ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಡ. ಈಕೆಯು ವೇದಕಾಲದಲ್ಲಿ ನಹುಷರಾಜನಿಗೆ ಧರ್ಮೋಪದೇಶಕಳಾಗಿ ಇದ್ದಳು, ಈ ವಿದುಷಿಯು ಧರ್ಮಜ್ಞಮನುವಿನ ಪುತ್ರಿಯು. ರಾಜನಿಗೆ ಧರ್ಮ ವನ್ನು ಉಪದೇಶಿಸುತ್ತಿದ್ದುದರಿಂದ ಈಕೆಯು ಆಕಾಲದಲ್ಲಿ ಎಲ್ಲರಿಗಿಂತಲು ವಿಶೇಷ ಪಾಂಡಿತ್ಯವನ್ನುಳ್ಳವಳಾಗಿ ಇದ್ದಳು - ಎಂದು ನಾವು ತಿಳಿದುಕೊಳ್ಳಬಹುದು. ಋಗೈದದ ಪ್ರಥಮಾಷ್ಟಕದಲ್ಲಿ ದ್ವಿತೀಯಾಧ್ಯಾಯದ ಮುವ್ವತ್ತು ನಾಲ್ಕನೆಯ ವರ್ಗಾದಿಯಲ್ಲಿ ಈಕೆಯನ್ನು ಕುರಿತು, “ಓ ಅಗ್ನಿಹೋತ್ರನೇ ! ಪ್ರಥಮದಲ್ಲಿ ದೇವತೆಗಳು ನಹುಷರಾಜನಿಗೆ ನಿನ್ನನ್ನು ಸೇನಾನಾಯಕನನ್ನಾಗಿಯೂ, ಮನುವಿನ ಪುತ್ರಿಯಾದ ಇಡೆಯನ್ನು ಧರ್ಮೋಪದೇಶಕಳನ್ನಾಗಿಯೂ ನಿಯಮಿಸಿದರು. ಆಗ ಅಂಗಿರಸ ವಂಶದಲ್ಲಿ ಮಗನು ಹುಟ್ಟಿದ ಸಮಯದಲ್ಲೆಲ್ಲ ನೀನು ಅಂಗಿರಸರಿಗೆ ತಂದೆಯಾದುದರಿಂದ ನೀನೇ ಪುತ್ರನಾಗಿ ಜನ್ನಿಸಿದೆ' ಎಂದು ಬರೆದಿದೆ. ಈ ವಾಕ್ಯಗಳಿಂದ ವೇದಕಾಲದಲ್ಲಿ ಪುರುಷರಂತೆಯೇ ಸ್ತ್ರೀಯರು ಸಹ ಧರ್ಮೋಪದೇಶವನ್ನು ಮಾಡುವ ಅಧಿಕಾರ ವನ್ನು ಪಡೆದಿದ್ದರೆಂದು ತಿಳಿಯಬರುತ್ತದೆ. ಈಗಿನ ನಮ್ಮ ಸ್ಥಿತಿಯು ಇರುವ ವಿಧವನ್ನೂ ಆಕಾಲದ ಮಹಿಳೆಯರು ಇದ್ದ ಸ್ಥಿತಿಯನ್ನೂ ಆಲೋಚಿಸಿ ನೋಡಿದರೆ ಆಕಾಲದಲ್ಲಿ ಭಾರತ ರಮಣಿಯರು ಇಷ್ಟು ಔನ್ನತ್ಯ ದೆಶೆಯಲ್ಲಿ ಇದ್ದರೇ ? ಎಂದು ನಮಗೆ ಅತ್ಯಂತಾಶ್ಚರವು ಉಂಟಾಗುವುದು. ವಿಶ್ಚಲ. ಈ ವೀರಾಗ್ರಗಣ್ಯಳು ಭೇಲನ ಧರ್ಮಪತ್ನಿಯು, ಈಕೆಯ ಜೀವಿತ ವನ್ನು ಕುರಿತು ವೇದದಲ್ಲಿ ಹೆಚ್ಚಾಗಿ ಬರೆದಿಲ್ಲ. ಈಕೆಯು ಯುದ್ಧ ಮಾಡು ತಿರಲು ಶತ್ರುಗಳು ಈಕೆಯ ಕಾಲನ್ನು ಖಂಡಿಸಿದರೆಂದು ವೇದದಿಂದ ತಿಳಿಯ ಬರುತ್ತದೆ. ಖನ್ವೇದದ ಪ್ರಥಮಾಷ್ಟಕದಲ್ಲಿ ೧೩ ನೆಯ ಋಕ್ಕಿನಲ್ಲಿ ಈ ವಿಷಯವನ್ನು ಕುರಿತು,