418 ಅಬಲಾ ಸಚ್ಚರಿತ್ರ ರತ್ನ ಮಾಲೆ. ಗೋಪಾಲೇಭ್ಯರ ಭೀಷ್ಟದಂ ವ್ರಜವಧೂ ನೇತ್ರೋತ್ಸವೈರಕ್ಟಿತಂ ! ಬರ್ಹಾಲಂಕೃತಮಸ್ತಕಂ ಸುಲಲಿತ್ಸೆ ರಂಗೈತ್ರಿ ಭಂಗಂಭಳೇ ಗೋವಿಂದಂ ವ್ರಜಸುಂದರಂ ಭವಹರಂ ವಂಶೀಧರಂ ಶ್ಯಾಮಲಂ || ಪ್ರಿಯಂವದಾದೇವಿಯು ಈ ಶ್ಲೋಕವನ್ನು ವಿದ್ಯಾರ್ಥಿಗಳ ನಾಧ್ಯವಿಲ್ಲ. ನಿಂತುಕೊಂಡು ಓದುವಾಗ, ಶಿವರಾಮದೀಕ್ಷಿತನು ಪುತ್ರಿಯಕಡೆ ನೋಡಿ ಆನಂ ದಾಶ್ರುಗಳನ್ನು ಸುರಿಸುತ್ತ ಆಕೆಯನ್ನು ಆಲಿಂಗನಮಾಡಿಕೊಂಡನು. ಆಕೆಯ ಕವಿತ್ವ ಶಕ್ತಿಗೆ ವಿದ್ಯಾರ್ಥಿಗಳು ಆಶ್ಚರ್ಯಾನ್ವಿತರಾದರು. ಅಂದಿನಿಂದ ಈಕೆಯು ಪ್ರತಿದಿನವೂ ಶ್ಲೋಕಗಳನ್ನು ರಚಿಸಿ ತಂದೆಗೆ ಹೇಳುತ ಲಿದ್ದಳು. ವಿವಾಹವು ನಡೆದಮೇಲೆ ಈಕೆಯು ಸತಿಗೃಹಕ್ಕೆ ಹೋದಳು. ಅಲ್ಲಿಯೂ ಈಕೆಯು ವಿದ್ಯಾ ವ್ಯಾಸಂಗವನ್ನು ಬಿಡದೆ ಕ್ರಮಕ್ರಮವಾಗಿ ವಿಶೇಷ ಪಾಂಡಿತ್ಯವನ್ನು ಪಡೆದಳು. ಪ್ರಿಯಂವದಾದೇವಿಯು ವಿದ್ವಾಂಸಳೆಂಬ ಗರ್ವದಿಂದ, ಸಂಸಾರಸಂಬಂಧವಾದ ಕಾರ್ಯಗಳು ತುಚ್ಛವಾದುದು ಎಂದು ಕನಸ್ಸಿನಲ್ಲಿಯೂ ಭಾವಿಸಿದವಳಲ್ಲ. ಪತಿ ಸೇವೆ, ಆತಿಥ್ಯ ಭ್ಯಾಗತರಸತ್ಕಾರ, ಗೋಸೇವೆ, ಪಾಕ ಇವುಗಳನ್ನೆಲ್ಲ ಪ್ರಿಯಂವದಾ ದೇವಿಯು ಸ್ವಯಮಾಗಿ ಮಾಡುತ್ತ ಗೃಹಕೃತ್ಯಗಳನ್ನು ನಿರ್ವಹಿಸುತಲಿದ್ದಳು. ಈಕೆಯು ವಿರಾಮ ಸಮಯವನ್ನು ವ್ಯರ್ಥವಾಗಿ ಕಳೆಯದೆ ಸದ್ದಂಥಗಳನ್ನು ಓದುತಲಿದ್ದಳು. ಇಲ್ಲೇ ಈಕೆಯ ಚರಿತ್ರೆಯು ಪರಿಪೂರ್ಣವಾಗಿ ವಿಕಾಸವನ್ನು ಪಡೆಯಿತು. ಈಕೆಯು ಯಾವ ಹಸ್ತದಿಂದ ಮೃದುಮಧುರ ಗೀತಗಳನ್ನು ಬರೆ ಯುತ್ತಲಿದ್ದಳೋ, ಆ ಹಸ್ತದಿ೦ದಲೇ ಮನೆಯನ್ನು ಗುಡಿಸುತ್ತಿದ್ದಳು. ಇಂತಹ ಕೆಲಸಗಳನ್ನು ಆಕೆಯು ಅವಮಾನಕರಗಳಾದುವೆಂದು ತಿಳಿಯದೆ, ಅವುಗಳನ್ನು ಅತ್ಯಂತ ಸಂತೋಷದೊಡನೆ ಮಾಡುತಲಿದ್ದಳು, ಇಂತಹ ವಿದುಷೀಮಣಿಯ ಅಲ್ಲವೇ ಭಾರತಗೃಹಿಣಿಯರಿಗೆ ಆದರ್ಶಸ್ವರೂಪರು ! ಈಕೆಯ ಹೆಸರಿಗೆ ತಕ್ಕಂತೆಯೇ ಈಕೆಯ ಕಂಠಸೈರವುಸಹ ಬಾಲ್ಯದಿಂದಲೂ `ಮಧುರವಾಗಿತ್ತು. ಈಕೆಯು ಪತಿಭಕ್ತಿ ಪರಾಯಣೆಯಾಗಿ, ಪತಿಯ ಆಜ್ಞೆ ಯನ್ನು ವೇದವಾಕ್ಯವೆಂದು ಎಣಿಸಿ ಪರಿಪಾಲಿಸುತ್ತಿದ್ದಳು. ಅನೇಕ ವಿದ್ಯಾರ್ಥಿ ಗಳು ಈಕೆಯ ಪತಿಯಹತ್ತಿರ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಪ್ರಿಯಂವದಾ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೯೩
ಗೋಚರ