ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೋಪಾಮುದ್ರೆ. ೩೬೭ ಭೂಮಿಗಳು ವಂಧ್ಯ ಕ್ಷೇತ್ರಗಳಾಗಿ ಇದ್ದುದರಿಂದ ಅವುಗಳಲ್ಲಿ ಯಾವ ಬೆಳೆಯೂ ಬೆಳೆಯುತ್ತಿರಲಿಲ್ಲ. ಈಕೆಯು ಈಶ್ವರನನ್ನು ಆರಾಧಿಸಿ ವರವನ್ನು ಪಡೆದು ಆ ಭೂಮಿಗಳನ್ನು ಫಲವಂತವಾದವುಗಳನ್ನಾಗಿ ಮಾಡಿದಳು ಎಂದು ಹೇಳುತ್ತಾರೆ. ಈಕೆಯು ಖಗೈದದಲ್ಲಿ ಎಂಟನೆಯ ಮಂಡಲದ ತೊಂಭತ್ತೊಂದನೆಯ ಸೂಕ್ತದಲ್ಲಿ ಎಂಟು ಋಕ್ಕುಗಳನ್ನು ರಚಿಸಿದಳು. ಲೋಪಾಮುದ್ರೆ. ೬G+4 ೨ ಈಕೆಯು ವಿದರ್ಭ ರಾಜನ ಪುತ್ರಿಯು. ಅಗಸ್ತನು ಪಿತೃದೇವತೆಗಳ ಅನುಜ್ಞೆಯಿಂದ ವಂಶೋನ್ನತಿ ಗಾಗಿ ಲೋಪಾಮುದ್ರೆಯನ್ನು ವಿವಾಹಮಾಡಿ ಕೊಂಡನು. ವಿಂಧ್ಯ ಪರ್ವತವು ಆಕಾಶದವರೆಗೂ ಬೆಳೆದು ಸೂರ್ಯನ ಪಥವನ್ನು ನಿರೋಧಿಸಿ ಆತನ ರಥವು ಮುಂದಕ್ಕೆ ಹೊರಡದಂತೆ ಮಾಡಿದ ಸಮಯದಲ್ಲಿ ಅಗಸ್ತನು ಉಪಾಯದಿಂದ ಸೂರ್ಯನ ಬಾಧೆಯನ್ನು ಹೋಗಲಾಡಿಸಿದನಂತೆ. ಆ ವಿಷಯವನ್ನು ಕುರಿತು ಪುರಾಣಗಳಲ್ಲಿ ಹೀಗೆ ಬರೆದಿದೆ. ವಿಂಧ್ಯ ಪರ್ವತವು ಸೂರ್ಯನ ಗತಿಯನ್ನು ತಡೆದ ವಿಷಯವನ್ನು ಕುರಿತು ದೇವತೆಗಳು ಅಗಸ್ತನೊಡನೆ ತಿಳಿಸಿದರು. ಆಗ ಅಗಸ್ತನು ದೇವತೆಗಳ ಪ್ರಾರ್ಥನೆ ಯಂತೆ ವಿಂಧ್ಯಪರ್ವತದ ಬಳಿಗೆ ಹೋದನು. ವಿಂಧ್ಯಾಚಲವು ಅಗಸ್ತನನ್ನು ನೋಡಿ ಪರಮಾನಂದದೊಡನೆ ತನ್ನ ಉನ್ನತವಾದ ಮಸ್ತಕವನ್ನು ಬಗ್ಗಿಸಿ ಋಷಿಯ ಪದತಲದಲ್ಲಿ ಇಟ್ಟು ಪ್ರಣಾಮವನ್ನು ಮಾಡಿತು. ಆಗ ಅಗಸ್ತ್ರನು ವಿಂಧ್ಯ ಪರ್ವತವನ್ನು ಆಶೀರ್ವಾದ ಮಾಡಿ, “ ವತ್ವಾ, ನಾನು ಪುನಃ ಬರುವ ವರೆಗೆ ನೀನು ನಿನ್ನ ತಲೆಯನ್ನು ಎತ್ತಬೇಡ.” ಎಂದು ಅದಕ್ಕೆ ಆಜ್ಞಾಪಿಸಿದನು. ಹೀಗೆ ಹೇಳಿ ಅಗಸ್ತನು ಹೊರಟುಹೋದನು. ಆತನ ಆಜ್ಞಾನುಸಾರವಾಗಿ ವಿಂಧ್ಯ ಪರ್ವತವು ತಲೆಯನ್ನು ಬಗ್ಗಿಸಿಕೊಂಡು ಇತ್ತು. ಆದರೆ ಅಗಸ್ತನು ಮಾತ್ರ ಹಿಂದಿರಿಗಿ ಬರಲಿಲ್ಲ. ಇದರಿಂದಲೇ ನಮ್ಮ ದೇಶದಲ್ಲಿ " ಅಗಸ್ತ್ರಯಾತ್ರೆ ' ಎಂಬ ನಾಣ್ಣುಡಿಯು ಬಳಕೆಗೆ ಬಂದಿದೆ. ಲೋಪಾಮುದ್ರೆಯ ಚರಿತ್ರೆಯು ಪರಮಪಾವನವಾದುದು, ಈಕೆಯು 21)