ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಅಬಲಾ ಸಚ್ಚರಿತ್ರ ರತ್ನ ಮಾಲೆ. ನಿಯು, ಪತಿ ದುಃಖವನ್ನು ನಿವಾರಣೆಮಾಡಿ, ತೆಗೆದುಕೊಂಡುಹೋಗಲು ಸಾಧ್ಯ ವಾದಷ್ಟು ಒಡವೆಗಳನ್ನು ಕೈಯಲ್ಲಿ ತೆಗೆದುಕೊಂಡು ಪತಿಯೂ, ತಾನೂ ಯಾರಿಗೂ ತಿಳಿಯದಂತೆ ಪಟ್ಟಣವನ್ನು ಬಿಟ್ಟು ಹೋದರು. ಬಾಲ್ಯದಿಂದಲೂ ಭವಾನಿಯು ಕಷ್ಟಗಳನ್ನು ಸ್ವಪ್ನದಲ್ಲಿ ಯೂ ಅರಿತವಳಲ್ಲ, ಪಲ್ಲಕ್ಕಿಯನ್ನು ಬಿಟ್ಟೆಂದಿಗೂ ನಡೆ ಡವಳಲ್ಲ. ಇಂತಹ ಶ್ರೀಮತಿಯಾದ ರಾಣೀಭವಾನಿಯು ಈ ಕಷ್ಟವು ಪ್ರಾಪ್ತ ವಾದ ಸಮಯದಲ್ಲಿ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಇಷ್ಟು ಕಷ್ಟಗಳು ಸಂಭವಿಸಿದರೂ ಪತಿಯ ಪ್ರಾಣವು ಸುರಕ್ಷಿತವಾಗಿರುವದೆಂಬ ಸಂತೋಷದಿಂದ ಆಕೆಯು ಧೈರ್ಯದೊಡನೆ ನಡೆಯಲಾರಂಭಿಸಿದಳು. ಅವರು ಹೀಗೆ ಅತಿ ಪ್ರಯಾಣ ನಡೆದು ಪದ್ಮಾನದೀತೀರವನ್ನು ಸೇರಿದರು. ಅಲ್ಲಿ ಒಬ್ಬ ನಾವಿಕನನ್ನು ಆಶ್ರಯಿಸಿ ನದಿಯನ್ನು ದಾಟಿ ಮುರ್ಷಿದಾಬಾದನ್ನು ಪ್ರವೇಶಿಸಿ, ಬಡವರಂತೆ ಚಿಕ್ಕದಾದ ಗೃಹದಲ್ಲಿ ವಾಸಮಾಡಿಕೊಂಡಿದ್ದರು. ಅಲ್ಲಿಗೆ ಹೋದಮೇಲೆ ರಾಮ ಕಾಂತನು ತನ್ನ ಪೂರ್ವದ ಕೆಟ್ಟ ನಡತೆಗೆ ಪಶ್ಚಾತ್ತಾಪಪಟ್ಟು, ಇನ್ನು ಮೇಲೆ ಗುಣ ವತಿಯಾದ ತನ್ನ ಪತ್ನಿಯ ಇಷ್ಟಾನುಸಾರವಾಗಿ ನಡೆಯುವಂತೆ ಒಪ್ಪಿಕೊಂಡನು. ಭವಾನಿಯು ನವಾಬನ ಭಂಡಾರದಧಿಕಾರಿಯಾದ ಜಗತೈಟಿನೊಡನೆ ತನ್ನನ್ನು ಸಾಕುಮಗಳಂತೆ ಭಾವಿಸಬೇಕೆಂದು ನುಡಿದು, ಆತನಿಗೂ ತನ್ನ ಪತಿಗೂ ಸ್ನೇಹ ವನ್ನುಂಟುಮಾಡಿದಳು. ತಮಗೆ ಪೂರ್ವದಲ್ಲಿ ಮಂತ್ರಿಯಾಗಿದ್ದು ಕಡೆಗೆ ತಮ್ಮನ್ನು ಈ ಸ್ಥಿತಿಗೆ ತಂದ ದಯಾರಾಮನನ್ನು ಕರೆಯಿಸಿ, ಆತನ ಪಾದಗಳಿಗೆ ತನ್ನ ಪತಿ ಯಿಂದ ನಮಸ್ಕಾರವನ್ನು ಮಾಡಿಸಿ, ತಮ್ಮ ಅಪರಾಧಗಳನ್ನು ಕ್ಷಮಿಸಬೇಕೆಂದು ಬೇಡಿಕೊಂಡಳು. ಹೀಗೆ ಪ್ರಾರ್ಥಿಸಲಾಗಿ ದಯಾರಾಮನು ಮನಸ್ಸು ಕರಗಿದವ ನಾಗಿ, ರಾಮಕಾಂತನಿಗೆ ಪುನಃ ರಾಜ್ಯವನ್ನ ಕೊಡಿಸುವೆನೆಂದು ಪ್ರತಿಜ್ಞೆಯನ್ನು ಮಾಡಿದನು. ಅನಂತರ ರಾಣಿಯು ತನ್ನ ಆಭರಣಗಳನ್ನು ಮಾರಿ ಬಂದ ಹಣ ವನ್ನು ದಯಾರಾಮನ ಮೂಲಕ ಅಧಿಕಾರಿಗಳಿಗೆ ಲಂಚವನ್ನು ಕೊಡಿಸಿ, ಅವ ರನ್ನು ತಮ್ಮ ಪಕ್ಷವನ್ನು ಅವಲಂಬಿಸುವಂತೆ ಮಾಡಿದಳು. ಹೀಗೆ ಇವರ ಪಕ್ಷ ವನ್ನು ಅವಲಂಬಿಸಿದ ಅಧಿಕಾರಿಗಳೂ, ದಯಾರಾಮನೂ ಮತ್ತು ಜಗತೈಟನೂ ಸೇರಿ ಹೇಗೋ ನವಾಬನ ಮನಸ್ಸನ್ನು ತಿರಿಗಿಸಿ, ಪುನಃ ರಾಮಕಾಂತನಿಗೆ ರಾಜ್ಯ ವನ್ನು ಕೊಡಿಸಿದರು. ಹೀಗೆ ಹೋದ ರಾಜ್ಯವನ್ನು ಮರಳಿ ಸಂಪಾದಿಸುವುದರಲ್ಲಿ ರಾಣೀಭವಾನಿಯು ತೋರಿದ ಅತ್ಯಂತ ಬುದ್ದಿ ಕೌಶಲವೂ, ಈಕೆಗಿರುವ ಅತಿಶಯ ನಾದ ಪತಿಭಕ್ತಿಯೂ ಸ್ತೋತ್ರಾರ್ಹಗಳಾಗಿವೆ. ರಾಜ್ಯವು ಪುನಃ ದೊರೆತಮೇಲೆ ೧೯ ವರುಷಗಳಕಾಲ ರಾಮಕಾಂತನು ತನ್ನ ಭಾರ್ಯಾಮಣಿಯ, ಮತ್ತು ಮಂತ್ರಿ ಪುಂಗವನ ಅನುಮತಿಯಂತೆ ಸುಖವಾಗಿ ರಾಜ್ಯವನ್ನು ಪಾಲಿಸುತ್ತಿದ್ದು ಕೆಲದಿನ ಗಳ ಬಳಿಕ ಮೃತನಾದನು, ಪತಿಯ ಮರಣಕಾಲದಲ್ಲಿ ಭವಾನಿಯು ೩೫ ವರುಷ ವಯಸ್ಸುಳ್ಳವಳಾಗಿದ್ದಳು.