ವೈಜಯಂತಿ. ೩೬೩ ಸರ್ವದಾ ವಿದ್ಯಾ ವ್ಯಾಸಂಗದಲ್ಲಿ ಕಾಲವನ್ನು ಕಳೆಯುತ್ತ ಮನೋದುಃಖವನ್ನು ಸ್ವಲ್ಪ ಕಡಮೆ ಮಾಡಿಕೊಳ್ಳುತ್ತ ಇದ್ದಳು. ಕೆಲವು ಕಾಲ ಹೀಗೆ ಕಳೆದಮೇಲೆ ವೈಜಯಂತಿಯು ಪತಿಗೆ ಒಂದು ಪತ್ರವನ್ನು ಲಿಖಿಸಿದಳು. ಕರುಣಾರಸಪೂರಿತಗಳಾದ ಪದ್ಯಗಳಿಂದ ತುಂಬಿರುವ ಆ ಪತ್ರ ವನ್ನು ನೋಡಿ, ಕೃಷ್ಣನಾಥ ಪಂಡಿತನು ಬಹಳ ದುಃಖಿಸಿ, ಸಾಮಾನ್ಯವಾದ ವಂಶ ಮರ್ಯಾದೆಗಾಗಿ, ತಾನು ಭಾರ್ಯೆಯನ್ನು ತ್ಯಜಿಸಿದುದಕ್ಕೆ ಅನುತಪ್ತ ಹೃದಯ ನಾದನು. ಅನಂತರ ಮಾವನ ಮನೆಗೆ ಹೋಗಿ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ವೈಜಯಂತಿಯು ಪತಿಗೃಹಕ್ಕೆ ಬಂದ ಅನಂತರವೂ ವಿದ್ಯಾಬ್ಯಾಸಂಗವನ್ನು ಬಿಡಲಿಲ್ಲ. ವಿರಾಮವು ದೊರೆತಾಗ ಈಕೆಯು ಪತಿಯ ಸಮಿಾಪದಲ್ಲಿಯೇ ಓದುತಲಿದ್ದಳು. ಕೃಷ್ಣನಾಥನು ಷಡ್ಡರ್ಶನಗಳಲ್ಲಿ ಅದ್ವಿತೀಯ ಪಂಡಿತನಾಗಿ ಇದ್ದನು. ಆತನ ಬಳಿಯಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತ ಇದ್ದರು. ಒಂದು ದಿವಸ ಪಂಡಿತನು ವಿದ್ಯಾರ್ಥಿಗಳಿಗೆ ಪ್ರಾಚೀನ ದರ ನಗ್ರಂಥದಲ್ಲಿ ಪಾಠ ವನ್ನು ಹೇಳುತ್ತ ಇದ್ದನು. ಆ ಗ್ರಂಥದಲ್ಲಿ ಒಂದುಕಡೆ * ಅತ್ರತುನೋಕ್ತಂ ', * ತತ್ರಾಪಿನೋಕ್ತಂ' ಎಂದು ಬರೆದಿತ್ತು, ಅದಕ್ಕೆ ಕೃಷ್ಣನಾಥ ಪಂಡಿತನು ( ಇಲ್ಲಿಯೂ ಹೇಳುವುದಕ್ಕೆ ಅವಕಾಶವು ಇಲ್ಲ, ' “ ಅಲ್ಲಿಯೂ ಹೇಳುವುದಕ್ಕೆ ಅವಕಾಶವು ಇಲ್ಲ. ' ಎಂದು ಅರ್ಥವನ್ನು ಹೇಳಿದನು. ಆದರೂ ಆತನ ಮನಸ್ಸಿನ ಸಂದೇಹವು ಹರಿಯಲಿಲ್ಲ. ಅದಕ್ಕೆ ಸರಿಯಾದ ಅರ್ಥವ ತಿಳಿಯದೆ ಯೋಚಿಸುತ್ತಿರಲು ಭೋಜನ ಕಾಲವು ಅತಿಕ್ರಮಿಸಿತು. ಆದರೂ ಸರಿಯಾದ ಅರ್ಥವು ತಿಳಿಯಲಿಲ್ಲ. ಆಗ ಒಬ್ಬ ಶಿಷ್ಯನು ಅಡಿಗೆಯ ಮನೆಗೆ ಹೋಗಲು, ಅವನನ್ನು ನೋಡಿ ವೈ ಜಯಂತಿಯು (ಸ್ಕಾನಾಹಾರಗಳನ್ನು ಮರೆತು ನೀವು ಏನುಮಾಡುತ್ತಿರುವಿರಿ?' ಎಂದು ಕೇಳಿದಳು. ಅದಕ್ಕೆ ವಿದ್ಯಾರ್ಥಿಯು * ಅತ್ರ ತುನೋಕ್ಕಂ ತತ್ರಾಪಿ ನೋಕ್ತಂ' ಎಂಬುದಕ್ಕೆ ಸರಿಯಾದ ಅರ್ಥವು ನಮ್ಮಗುರುಗಳಿಗೆ ಸ್ಪುರಿಸಲಿಲ್ಲ. ಆ ವಿಷಯವನ್ನು ಕುರಿತು ಆಲೋಚಿಸುತ್ತ ಇದಾರೆ. ಎಂದನು. ಆಗ ವೈ ಜಯಂತಿಯು “ನಿಮ್ಮ ಗುರುಗಳನ್ನು ಭೋಜನಕ್ಕೆ ಏಳುವಂತೆ ಹೇಳು. ಭೋಜನಾನಂತರ ಅದರ ಅರ್ಥವು ತಿಳಿಯುತ್ತದೆ.' ಎಂದು ನುಡಿದಳು. ಪತ್ನಿಯ ಮಾತುಗಳನ್ನು ಕೇಳಿ ಕೃಷ್ಣ ನಾಥ ಪಂಡಿತನು ಶಿಷ್ಯರೊಡನೆ ಸ್ನಾನಕ್ಕೆ ಹೋದನು, “ ಅತ್ರತುನೋಕ್ತಂ, ತತ್ರಾಪಿನೋಕ್ತಂ' ಎಂಬ ವಾಕ್ಯವನ್ನು ಕೇಳಿದ ಕೂಡಲೆ ಅದರ ಅರ್ಥವನ್ನು ವೈಜಯಂತಿಯು ಗ್ರಹಿಸಿದಳು. ಆದಕಾರಣ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೮೮
ಗೋಚರ