ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣೀ ಭವಾನಿ. ಸ್ನಾಗಿ ಮಾಡುವರು. ಮರಾಟೆಯವರ ಸ್ವಭಾವವನ್ನು ನಾವು ಅರಿಯೆವು, ಅವರು ಬಹು ಕ್ರೂರರೆಂದು ಕೇಳಿದ್ದೇವೆ, ನಾವು ತುರುಕರಲ್ಲಿ ಐಕಮತ್ಯವುಳ್ಳವರಾಗಿದ್ದೇವೆ. ಅವರ ಸ್ವಭಾವವು ನಮಗೆ ಗೊತ್ತಿದೆ. ಆದಕಾರಣ ಅವರೇ ನನಗೆ ಪ್ರಭುಗಳಾ ಗಿದ್ದರೆ ಒಳ್ಳೆಯದು. ರಾಣೀಭವಾನಿ:- ನಿಮ್ಮ ಮಾತು ಗ್ರಾಹ್ಯವಾದುದು ಆದರೂ ಮಾರ್ಜಾ ಫರನು ರಾಜ್ಯಾರೂಢನಾದ ಮೇಲೆ ಸುರಾಜದೌಲನಂತೆಯೇ ಕೂರತ್ವವನ್ನ ವಲಂಭಿಸಿದರೆ ನಾವೇನು ಮಾಡಬಲ್ಲೆವು ? ರಾಜಾರಾಜ ಬಲ್ಲವರು:- ಅದನ್ನು ಕುರಿತು ನಾವು ಪೂರ್ವವೇ ಆಲೋ ಚಿಸಿರುವೆವು, ಮಾರ್ಜಾಫರನನ್ನು ನಮ್ಮ ಧೀನದಲ್ಲಿಟ್ಟುಕೊಳ್ಳುವುದಕ್ಕಾಗಿ ಆಂಗ್ಲ ಯರ ಸಹಾಯವನ್ನು ಕೇಳಲೆಣಿಸಿರುವೆವು, ಅವರು ಬಲವಂತರಾದರೂ ಕೇವಲ ವರ್ತಕರು, ರಾಜ್ಯವನ್ನಾಳಬೇಕೆಂಬ ಕೋರಿಕೆಯು ಅವರಿಗೆ ಹುಟ್ಟಲಾರದು. ವ್ಯಾಪಾರದಲ್ಲಿ ವಿಶೇಷ ಲಾಭವುಂಟಾಗುವಂತೆ ಕೆಲವು ಷರತ್ತುಗಳನ್ನು ಬರೆದು ಕೊಟ್ಟರೆ, ಅವರು ನಮಗೆ ಆನಂದದಿಂದ ಸತತವೂ ಸಹಾಯವನ್ನು ಮಾಡುವರು. ಅವರ ಸಹಾಯದಿಂದ ಯಾವಾಗಲೂ ನವಾಬನನ್ನು ನಮಗೊಳಪಟ್ಟಿರುವಂತೆ ಮಾಡಿಕೊಳ್ಳಬಹುದು. ರಾಜಾರಾಯ ದುರ್ಲವರು:- ಆಂಗ್ಲೀಯರು ದಕ್ಷಿಣದಲ್ಲಿರುವ ನವಾಬ ನನ್ನು ಸೋಲಿಸಿದರು. ಆದುದರಿಂದ ಅವರೊಡನೆ ವೈರವನ್ನು ಬೆಳಸದೆ ಸ್ನೇಹ ವನ್ನು ಮಾಡುವುದು ಉತ್ತಮ. ರಾಣೀಭವಾನಿ:- ನಾನು ಸ್ತ್ರೀಯಾದುದರಿಂದ ತಮಗೆ ಇಂತಹ ರಾಜ ಕೀಯ ಕಾರ್ಯಗಳಲ್ಲಿ ಆಲೋಚನೆಯನ್ನು ಹೇಳಲು ಸಮರ್ಥೆಯಲ್ಲ. ಆದರೂ ನನ್ನ ಅಲ್ಪ ಬುದ್ದಿಗೆ ತೋರಿದುದನ್ನು ಹೇಳುವೆನು, ಕೇಳಿರಿ, ಇಂಗ್ಲೀಷರು ಈಗ ವರ್ತಕ ರಾಗಿದ್ದರೂ ನಾವು ಅವರ ಸಹಾಯವನ್ನು ಅಪೇಕ್ಷಿಸಿದಾಗ ಅವರು ಬಂದು ಈ ಮಹಾ ರಾಜ್ಯವನ್ನು ನೋಡಿದರೆ ಅವರಿಗೆ ಅದರಲ್ಲಿ ಅಭಿಲಾಷೆಯುಂಟಾಗದಿರಲಾರದು. ಆಗ ನಮ್ಮ ಗತಿಯೇನು ? ಮರಾಟೆಯವರ ಗುಣ ಧರ್ಮಗಳನ್ನು ನಾವು ಸ್ವಲ್ಪ ನಾದರೂ ತಿಳಿದಿರುವೆವು. ಆದರೆ ಇವರ ಸ್ವಭಾವವನ್ನು ಸ್ವಲ್ಪವೂ ಅರಿಯೆವು. ಆದಕಾರಣ ಯವನನ್ನು ರಾಜ್ಯಾರೂಢನನ್ನಾಗಿ ಮಾಡುವುದಕ್ಕೂ, ಪರದೇಶಸ್ಥರಾದ ಹೂಣರ ಸಹಾಯವನ್ನು ದೀನರಂತೆ ಬೇಡುವುದಕ್ಕೂ ನಾನು ಸಮ್ಮತಿಸಲಾರೆನು. ಹೀಗೆ ಬಹಳ ಕಾಲ ಚರ್ಚೆ ನಡೆದು ಕೊನೆಗೆ ಇತರ ರಾಜರ ನಿರ್ಬಂಧದಿಂದ ರಾಣೀಭವಾನಿಯು ಇಂಗ್ಲಿಷರ ಸಹಾಯವನ್ನು ಪಡೆದು ಮಾರ್ಜಾಫರನನ್ನು