೩೮ ಮೈತ್ರೇಯಿ. ಯಾಜ್ಞವಲ್ಕ್-ಓ ಮೈತ್ರೇಯಿಾ ! ಲೋಕದಲ್ಲಿ ಧನವಂತರು ಸುಖ ಜೀವನವನ್ನು ಮಾಡುವಂತೆ ನೀನು ಆ ಧನದಿಂದ ಸುಖಜೀವನವನ್ನು ಮಾಡ ಬಹುದೇ ಹೊರತು ಧನದಿಂದ ಮುಕ್ತಿಯನ್ನು ಹೊಂದಲಾರೆ. ಮೈ:-ಮುಕ್ತಿಯನ್ನು ಕೊಡಲಾರದ ಧನದಿಂದ ನನಗೆ ಪ್ರಯೋಜನ ವಿಲ್ಲ. ಮರಣರಹಿತನಾದ ಮುಕ್ತಿಯನ್ನು ಹೊಂದುವುದಕ್ಕೆ ಅನುಕೂಲವಾದ ಯಾವ ವಿದ್ಯೆಯನ್ನು ನೀನು ತಿಳಿದುಕೊಂಡಿರುವೆಯೋ ಅದನ್ನು ನನಗೆ ತಿಳಿಸು. ಯಾ:- ಓ ಮೈತ್ರೇಯಿಾ ! ನೀನು ಇಷ್ಟು ವರೆಗೂ ನನ್ನ ಭೀಷ್ಟವನ್ನು ನೆರವೇರಿಸಿ, ಪ್ರೇಮವನ್ನು ವೃದ್ಧಿಗೊಳಿಸಿದೆಯಾದಕಾರಣ ಪೂಜ್ಯಳಾದ ನಿನಗೆ ಈಗ ಮೋಕ್ಷಸಾಧನೆಯನ್ನು ತಿಳಿಸುವೆನು, ಸಾವಧಾನಚಿತ್ತದಿಂದ ಕೇಳು. ಓ ಮೈತ್ರೇಯಿಾ ! ಭರ ಜಾಯಾ ಪುತ್ರಾದಿಗಳೆಲ್ಲರೂ ಆಯಾ ಭರ ಜಾಯಾ ಪುತ್ರಾದಿಗಳ ಕಾಮ (ಸೌಖ್ಯ) ಕ್ಕಾಗಿ ನನಗೆ ಪ್ರಿಯರಾಗುವುದಿಲ್ಲ. ಅವರೆಲ್ಲರೂ ಆತ್ಮಕಾಮ (ನಮ್ಮ ಸೌಖ್ಯ) ಕ್ಯಾಗಿಯೇ ನಮಗೆ ಪ್ರಿಯರಾಗುತ್ತಾರೆ. ಸರ್ವವೂ ಆತ್ಮಸೌಖ್ಯಕ್ಕಾಗಿಯೇ ನನಗೆ ಇಷ್ಟವಾದುದಾಗುತ್ತದೆ. ಆದುದರಿಂದ ಓ ಮೈತ್ರೇಯಿಾ ! ಆತ್ಮವನ್ನೇ ನೋಡಬೇಕು ; ಆತ್ಮವಿಷಯವನ್ನೇ ಆಚಾರ್ಯಾ ಗಮಗಳಿಂದ ಕೇಳಬೇಕು ; ತರ್ಕದಿಂದಲೂ ಆತ್ಮವಿಷಯವನ್ನೇ ವಿಚಾರಿಸಬೇಕು. ಈ ವಿಧವಾಗಿ ಶ್ರವಣನನನನಿಧಿ ಧ್ಯಾನಗಳಿ೦ದ ಆತ್ಮವು ನೋಡಲ್ಪಟ್ಟು ತನ್ನನ್ನು ತಾನೇ ತಿಳಿದುಕೊಂಡರೆ ಸರ್ವವನ್ನೂ ತಿಳಿದುಕೊಂಡಂತೆ ಆಗುವುದು. ಆತ್ಮವೇ ಸರ್ವಸ್ವರೂಪನಾದ ಕಾರಣ, ಆ ಸರ್ವಸ್ವರೂಪವಾದ ಆತ್ಮವನ್ನು ತಿಳಿದುಕೊಂಡರೆ ಸರ್ವವನ್ನೂ ತಿಳಿದುಕೊಳ್ಳಬಹುದು, ಆತ್ಮವು ಸರ್ವಸ್ವರೂಪವಾದುದು ಹೇಗಂ ದರೆ : ಈ ಬ್ರಾಹ್ಮಣ, ಕ್ಷತ್ರಿಯ ಮೊದಲಾದ ಜಾತಿಗಳನ್ನೂ, ಲೋಕಗಳನ್ನೂ , ದೇವತೆಗಳನ್ನೂ, ಭೂತಗಳನ್ನೂ ಮತ್ತು ಇತರ ಸಮಸ್ತ ವಸ್ತುಗಳನ್ನೂ ಯಾವ ಮನುಷ್ಯನು ಆತ್ಮಸ್ವರೂಪಕ್ಕೆ ಭಿನ್ನವಾದುದಾಗಿ ತಿಳಿಯುತ್ತಾನೆಯೋ ಅವನನ್ನು ಈ ಬ್ರಾಹ್ಮಣಾದಿ ಸರ್ವವೂ ಬೇರೆಯಾಗಿಯೇ ಮಾಡುತ್ತದೆ. ನಮಗೆ ಕಾಣ ಬರುವ ಈ ಬ್ರಹ್ಮಕ್ಷತ್ರಾದಿ ಸಮಸ್ತವೂ ಸೃಷ್ಟಿ ಕಾಲದಲ್ಲಿ ಆತ್ಮದಿಂದಲೇ ಹುಟ್ಟಿ, ಲಯಃಕಾಲದಲ್ಲಿ ಆತ್ಮದಲ್ಲಿಯೇ ಲೀನವಾಗಿ, ಸ್ಥಿತಿಕಾಲದಲ್ಲಿ ಆತ್ಮಸ್ವರೂಪವಾಗಿ ರುತ್ತದೆ. ಆದುದರಿಂದ ಯಾವುದೂ ಆತ್ಮಕ್ಕೆ ಭಿನ್ನವಾದುದಾಗಿ ಕಂಡುಬರುವು ದಿಲ್ಲ. ಹೀಗೆ ಇರುವುದರಿಂದ ಸರ್ವವನ್ನೂ ಆತ್ಮಸ್ವರೂಪವಾದು ದಾಗಿಯೇ ತಿಳಿಯಬೇಕು, ಈ ಪ್ರಕಾರವಾಗಿ ಆತ್ಮವನ್ನು ತಿಳಿದುಕೊಂಡು ಆತ್ಮವೇ ತಾನಾದ ಕಾರಣ ಸರ್ವವನ್ನೂ ತಿಳಿದುಕೊಳ್ಳಬಹುದು. . - ಆತ್ಮಕ್ಕಿಂತಲೂ ಬೇರೆಯಾದುದು ಯಾವುದೂ ಇಲ್ಲದೆ ಎಲ್ಲವೂ ಆತ್ಮ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೧೪
ಗೋಚರ