೩೬೮ ಆ ಬಲಾ ಸಚ್ಚರಿತ್ರ ರತ್ನ ಮಾಲೆ. ವಿದ್ಯಾತಿಶಯದಿಂದಲೂ, ಪಾತಿವ್ರತ್ಯ ಪ್ರಭಾವದಿಂದಲೂ, ಭಾರತರಮಣಿಯರಿಗೆ ಆದರ್ಶ ಸ್ವರೂಪಳು, ಈಕೆಯು ಪತಿಯಾಜ್ಞೆಗೆ ವ್ಯತಿರೇಕವಾಗಿ ಯಾವ ಕಾರ್ಯ ವನ್ನೂ ಮಾಡುತ್ತಿರಲಿಲ್ಲ. ಪತಿಯು ಭುಜಿಸಿದ ಅನಂತರ ಭೋಜನಮಾಡು ವುದು, ಆತನು ಮಲಗಿದ ಮೇಲೆ ಮಲಗುವುದು, ಆತನು ಏಳುವುದಕ್ಕೆ ಮೊದಲೇ ತಾನು ಏಳುವುದು ಮೊದಲಾದ ನಿಯಮಗಳನ್ನು ಈಕೆಯು ಕ್ರಮವಾಗಿ ಆಚರಿ ಸುತ್ತ ಇದ್ದಳು. " ಈಕೆಯು ಸರ್ವದಾ ಪತಿಯನ್ನೇ ಧ್ಯಾನಿಸುತ್ತ, ಆತನೇ ತನ್ನ ಜ್ಞಾನಕ್ಕೆ ಮುಖ್ಯವಾದ ಆಧಾರಭೂತನೆಂದು ನಂಬಿದ್ದಳು. ಅಗಸ್ತನು ಯಾವ ಕಾರಣದಿಂದಲಾದರೂ ಬೇಸರಗೊಂಡು ಇರುವ ಸಮಯದಲ್ಲಿ, ಲೋಪಾ ಮುದ್ರೆಯು ತನ್ನ ಅಸಂತುಷ್ಟಿ ಯನ್ನು ತೋರ್ಪಡಿಸದೆ ಭರವಿನ ಮನೋರ೦ಜ ನಾರ್ಥವಾಗಿ ಪ್ರಯತ್ನಿಸುತ್ತ ಇದ್ದಳು. ಲೋಪಾಮುದ್ರೆಯೊಡನೆ ಸಮಾನಳಾದ, ನಿಪುಣಳಾದ ಗೃಹಿಣಿಯು ಭಾರತವರ್ಷದಲ್ಲಿ ಮತ್ತೊಬ್ಬಳಿಲ್ಲ. ಈಕೆಯು ದೇವತೆಗಳನ್ನು ಆರಾಧಿಸುವುದರಲ್ಲಿಯೂ, ಅತಿಥಿಅಭ್ಯಾಗತರನ್ನು ಪೂಜಿಸುವುದರಲ್ಲಿಯೂ ಶ್ರದ್ಧೆಯುಳ್ಳವಳಾಗಿದ್ದಳು, ಮತ್ತು ಗೋಸೇವೆಯೇ ಮೊದ ಲಾದ ಗೃಹಕಾರ್ಯಗಳನ್ನು ತಾನೇ ನೆರವೇರಿಸುತ್ತಿದ್ದಳು. ದ್ವೇದದ ಪ್ರಥಮ ಮಂಡಲದಲ್ಲಿ ಇರುವ ಒಂದುನೂರ ಎಪ್ಪತ್ತೊಂಭತ್ತನೆಯ ಸೂಕ್ತ ದಲ್ಲಿ ಪ್ರಥಮ ದ್ವಿತೀಯ ಋಕ್ಕುಗಳನ್ನು ಲೋಪಾಮುದ್ರೆಯು ರಚಿಸಿದಳು. ಆ ಋಕ್ಕುಗಳಲ್ಲಿ ಈಕೆಯು ತನ್ನ ಪತಿಯನ್ನು ಉದ್ದೇಶಿಸಿ ಹೇಳಿದ ವಿಷಯಗಳು ಆರ್ಧುನಾರೀನು ಣಿಯರಿಗೆ ಪ್ರಾತಸ್ಸರಣೀಯವಾದವು, ಅವುಗಳ ತ ಾತ್ಪರ್ಯವನ್ನು ಕೆಳಗೆ ವಿವರಿಸಿದೇನೆ. “ ಪ್ರಭುವೇ ! ನನ್ನ ಜೀವಿತವನ್ನೆಲ್ಲ ನಿನ್ನ ಸೇವೆಯಲ್ಲಿಯೇ ಕಳೆದುದರಿಂದ ನಾನು ಈಗ ಆಯಾಸವನ್ನು ಹೊಂದಿದೇನೆ. ನಾನು ವೃದ್ಧಳಾದೆನು, ನನ್ನ ದೇಹವು ಕೃಶವಾಗುತಲಿದೆ. ಆದರೆ ನಿನ್ನ ಪಾದಸೇವೆಯೇ ನನಗೆ ಆನಂದ ದಾಯಕವಾದುದು, ನಿನ್ನ ಸೇವೆಯೇ ನನಗೆ ಪರಮತಪೋಧನವು. ನೀನು ಒಬ್ಬನು ಮಾತ್ರವೇ ನನಗೆ ಗತಿಯು. ಆದುದರಿಂದ ಓ ಪ್ರಭುವೇ ! ನಿನ್ನ ಅನು ಗ್ರಹವನ್ನು ನನ್ನಲ್ಲಿ ಸ್ಥಿರವಾಗಿ ಇಟ್ಟಿರು.” - ----
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೦೩
ಗೋಚರ