ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

kot ಅಬಲಾ ಸಚ್ಚರಿತ್ರ ರತ್ನ ಮಾಲೆ. ನೀವು ನನಗೆ ಕಲ್ಯಾಣವಿಧಾತರು. ಆದಕಾರಣ ನೀವು ನನಗೆ ರಕ್ಷಕರು. ಆದು ದರಿಂದ ನೀವು ನನ್ನ ಮನೋರಥ ಸಿದ್ದಿಗಾಗಿ ನನ್ನ ಮೇಲೆ ನೀವು ಕೃಪಾವರ್ಷ ವನ್ನು ಸುರಿಸಿರಿ. ನಾನು ಪತಿಗೃಹಕ್ಕೆ ಹೋಗಿ ಪತಿಯ ಪ್ರೀತಿಗೆ ಪಾತ್ರಳಾಗು ವಂತೆ ನನ್ನನ್ನು ಆಶೀರ್ವಾದ ಮಾಡಿರಿ. ಸೂರ್ಯ. ಋಗೈದದ ದಶಮಮಂಡಲದಲ್ಲಿ ಎಂಭತೈದನೆಯ ಸೂಕ್ತವನ್ನು ಸೂರ್ಯಯು ರಚಿಸಿದಳು. ಈ ಸೂಕ್ತದಲ್ಲಿ ನೂತನ ದಂಪತಿಯರಿಗಾಗಿ ಮಾಡುವ ಪ್ರಾರ್ಥನೆ ಗಳೂ, ಆಶೀರ್ವಾದಗಳೂ ಇವೆ. ಅವುಗಳಲ್ಲಿ ಕೆಲವು ಋಕ್ಕುಗಳ ತಾತ್ಪರ್ಯ ವನ್ನು ಕೆಳಗೆ ಬರೆದಿದೆ. “ ಸೂರ್ಯೆಯ ವಿವಾಹ ಸಮಯದಲ್ಲಿ, ರೈ ಭಿ ಎಂಬ ಹೆಸರನ್ನುಳ್ಳ ಋಕ್ಕು ಗಳು ಆಕೆಗೆ ಸಖಿಗಳಾದವು, ನರಾಶಂಶೀ ಎಂಬ ಹೆಸರುಳ್ಳ ಋಕ್ಕುಗಳು ಆಕೆಗೆ 'ದಾಸಿಗಳಾದುವು. ಆಕೆಯು ಧರಿಸಿದ ಮನೋಹರವಾದ ವಸ್ತ್ರಗಳು ಸಾಮಗಾನದಿಂದ ಪವಿತ್ರವಾಗಿ ಪ್ರಕಾಶಿಸಲಾರಂಭಿಸಿತು. ಆಕೆಯ ಧರ್ಮ ಜೀವನವೇ ವಿವಾಹಕಾಲದಲ್ಲಿ ಆಕೆಗೆ ಬಹುಮಾನವಾಯಿತು. ಆಕೆಯ ಸುಶಾಂತಚಿತ್ತವೇ ಆಕೆಯು ಪತಿಗೃಹಕ್ಕೆ ತೆರಳಲು ವಾಹನವಾಯಿತು.” “ ವಧುವನ್ನು ಹುಡುಕಲು ಹೋಗುವ ನಮ್ಮ ಮಿತ್ರರಿಗೆ ಮಾರ್ಗದಲ್ಲಿ ಆಪತ್ತುಗಳು ಸಂಭವಿಸದಿರಲಿ ! ದೇವತೆಗಳೇ ! ದಾಂಪತ್ಯ ಸಂಬಂಧವು ಅಕ್ಷಯ ವಾಗಲಿ ! ) “ ಪಿತೃಕುಲವೆಂಬ ವೃಕ್ಷದಿಂದ ಹುಟ್ಟಿದ ಕನೈ ಎಂಬ ಈ ಪವಿತ್ರ ಪುಷ್ಪವು ಪತಿಹಸ್ತದಲ್ಲಿ ಸಮರ್ಪಿತವಾಗಿದೆ. ಓ ಇಂದ್ರನೇ ! ಈ ಕನೈಯು ಸತಿಗೃಹ ದಲ್ಲಿ ಸೌಭಾಗ್ಯವತಿಯಾಗಿ ಬಾಳಲಿ !” “ ಓ ಕನೈಯೇ ! ಉಷಾದೇವತೆಯು ನಿನ್ನ ಹಸ್ತವನ್ನು ಹಿಡಿದುಕೊಂಡು ನಿನ್ನನ್ನು ಪಿತೃಗೃಹದಿಂದ ಪತಿಗೃಹಕ್ಕೆ ಕರೆದುಕೊಂಡುಹೋಗಲಿ ! ಅಶ್ವಿನೀ ಕುಮಾರರು ನಿನ್ನನ್ನು ತಮ್ಮ ರಥದಮೇಲೆ ಕುಳ್ಳಿರಿಸಿಕೊಂಡು ತೌರುಮನೆಯಿಂದ