ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನ ಮಾಲೆ. ನವಾಬನನ್ನಾಗಿ ಮಾಡುವುದಕ್ಕೆ ಒಪ್ಪಿ, “ ನೀವೆಲ್ಲರೂ ಸಮ್ಮತಿಸಿದ ಮಾತಿಗೆ ವಿರುದ್ಧ ವಾಗಿ ನಡೆದುಕೊಳ್ಳುವುದು ನನಗೆ ಅನುಚಿತವಾದ್ದರಿಂದ ನಿಮ್ಮ ಅಭಿಪ್ರಾಯಕ್ಕೆ ನಾನು ಒಪ್ಪಿಕೊಂಡೆನು. ಈ ಮಾರ್ಪಾಟಿನಿಂದ ತರುಷರಿಗಿರುವ ಸರ್ವಾಧಿಕಾರ ವನ್ನು ಇಂಗ್ಲೀಷರಿಗೆ ಕೊಡುತಲಿದ್ದೇವೆ. ತುರುಕನನ್ನು ರಾಜ್ಯದಿಂದ ತೆಗೆದು ಹಿಂದೂದೇಶದಲ್ಲಿ ಹಿಂದೂರಾಜನನ್ನು ಸ್ಥಾಪಿಸುವಷ್ಟು ಶಕ್ತಿಯೂ, ದೇಶಾ ಭಿಮಾನವೂ ಐಕಮತ್ಯವೂ ನಮ್ಮಲ್ಲಿಲ್ಲದಿರುವಾಗ, ನಮ್ಮ ದೇಶಸ್ಥರಾದ ಮರಾಟೆ ಯವರನ್ನು ನಾವು ನಂಬಲಾರದಿರುವಾಗ, ನಮ್ಮ ರಾಷ್ಟ್ರವನ್ನು ಹೂಣರಿಗೆ ಒಪ್ಪಿಸು ವುದೇ ಶ್ರೇಷ್ಠವಾಗಿದೆ. ಇವರೇ ನಮ್ಮ ಮಂಗಳಾ ಕಾಂಕ್ಷಿಗಳಾಗಲಿ, ” ಎಂದಳು. ಹೀಗೆ ಅವರು ನಿಶ್ಚಯಿಸಿ ತಮತಮ್ಮ ರಾಜ್ಯಗಳಿಗೆ ಹೊರಟುಹೋದರು. ಅನಂತರ. ೧೭೫೭ ನೆಯ ಇಸವಿಯಲ್ಲಿ ನಡೆದ ಪ್ಲಾಸೀ ಕದನದಲ್ಲಿ ಕಂಪೆನಿಯವರೂ, ಮಾರ್ಜಾ ಫರನೂ ಸುರಾಜದೌಲನನ್ನು ಸೋಲಿಸಿದರು. ಈ ಕಾಲವು ಹಿಂದೂದೇಶದ ಚರಿತ್ರೆಯಲ್ಲಿ ಮುಖ್ಯವಾದುವುಗಳಲ್ಲೊಂದಾ ಗಿದೆ. ಯವನರ ರಾಜಕ್ಷಯಕ್ಕೂ, ಆಂಗ್ಲ ಪ್ರಭುಗಳ ಅಭ್ಯುದಯಕ್ಕೂ ಇದು ಸಂಧಿಕಾಲವೆಂದು ಹೇಳಬಹುದು. ಪ್ರಭುತ್ವಗಳು ಹೀಗೆ ಬದಲಾಯಿಸುವ ಕಾಲ ದಲ್ಲಿ ರಾಣೀಭವಾನಿಯ ಹೊರತು ಮಿಕ್ಕವರಾರೂ ಹಿಂದೂರಾಜ್ಯ ಸ್ಥಾಪನೆಗೆ ಸುಸಮಯವೆಂದು ಗ್ರಹಿಸಿಕೊಳ್ಳ ಲಿಲ್ಲವೆಂಬುದನ್ನು ಪಾಠಕರು ಗ್ರಹಿಸಿರಬಹುದು. ರಾಣಿಯ ಸಂಭಾಷಣೆಯಿಂದ ಆಕೆಗಿರುವ ಸ್ವದೇಶಾಭಿಮಾನವು ಉಪಮಾನರಹಿತ ವಾದುದೆಂದು ತಿಳಿಯಬರುತ್ತದೆ. ರಾಣಿಯು ತಿಳಿಸಿದ ರಾಜಕೀಯ ಭವಿಷ್ಯತ್ತು ಗಳೆಲ್ಲವೂ ತಪ್ಪದೆ ನಿಜವಾದುದನ್ನು ನೋಡಿ, ಆಕೆಯ ರಾಜನೀತಿನಿಪುಣತ್ವಕ್ಕೂ, ವ್ಯವಹಾರಗಳಲ್ಲಿರುವ ದೀರ್ಘದೃಷ್ಟಿಗೂ, ಮಾನವಸ್ವಭಾವದ ಯಥಾರ್ಥಜ್ಞಾನಕ್ಕೂ ನಾವು ಬಹಳ ಸಂತೋಷಿಸಬೇಕು, ರಾಜಕಾರ್ಯಗಳ ನಿಜಸ್ವರೂಪವನ್ನರಿತ ಈ ಲಲನಾರತ್ನವು ನಮ್ಮ ದೇಶದಲ್ಲಿ ಕಾರ್ಯಧುರೀಣರೆಂತಲೂ, ದೀರ್ಘದೃಷ್ಟಿಯುಳ್ಳವ ರೆಂತಲೂ, ಕೀರ್ತಿಯನ್ನು ಪಡೆದಿರುವ ತೋಡರಮಲ್ಲ, ನಾನಾಪರ್ನವೀಸ, ಅಕ್ಕನ್ನ, ಮಾದನ್ನ ಮೊದಲಾದವರಿಗೂ, ಐರೋಪಾ ಖಂಡದಲ್ಲಿ ವ್ಯವಹಾರದ ರೆಂದು ಖ್ಯಾತಿಯನ್ನು ಹೊಂದಿದ ಪಿಟ್, ಫಾಕ್ಸ್, ಬರ್, ಬಿಸ್ಮಾರ್‌, ಗ್ಲಾಡ್ ಸ್ವನ್ ಮುಂತಾದ ಪುರುಷ ಪುಂಗವರಿಗೂ ಬುದ್ದಿಯಲ್ಲಿ ಸಮಾನಳೆಂದು ಸಂದೇಹ ವಿಲ್ಲದೆ ನುಡಿಯಬಹುದು. ಪತಿಯು ಜೀವಿಸಿರುವ ಕಾಲದಲ್ಲಿ ಭವಾನಿಯು ದೇವಾಲಯಗಳನ್ನು ಕಟ್ಟಿ ಸುವುದು, ಕೆರೆಗಳನ್ನೂ ಭಾವಿಗಳನ್ನೂ ತೋಡಿಸುವುದು, ಅನ್ನ ಸತ್ರಗಳನ್ನು ಸ್ಥಾಪಿಸುವುದು, ಬಡವರಿಗೂ ಬ್ರಾಹ್ಮಣರಿಗೂ, ಇತರರಿಗೂ ವಿವಾಹಾದಿಗಳನ್ನು ಮಾಡಿಸುವುದು, ಇವೇ ಮೊದಲಾದ ಧರ್ಮಕಾರ್ಯಗಳನ್ನು ಮಾಡುತಲಿದ್ದಳು.