ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈತ್ರೇಯಿ. ೩೯೧ ಯಾಜ್ಞವಲ್ಕ:-ಓ ಮೈತ್ರೇಯಿಾ! ನಾನು ಮೋಹ (ಭ್ರಮೆ) ವನ್ನುಂಟು 'ಮಾಡುವ ವಿಷಯವನ್ನು ತಿಳಿಸಲಿಲ್ಲ. ಈ ಯಾತ್ಮಸ್ವರೂಪವು ವಿಕಾರರೂಪವಾದ ನಾಶವನ್ನಾಗಲಿ, ಅಭಾವರೂಪವಾದ ನಾಶವನ್ನಾಗಲಿ ಹೊಂದುವುದಿಲ್ಲ. ಓ ಮೈ ಪ್ರೇಯಾ ! ಆತ್ಮನು ಭೇದವನ್ನು ಹೊಂದಿದಂತೆ ತೋರಿದಾಗ ಆ ಯಾತ್ಮನು ತಾನೇ ಬೇರೆಯಾಗಿ ತನಗೆ ಭಿನ್ನವಾಗಿ ತೋರುವ ರೂಪರಸ ಗಂಧಾದಿಗಳನ್ನು ನೇತ್ರ ಜಿಹೈ ಘಾಣಾದಿಗಳ ಮೂಲಕವಾಗಿ ತಿಳಿದುಕೊಳ್ಳುತ್ತಾನೆ. ಆತ್ಮನು ಅಜ್ಞಾನಾವಸ್ಥೆಯಲ್ಲಿ ಭೇದವಾಗಿರುವಂತೆ ತೋರಿ, ಜ್ಞಾನಾವಸ್ಥೆಯಲ್ಲಿ ಸರ್ವಾತ್ಮಸ್ವರೂಪವಾದ ತನ್ನಲ್ಲಿ ತನಗೆ ಭೇದವಿಲ್ಲದೇ ಇರುವ ಸಮಯದಲ್ಲಿ, ಯಾವುದರಿಂದ ಯಾವುದನ್ನು ನೋಡುವುದು ? ಯಾವುದರಿಂದ ಯಾವುದನ್ನು ಆಘ್ರಾಣಿಸುವುದು ? ಯಾವುದರಿಂದ ಯಾವುದನ್ನು ರುಚಿನೋಡುವುದು ? ಯಾವುದರಿಂದ ಯಾವುದನ್ನು ಕೇಳುವುದು ? ಯಾವುದರಿಂದ ಯಾವುದನ್ನು ಎಣಿ ಸುವುದು ? ಯಾವುದರಿಂದ ಯಾವುದನ್ನು ಮುಟ್ಟುವುದು ? ಯಾವುದರಿಂದ ಯಾವುದನ್ನು ತಿಳಿದುಕೊಳ್ಳುವುದು ? ಈ ಜೀವನು ಯಾವ ಆತ್ಮಸ್ವರೂಪದಿಂದ ಈ ಸಮಸ್ತವನ್ನು ತಿಳಿದುಕೊಳ್ಳು ತ್ತಾನೆಯೋ, ಆ ಯಾತ್ಮ ಸ್ವರೂಪವನ್ನು ಇನ್ನು ಯಾವುದರಿಂದ ತಿಳಿದುಕೊಳ್ಳ ಬಹುದು ? ಅದಕ್ಕೆ ಅನ್ಯವಾದುದು ಯಾವುದೂ ಇಲ್ಲದುದರಿಂದ, ಅದನ್ನು ಯಾವುದರಿಂದಲೂ ತಿಳಿದುಕೊಳ್ಳುವುದಕ್ಕೆ ಆಗುವು ದಿಲ್ಲ. “ ನೇತಿ ನೇತಿ, ” ಎಂಬ ಮಹಾವಾಕ್ಯದಿಂದ ಆತ್ಮಕ್ಕಿಂತಲೂ ಭಿನ್ನ ವಾಗಿರುವ ಸರ್ವವೂ ಇದಲ್ಲ ಇದಲ್ಲ ; ಎಂದು ನಿಷೇಧಿಸಿ ಸರ್ವಶೇಷಿ ಎಂದು ನಿಶ್ಚಯಿಸಿದ ಆತ್ಮವು ಆಕಾರವಿಲ್ಲದುದಾದಕಾರಣ ಕರ್ಮೇಂದ್ರಿಯಗಳಾದ ಹಸ್ತಾದಿ ಗಳಿ೦ದ ಗ್ರಹಿಸಲು ಸಾಧ್ಯವಾಗದೆಯೂ, ಆಕಾರವಿಲ್ಲದುದಾದಕಾರಣ ದೊರೆಯದು ದಾಗಿಯೂ, ಯಾವುದರ ಒಡನೆಯ ಸೇರದೆ ಅಸಂಗವಾಗಿ ಇರುವುದು, ಮತ್ತು ಯಾವುದರಿಂದಲೂ ಬಾಧೆಯನ್ನು ಹೊಂದದೆಯೂ, ನಾಶರಹಿತವಾದುದಾಗಿಯೂ ಇರುವುದು, ಓ ಮೈ ತೇಯಿಾ ! ಸರ್ವವನ್ನು ತಿಳಿದುಕೊಳ್ಳುವ ಆತ್ಮವನ್ನು ಯಾವುದರಿಂದ ತಿಳಿದುಕೊಳ್ಳ ಬಹುದು ? ಆತ್ಮವೇ ಆತ್ಮವನ್ನು ತಿಳಿದುಕೊಳ್ಳು ವುದು. ನೀನು ಹೀಗೆ ಆಜ್ಞಾಪಿಸಲ್ಪಟ್ಟವಳಾದೆ. ಓ ಮೈತ್ರೇಯಿಾ ! ಆತ್ಮ ಕ್ಕಿಂತಲೂ ಬೇರೆಯಾದುದು ಯಾವುದೂ ಇಲ್ಲದುದರಿಂದ ಸರ್ವವಿಜ್ಞಾತವಾಗಿ ತಾನು ನಿಲ್ಲುವಂತಹ ಇದೇ ಮುಕ್ತಿ ಯಲ್ಲವೇ ? ತನ್ನ ಸಹಧರ್ಮಚಾರಿಣಿಯಾದ ಮೈತ್ರೇಯಿಗೆ ಯಾಜ್ಞವಲ್ಕನು ಈ ವಿಧವಾಗಿ ಬ್ರಹ್ಮತತ್ವವನ್ನು ಉಪದೇಶಮಾಡಿ, ದ್ವಿತೀಯ ಪತ್ನಿಯಾದ ಕಾತ್ಯಾಯಿನಿಗೆ ಧನವನ್ನು ಕೊಟ್ಟು, ಇಬ್ಬರನ್ನೂ ಸಮಾಧಾನಪಡಿಸಿದನು. ಅನಂತರ ಪತ್ನಿಯರ ಅನುಮತಿಯನ್ನು ಪಡೆದು ಆತನು ಸನ್ಯಾಸಾಶ್ರಮವನ್ನು ಸ್ವೀಕರಿಸಿ ಸಫಲಮನೋರಥನಾದನು.