ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾರಿ. ೩೭ ವಲ್ಯನೊಡನೆ ವಾದಿಸಿ ನಿರುತ್ತರರಾದರು. ಆಮೇಲೆ ನಮ್ಮ ಚರಿತ್ರನಾಯಕಿ ಯಾದ ಗಾರ್ಗಿಯು ಆತನೊಡನೆ ವಾದಮಾಡಲು ಉಪಕ್ರಮಿಸಿದಳು. _ಗಾರಿ:-ಓ ಯಾಜ್ಞವಲ್ಕನೇ! ಈ ಪೃಥಿವಿಗೆ ಸಂಬಂಧಪಟ್ಟ ಧಾ ತುಜಾತ ವೆಲ್ಲವು ವಸ್ತ್ರದ ಹೊಕ್ಕುಹಾಸುಗಳ ದಾರಗಳಂತೆ ಬಾಹ್ಯಾಂತರ್ಭೂತಗಳಾದ ಉದಕಗಳಿಂದ ಸಕಲ ಸ್ಥಳಗಳಲ್ಲಿಯೂ ವ್ಯಾಪಿಸಿ ಇವೆ. ಆಪ್ರಕಾರವಾಗಿ (ವಸ್ತ್ರದ ಹೊಕ್ಕುಹಾಸುಗಳಂತೆ) ಉದಕಗಳು ಯಾವುದರಲ್ಲಿ ಇವೆ ? ಯಾಜ್ಞವಲ್ಕ:-ಓ ಗಾರೀ ! ಅವು ವಾಸ್ತುವಿನಲ್ಲಿ ಇವೆ. ಗಾರಿ:- ವಾಯುವು ಯಾವುದರಲ್ಲಿ ಇದೆ ? ಯಾಜ್ಞ:-ಓ ಗಾಗೀ ! ಗಂಧರ್ವಲೋಕಗಳಲ್ಲಿ ಇದೆ. “ಗಾರಿ :-ಗಂಧರ್ವಲೋಕಗಳು ಯಾವುದರಲ್ಲಿ ಇವೆ ? ಯಾಜ್ಞ:-ಆದಿತ್ಯಲೋಕಗಳಲ್ಲಿ ಇವೆ. ಗಾರಿ :-ಆದಿತ್ಯಲೋಕಗಳು ಯಾವುದರಲ್ಲಿ ಇವೆ ? ಯಾಜ್ಞ:-ಓ ಗಾರೀ ! ಚಂದ್ರಲೋಕಗಳಲ್ಲಿ ಇವೆ. ಗಾರಿ :- ಚಂದ್ರಲೋಕಗಳು ಯಾವುದರಲ್ಲಿ ಇವೆ? ಯಾಜ್ಞ:-ಚಂದ್ರಲೋಕಗಳು ನಕ್ಷತ್ರಲೋಕಗಳಲ್ಲಿ ಇವೆ. ಗಾರಿ : - ನಕ್ಷತ್ರಲೋಕಗಳು ಯಾವುದರಲ್ಲಿ ಇವೆ ? ಯಾಜ್ಞ:-ಓ ಗಾರೀ ! ದೇವಲೋಕಗಳಲ್ಲಿ ಇವೆ. ಗಾರಿ :-ದೇವಲೋಕಗಳು ಯಾವುದರಲ್ಲಿ ಇವೆ? ಯಾಜ್ಞ:-ಇಂದ್ರಲೋಕಗಳಲ್ಲಿ ಇವೆ. ಗಾರಿ :-ಇಂದ್ರಲೋಕಗಳು ಯಾವುದರಲ್ಲಿ ಇವೆ ? ಯಾಜ್ಞ:-ಓ ಗಾರೀ ! ಪ್ರಜಾಪತಿಲೋಕಗಳಲ್ಲಿ ಇವೆ. ಗಾರಿ :- ಪ್ರಜಾಪತಿಲೋಕಗಳು ಯಾವುದರಲ್ಲಿ ಇವೆ? ಯಾಜ್ಞ: ~ ಓ ಗಾರೀ ! ಬ್ರಹ್ಮಲೋಕಗಳಲ್ಲಿ ಇವೆ. ಗಾರಿ :-ಬ್ರಹ್ಮಲೋಕಗಳು ಯಾವುದರಲ್ಲಿ ಇವೆ ? ಯಾಜ್ಞ:-ಓ ಗಾರೀ ! ನ್ಯಾಯವನ್ನು ಅತಿಕ್ರಮಿಸಿ ಪ್ರಶ್ನೆಯನ್ನು ಮಾಡ ಬೇಡ. ಹಾಗೆ ಪ್ರಶ್ನೆ ಮಾಡಿದರೆ ನಿನ್ನ ಶಿರಸ್ಸು ಒಡೆಯುವುದು, ನ್ಯಾಯವನ್ನು ಅತಿಕ್ರಮಿಸಿ ಪ್ರಸಿದ್ದವಾಗಿ ಪ್ರಶ್ನೆ ಮಾಡಬಾರದ ದೇವತೆಯನ್ನು ಕುರಿತು ನೀನು ನ್ಯಾಯವನ್ನು ಅತಿಕ್ರಮಿಸಿ ಪ್ರಶ್ನೆ ಮಾಡುವೆ, ನೀನು ಹಾಗೆ ಕೇಳಬೇಡ.