ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾರಿ. ೩೫ ನನ್ನ ಇಚ್ಛಾನುಸಾರವಾಗಿ ಆಯಾ ಕಾರ್ಯಗಳನ್ನು ನಿರ್ವಹಿಸುತ್ತಿರುವೆನು. ನಾನು ಈ ಆಕಾಶ, ಪೃಥಿವಿಗಳಿಗಿಂತಲೂ ಉನ್ನತವಾದವಳು, ನಾನು ವಿಷಯ ನಿರ್ಲಿಪ್ತಳು. ನಾನು ಬ್ರಹ್ಮಸ್ವರೂಪಿಣಿಯು, ನನ್ನ ಮಹಾತ್ಮದಿಂದಲೇ ಈ ಸಮಸ್ತವೂ ಹುಟ್ಟಿತು. ” ಮೇಲೆ ಬರೆದಿರುವ ವೇದವಾಕ್ಯಗಳಲ್ಲಿ ' ನಾನು ಇಂತಹವಳು, ” “ ನಾನು ಅಂತಹವಳು ' ಎಂದು ಬಂದಿರುವುದರಿಂದ, ಇವು ವಾಗ್ಗೇವಿಯ ಗರ್ವವನ್ನು ಸೂಚಿಸುವ ವಾಕ್ಯಗಳೆಂದು ಪಾಠಕರು ಊಹಿಸಬಹುದು. ಆದರೆ ಈ ಊಹೆಯು ಸರಿಯಾದುದಲ್ಲ. ಅದೈತಸಂಪ್ರದಾಯವನ್ನು ತಿಳಿದವರಿಗೆ ಇದು ಆಶ್ಚರ್ಯವನ್ನುಂಟುಮಾಡ ಲಾರದು. ಮೂಲತತ್ವವನ್ನು ಕುರಿತಾಗಲಿ, ಬ್ರಹ್ಮವಿಷಯವನ್ನು ಕುರಿತಾಗಲಿ ಹೇಳುವಾಗ ಅದ್ಯೆತರು ಪ್ರಥಮ ಪುರುಷನನ್ನು ಉಪಯೋಗಿಸದೆ ಉತ್ತಮ ಪುರುಷವನ್ನು ಉಪಯೋಗಿಸುತ್ತಾರೆ. ಜೀವಬ್ರಹ್ಮರಿಗೆ ಬೇಧವಿಲ್ಲ ಎಂಬುದು ಅವರ ಸಿದ್ಧಾಂತವಾದುದರಿಂದ ಅವರು ಹಾಗೆ ಮಾತನಾಡುತ್ತಾರೆ. ಆದುದರಿಂದ ಅದೈತಸಿದ್ಧಾಂತದಲ್ಲಿ ಇಷ್ಟವಿಲ್ಲದವರು ಇದಕ್ಕೆ ವಿಪರೀತಾರ್ಥಗಳನ್ನು ಮಾಡದೆ, ಸಂಪ್ರದಾಯಾನುಸಾರವಾಗಿಯೇ ಅರ್ಥವನ್ನು ಮಾಡಬೇಕು. ಗಾರಿ. 4ಅ ಈಕೆಯು ತನ್ನ ಕಾಲದಲ್ಲಿ ವಿಶೇಷ ವಿದ್ಯಾ ವತಿಯು ಎಂತಲೂ, ಬ್ರಹ್ಮ ನಾದಿನಿಯು ಎಂತಲೂ ಪ್ರಸಿದ್ಧಿಯನ್ನು ಪಡೆದಳು. ಈಕೆಯು ವಚಕ್ಕುಮಹಾ ಮುನಿಯ ಪುತ್ರಿಯು. ವೈದಿಕಕಾಲದಲ್ಲಿ ತತ್ವ ವಿಷಯಗಳನ್ನು ಕುರಿತು ನಾನಾವಿಧವಾದ ತರ್ಕ ಗಳು ಮಗಧದೇಶದಲ್ಲಿ ವಿಶೇಷವಾಗಿ ನಡೆಯುತ್ತಿತ್ತು. ಮಗಧದೇಶಾಂತರ್ಗತ ವಾದ ವಿದೇಹದೇಶವನ್ನು ಜನಕರಾಜನು ಪರಿಪಾಲಿಸುತ್ತಿದ್ದನು. ಈ ರಾಜ್ಯಕ್ಕೆ ಮಿಥಿಲಾನಗರವು ರಾಜಧಾನಿಯಾಗಿತ್ತು. ವಿದೇಹದೇಶದ ರಾಜರಿಗೆಲ್ಲ ಜನಕರು ಎಂದು ಹೆಸರು. ಈ ಜನಕರೆಲ್ಲ ರೂ ಧರ್ಮಾತ್ಮರೂ, ವಿದ್ವಾಂಸರೂ, ಬ್ರಹ್ಮ ಜ್ಞಾನಿಗಳೂ ಆಗಿ ಇದ್ದರು. ಇವರು ವಿದ್ವಾಂಸರನ್ನು ಅತ್ಯಂತ ಗೌರವವಾಗಿ ಕಾಣುತ್ತಿದ್ದರು,