ಘೋಷಾ. 4೮೫ “ ಅವಿವಾಹಿತೆಯಾದ ಒಬ್ಬ ಯುವತಿಯು ತನ್ನ ಪಿತ್ರಾಲಯದಲ್ಲೇ ಇದ್ದು ವಾರ್ಧಕ್ಯವನ್ನು ಪ್ರವೇಶಿಸುತ್ತಿರಲು ತಾವು ಅನುಗ್ರಹಿಸಿ, ಆಕೆಗೆ ವರನನ್ನು ಪ್ರಸಾ ದಿಸಿದಿರಿ. ಜರಾಜೀರ್ಣರಿಗೂ, ರೋಗಿಗಳಿಗೂ, ವಿಕಲಾಂಗರಿಗೂ, ಅಂಧರು ಮೊದಲಾದವರಿಗೂ ನೀವೇ ಆಶ್ರಯಭೂತರು. ಜರಾಜೀರ್ಣನಾದ ಚ್ಯವನ ಋಷಿಗೆ ನೀವೇ ಯೌವನವನ್ನು ಅನುಗ್ರಹಿಸಿದಿರಿ, ತುಶ್ರತನಯೆಯನ್ನು ನೀರಿ ನಿಂದ ತೀರಕ್ಕೆ ಸೇರಿಸಿ ಕಾಪಾಡಿದಿರಿ, ನಿಮ್ಮ ಸತ್ಕಾರ್ಯಗಳು ಅನಂತವಾದವು. ಆದುದರಿಂದಲೇ ನಾವು ನಿಮಗೆ ಶರಣಾಗತರಾಗುವೆವು, ನಿಮ್ಮನ್ನು ಆಹ್ವಾನಿಸುತ ಲಿರುವೆವು. ವಂದನೆಗಳನ್ನು ಅರ್ಪಿಸುತಲಿರುವೆವು, ನಮ್ಮ ಆಹ್ವಾನವು ಶ್ರುತಿ ಗೋಚರವಾಗಲಿ, ತಂದೆಯು ಮಗನಿಗೆ ಕೊಡುವ ಶಿಕ್ಷೆಯನ್ನು ನೀವು ನಮಗೆ ಕೊಡಿ, ನಾವು ಜ್ಞಾನಶೂನ್ಯರು ಆದುದರಿಂದ ನಮಗೆ ಎಂದಿಗೂ ದುರ್ಬುದ್ದಿ ಯುಂಟಾಗದಂತೆ ಅನುಗ್ರಹಿಸಿರಿ. ” “ ನೀವೇ ಪುಕಮಿತ್ರನು ಎಂಬ ರಾಜನ ಪುತ್ರಿಯಾದ ಶುಂಧುವ ಎಂಬಾಕೆ ಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಹೋಗಿ ವಿಮದೇವನಿಗೆ ಕೊಟ್ಟು ವಿವಾಹ ವನ್ನು ಮಾಡಿದಿರಿ. ಬಧಿಮತಿ ಎಂಬ ಸ್ತ್ರೀಯು ಪ್ರಸವವೇದನೆಯಿಂದ ದುಃಖಿತೆ ಯಾದಾಗ ನೀವು ಆಕೆಯ ದುಃಖವನ್ನು ಹೋಗಲಾಡಿಸಿದಿರಿ. ಜರಾಜೀರ್ಣ ನಾದ ಕವಿಗೆ ನೀವು ಯೌವನವನ್ನು ಪ್ರಸಾದಿಸಿದಿರಿ, ವಿಪಲ್ಲಾ ಎಂಬ ಹೆಳವಳು ನಡೆಯುವಂತೆ ನೀವೇ ಅನುಗ್ರಹಿಸಿದಿರಿ, ರೇಚಕನೆಂಬವನನ್ನು ಶತ್ರುಗಳು ಮೃತ ಪ್ರಾಯನಾಗಿಮಾಡಿ ಒಂದು ಗುಹೆಯಲ್ಲಿ ಹಾಕಿದಾಗ ನೀವು ಅವನಿಗೆ ಪ್ರಾಣದಾನ ವನ್ನು ಮಾಡಿದಿರಿ. ಅತ್ರಿಮುನಿಯು ಅಗ್ನಿ ಕುಂಡದಲ್ಲಿ ಬಿದ್ದಾಗ ನೀವು ಅಗ್ನಿಯ ತೇಜವನ್ನು ಹೋಗಲಾಡಿಸಿದಿರಿ, ಓ ಅಶ್ವಿನೀಕುಮಾರರೇ ! ನಿಮ್ಮ ನಾಮ ಥೇಯಗಳು ಮಹಾ ಪುಣ್ಯಪ್ರದವಾದವು, ನೀವು ಸಂಚರಿಸುವ ಮಾರ್ಗಕ್ಕೆ ನಾಲ್ಕು ದಿಕ್ಕುಗಳಿಂದಲೂ ಸ್ತೋತ್ರ ಪೂರೈಕವಾದ ಗಾನಗಳು ಕೇಳಿಸುತ್ತಿರುವುವು. ಋಭು ಗಳೆ೦ಬ ದೇವತೆಗಳು ನಿಮಗಾಗಿ ನಿರ್ಮಿಸಿದ ರಥವು ಆಕಾಶಮಾರ್ಗದಲ್ಲಿ ಬರು ನಾಗ ಉಷಾದೇವಿ ಎಂಬ ಆಕಾಶ ಕನ್ಯಯು ಹುಟ್ಟುತ್ತದೆ. ಮನೋವೇಗ ಕ್ಕಿಂತಲೂ ಅಧಿಕವಾದ ವೇಗವನ್ನುಳ್ಳ ಆ ರಥವನ್ನೇರಿ ನೀವು ದಯಮಾಡಿರಿ. ಆ ರಥವನ್ನೇರಿ ನೀವು ಪರ್ವತಾಭಿಮುಖವಾಗಿ ಹೊರಡಿ, ಶಯನೆಂಬಾತನ ವೃದ್ಧಧೇನುವನ್ನು ಪುನಃ ದುಗ್ಧವತಿಯನ್ನಾಗಿ ಮಾಡಿರಿ. ” “ ನಿಮಗಾಗಿ ಭೂಗುಸಂತಾನವು ನಿರ್ಮಿಸಿದ ರಥದಂತಹುದುದನ್ನು ನಾನು ಸಹ ಮಂತ್ರಗಳೊಡನೆ ರಚಿಸಿದೆನು. ವಿವಾಹಕಾಲದಲ್ಲಿ ತಂದೆಯು ಕನೈಯನ್ನು ಅಲಂಕಾರಗಳಿಂದ ಅಲಂಕರಿಸುವಂತೆ, ನಾನೂ ಈ ಮಂತ್ರಗಳನ್ನು ನಿಮ್ಮ ಸ್ತೋತ್ರಗಳಿಂದ ಅಲಂಕರಿಸಿ ಇದೇನೆ. ಓ ಧನಶಾಲಿಗಳಾದ ಅಶ್ವಿನೀಕುಮಾರರೇ ! 40
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೧೦
ಗೋಚರ