ಇಂದ್ರಮಾತ್ಯಗಣವು.
- 0:----
ಇಂದ್ರಶ್ನಿಯ ತಂದೆಗೆ ಅನೇಕಮಂದಿ ಹೆಂಡತಿಯರು ಇದ್ದರು. ಇವರೆಲ್ಲರೂ ಸೇರಿ ರಚಿಸಿದ ಋಕ್ಕುಗಳನ್ನು ಇಂದ್ರ ಮಾತೃಗಣ ಋಕ್ಕುಗಳೆಂದು ಕರೆಯುತ್ತಾರೆ. ಇವರ ತಂದೆಯು ಕಶ್ಯಪನು. ತಾಯಿಯು ಅದಿತಿ, ಇವರಲ್ಲಿ ಒಬ್ಬಳ ಹೆಸರು ದೇವಜಾಮಿ, ಪರಸ್ಪರದ್ವೇಷಾಸೂಯೆಗಳು ಇಲ್ಲದೆ, ಸಪತ್ನಿಗಳೆಲ್ಲರೂ ಸೇರಿ ಮಂತ್ರಗಳನ್ನು ರಚಿಸಿದ ಸುಹೃದ್ಯಾವವು ವರ್ಣನಾತೀತವಾದುದಲ್ಲವೇ ? - ಇವರು ಋಗ್ರೇದಸಂಹಿತೆಯ ದಶಮಮಂಡಲದಲ್ಲಿ ಐವತ್ರನೆಯ ಸೂಕ್ಷದಲ್ಲಿ ಇರುವ ಐದು ಋಕ್ಕುಗಳನ್ನು ರಚಿಸಿದರು. ಇಂದ್ರನನ್ನು ಉದ್ದೇಶಿಸಿ ಅವರು ಹೀಗೆ ಹೇಳಿದರು. - “ ಎಲೆ ಇಂದ್ರನೇ ! ಶತ್ರುಗಳನ್ನು ಜಯಿಸುವತೇಜವು ನಿನ್ನಲ್ಲಿ ಇರುವುದರಿಂದ, ನಾವು ನಿನ್ನನ್ನು ಪೂಜಿಸುತಲಿದೇವೆ. ನೀನು ವೃತ್ರಾಸುರನನ್ನು ಸಂಹರಿಸಿದೆ. ಆಕಾಶವನ್ನು ವಿಶಾಲವಾಗಿಮಾಡಿದೆ. ಸ್ವಶಕ್ತಿಯಿಂದ ಸ್ವರ್ಗವನ್ನು ಸಮುನ್ನತವಾಗಿ ಮಾಡಿದೆ. ಸೂರ್ಯನು ನಿನ್ನ ಸಹಚರನು. ನೀನು ಆತನನ್ನು ಬಾಹಪಾಶ ಗಳಿಂದ ಬಂಧಿಸಿ ಇರುವೆ. ಆದುದರಿಂದ ನಾವು ನಿನ್ನನ್ನು ಆರಾಧಿಸುತಲಿದೇವೆ. ಅಪಾಲಾ. ಈಕೆಯು ಅತ್ರಿ ಮುನಿಯ ಗೋತ್ರದಲ್ಲಿ ಜಸ್ಮಿಸಿದಳು, ಈಕೆಯ ಜೀವಿತವು ಅತ್ಯಂತ ದುಃಖಮಯವಾದುದು. ಈಕೆಗೆ ಚರ್ಮವ್ಯಾಧಿಯು ಇದ್ದುದರಿಂದ, ಈಕೆಯ ಪತಿಯು ಈಕೆಯನ್ನು ಪರಿತ್ಯಜಿಸಿದನು. ಆದುದರಿಂದ ಅಪಾಲೆಯು ತಂದೆಯ ತಪೋವನದಲ್ಲಿಯೇ ವಾಸಮಾಡುತ್ತ, ಈಶ್ವರಾರಾಧನೆಯಲ್ಲಿ ಕಾಲವನ್ನು ಕಳೆಯುತ್ತಿದ್ದಳು. ಅಪಾಲಾ - ವಿಶೇಷ ಪಿತೃಭಕ್ತಿಯುಳ್ಳವಳಾಗಿ ಇದ್ದಳು. ತನ್ನ ತಂದೆಯ