೩೬೪ ಅಬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಪತಿಯು ಸ್ನಾನಕ್ಕೆ ಹೋದಮೇಲೆ ಈಕೆಯು ಆ ಗ್ರಂಥದಲ್ಲಿ, ಅತ್ರ, ತು, ನ, ಉಕ್ತಂ, ತತ್ರ, ಅಪಿ, ನ, ಉಕ್ಕಂ ಎಂದು ಪದವಿಭಾಗವನ್ನು ಬರೆದು ಇಟ್ಟಳು. ಕೃಷ್ಣನಾಥನು ಸ್ನಾನಮಾಡಿಬಂದು ಭೋಜನವನ್ನು ಮಾಡಿ ಶಯನಿಸಿದನು. ಸ್ವಲ್ಪ ಹೊತ್ತಿಗೆ ನಿದ್ರೆಯಿಂದ ಎದ್ದು ಶಿಷ್ಯರಿಗೆ ಪಾಠವನ್ನು ಹೇಳುವುದಕ್ಕಾಗಿ ಆ ಗ್ರಂಥ ವನ್ನು ತೆರೆದು ಅದರಲ್ಲಿ ಇರುವ ಪದವಿಭಾಗವನ್ನು ನೋಡಿ ಬಹಳ ಸಂತೋಷಪಟ್ಟು, “ ಇದನ್ನು ಬರೆದವರಿಗೆ ಬಹುಮಾನವನ್ನು ಕೊಡುವೆನು” ಎಂದು ಹೇಳಿ, “ ಇದನ್ನು ಬರೆದವರು ಯಾರು” ಎಂದು ವಿದ್ಯಾರ್ಥಿಗಳನ್ನು ಕೇಳಿದನು. ಆದರೆ ವಿದ್ಯಾರ್ಥಿ ಗಳು ಯಾರೂ ಪ್ರತ್ಯುತ್ತರವನ್ನು ಕೊಡಲಿಲ್ಲ. ಆಗ ಆತನು ಈ ಪದವಿಭಾಗವನ್ನು ತನ್ನ ಪತ್ನಿಯು ಬರೆದಳು ಎಂದು ಗ್ರಹಿಸಿ ಪರಮಾನಂದ ಭರಿತನಾದನು. ಈಕೆಯು ಅನೇಕ ಶ್ಲೋಕಗಳನ್ನು ರಚಿಸಿದಳು, ಅವು ಈಗ ಕಾಣಬರುವುದಿಲ್ಲ. ಕೃಷ್ಣನಾಥ ಪಂಡಿತನು ತಾನು ರಚಿಸಿದ ' ಆನಂದಲತಿ ಕಾಚ೦ಪು' ಎಂಬ ಗ್ರಂಥ ದಲ್ಲಿ ತಾನು ಈಗ್ರಂಥವನ್ನು ರಚಿಸುವಾಗ ತನ್ನ ಪತ್ನಿಯು ವಿಶೇಷ ಸಹಾಯವನ್ನು ಮಾಡಿದಳೆಂದು ಬರೆದಿದಾನೆ. ' ಆನಂದಲತಿಕಾ ಗ್ರಂಥೋ ಯೇನಾಕಾರೀಸ್ಲಿಯಾ ಸಹಾ' ಆ ಗ್ರಂಥವನ್ನು ಪರಿಶೀಲನೆಮಾಡಿ ಓದಿದರೆ, ಅದರಲ್ಲಿ ವೈಜಯಂತಿಯ ರಚನೆಯನ್ನೂ, ಕೃಷ್ಣ ನಾಥಪಂಡಿತನ ರಚನೆಯನ್ನೂ ನಾವು ಬೇರೆ ಬೇರೆಯಾಗಿ ತಿಳಿದುಕೊಳ್ಳಬಹುದು, ಆನಂದಲತಿಕೆಯನ್ನು ರಚಿಸುವಕಾಲದಲ್ಲಿ ಒಂದು ದಿವಸ 'ಕೃಷ್ಣನಾಥಪಂಡಿತನು ಬೆಳಗಿನ ಜಾವದವರೆಗೂ ನಿದ್ರೆ ಮಾಡದೆ ನಾಯಿಕೆಯನ್ನು ವರ್ಣಿಸುತ್ತ ಇದ್ದನು. ಆಗ ವೈಜಯಂತಿಯು ಎಚ್ಚತ್ತು ಪತಿಯನ್ನು ನೋಡಿ “ ನಾಯಿಕೆಯನ್ನು ವರ್ಣಿಸುವುದಕ್ಕೆ ಇಷ್ಟು ಕಾಲವುಬೇಕೇ ? ನಾನು ಒಂದು ಶ್ಲೋಕದೊಳಗೆ ವರ್ಣಿಸುವೆನು ನೋಡಿರಿ.' ಎಂದು ಹೇಳಿ ಒಂದು ಶ್ಲೋಕ ದೊಳಗೆ ನಾಯಿಕೆಯ ವರ್ಣನೆಯನ್ನು ಪೂರ್ತಿಮಾಡಿದಳು. ವೈಜಯಂತೀದೇವಿಯು ವಂಗದೇಶದ ವಿದುಷಿಯರಲ್ಲಿ ಸರ್ವ ಶ್ರೇಷ್ಟಳೆಂದು ಹೇಳಬಹುದು. ಈಕೆಯು ದೊಡ್ಡ ಕವಯಿತ್ರಿಯಾಗಿ ಇದ್ದಳು, ಈಕೆಯ ಕಾಲವು ಸರಿಯಾಗಿ ತಿಳಿಯುವುದಿಲ್ಲ. ಕೆಲವು ಕಾರಣಗಳಿಂದ ಕ್ರಿ.ಶ. ೧೫೫೦ ನೆ ವರ್ಷದಲ್ಲಿ ಈಕೆಯು ಜನ್ನಿಸಿದಳು ಎಂತಲೂ, ಈಕೆಯ ೨೫ ನೆಯ ವರ್ಷದಲ್ಲಿ * ಆನಂದಲತಿಕಾಚ೦ಪು ' ಎಂಬ ಗ್ರಂಥವು ರಚಿಸಲ್ಪಟ್ಟಿತು ಎಂತಲೂ ಹೇಳ ಬಹುದು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೮೯
ಗೋಚರ