ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

, ಜೇಬು ಉನ್ನಿಸಾ. ೩೬೯ ದೇವಿಯು ಅವರನ್ನು ತಾಯಿಯಂತೆ ಕಾಪಾಡುತ್ತ, ಅವರಿಗೆಲ್ಲ ತಾನೇ ಅಡಿಗೆ ಯನ್ನು ಮಾಡಿ ಊಟಮಾಡಿಸುತ್ತಿದ್ದಳು. ಈಕೆಗೆ ಜ್ಞಾಪಕಶಕ್ತಿಯು ಹೆಚ್ಚು, ಒಂದು ತಿಂಗಳಿನಲ್ಲಿ ಅಮರವನ್ನೂ, ಮಹಾಭಾರತದಲ್ಲಿ ಇರುವ ಸಾವಿತ್ರೀ, ದಮಯಂತೀ ಚರಿತ್ರೆಗಳನ್ನೂ ಕಂಠಸ್ಥೆ ಮಾಡಿಕೊಂಡಳು ಎಂದು ಹೇಳುತ್ತಾರೆ. ಈಕೆಯು ಮದಾಲಸಾ ಚರಿತ್ರೆಗೆ ದಾರ್ಶನಿಕ ವ್ಯಾಖ್ಯಾನವನ್ನೂ, ಶಾಂತಿಪರ್ವದಲ್ಲಿ ಇರುವ ಮೋಕ್ಷಧರ್ಮಕ್ಕೆ ಟೀಕೆ ಯನ್ನೂ ರಚಿಸಿದಳು. ಈಕೆಯ ಲಿಪಿಯು ಸೊಗಸಾಗಿ ಇದ್ದಿತು. ಅದರಿಂದ ಈಕೆಯು ತನ್ನ ಪತಿಯು ಕಾಶಿಯಿಂದ ತೆಗೆದುಕೊಂಡುಬಂದ ಸಂಸ್ಕೃತ ಗ್ರಂಥಗಳನ್ನು ವಂಗ. ಲಿಪಿಯಲ್ಲಿ ಬರೆದಳು. ಪ್ರಿಯಂವದಾದೇವಿಯು ವಿವಾಹಕ್ಕೆ ಪೂರ್ವದಲ್ಲಿ ಕಾವ್ಯ ನಾಹಿತ್ಯದಲ್ಲಿ ವಿಶೇಷ ಶ್ರದ್ಧೆಯುಳ್ಳವಳಾಗಿ ಇದ್ದಳು. ವಿವಾಹಾನಂತರ ಪತಿಯ ಸಹಾಯ ದಿಂದ ದರ್ಶನಶಾಸ್ತ್ರಗಳಲ್ಲಿ ಸುಶಿಕ್ಷಿತೆಯಾದಳು. ಜೇಬು ಉನ್ನಿಸಾ. ಈಕೆಯು ಔರಂಗಜೇಬನ ಮಗಳು, ಈಕೆಯ ತಾಯಿಯೂ ಒಬ್ಬ ನವಾಬನ ಮಗಳು. ಔರಂಗಜೇಬನು ಜೇಬುಉಸಳ ಬಾಲ್ಯದಿಂದಲೂ ಆಕೆಯಲ್ಲಿ ಅತ್ಯಂತಪ್ರೀತಿಯುಳ್ಳವನಾಗಿ ಇದ್ದನು. ಮತ್ತು ಆಕೆಯ ಬುದ್ದಿ ವೈಭವವನ್ನು ನೋಡಿ ತಾನೇ ಆಕೆಗೆ ಓದುಬರಹವನ್ನು ಕಲಿಸುತಲಿದ್ದನು. ಈಕೆಗೆ ವಿಶೇಷ ಜ್ಞಾಪಕಶಕ್ತಿಯು ಇದ್ದಿತು. ಆದುದರಿಂದ ಈಕೆಯು ಬಾಲ್ಯದಲ್ಲಿಯೇ ಮಹಮ್ಮದೀಯ ಮತಗ್ರಂಥವಾದ ಖುರಾನನ್ನು ಕಂಠಸ್ಥ ಮಾಡಿಕೊಂಡು ತಂದೆಗೆ ಒಪ್ಪಿಸಿದಳು. ಆಗ ಔರಂಗಜೇಬನು ಪರಮಾನಂದಭರಿತನಾಗಿ ಪುತ್ರಿಗೆ ಮೂರುಸಾವಿರ ಮೊಹರಿಗಳನ್ನು ಬಹುಮಾನವಾಗಿ ಕೊಟ್ಟನು. ಜೇಬುಉನ್ನಿಸಳು ಅತ್ಯಂತ ಸೌಂದರ್ಯವತಿಯಾಗಿ ಇದ್ದಳು, ಈಕೆಯ ಸೌಂದರ್ಯವು ಮೇಧಾಸಂಪತ್ತಿನೊಡನೆ ಸೇರಿದ್ದುದರಿಂದ ವಿಶೇಷ ಪ್ರಕಾಶ ವಾಗಿ ಇದ್ದಿತು. ಆ ಗರ್ಭ ಶ್ರೀಮಂತಳಾದ ಜೇಬುನ್ನಿಸಳು ವಿಶೇಷ 38