೂ ವಾಸಮಾಡುತ್ತ ಇದ್ದಳು. ಮಾವನ ಮರಣಾನಂತರ ಈಕೆಯನ್ನು ಕೃಷ್ಣನಾಥ ಪಂಡಿತನು ತ್ಯಜಿಸಿದುದ ರಿಂದ, ಈಕೆಯು ತೌರುಮನೆಯಲ್ಲಿಯೇ ವಾಸಮಾಡಬೇಕಾಯಿತು, ಈಕೆಯು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೮೭
ಗೋಚರ