೪೦೦ ಅಬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಕೂಡಲೆ ಮದಾಲಸೆಯು ಮೂರ್ಛಿತೆಯಾಗಿ ಹಾಗೆಯೇ ಪ್ರಾಣವನ್ನು ಬಿಟ್ಟಳು. ಇದಲ್ಲವೇ ನಿಜವಾದ ಸಹಗಮನವು ? ಮದಾಲಸೆಯ ಮರಣವೃತ್ತಾಂತವನ್ನು ಕೇಳಿ, ತಾಳಕೇತುವು ಅಲ್ಲಿಂದ ಹೊರಟು ಯಮುನಾನದೀತೀರದಲ್ಲಿರುವ ತನ್ನ ಆಶ್ರಮಕ್ಕೆ ಬಂದು ಋತುಧ್ವಜ ನೊಡನೆ “ ಯುವರಾಜನೇ! ನಿನ್ನ ಅನುಗ್ರಹದಿಂದ ಯಜ್ಞವು ಪೂರ್ತಿಯಾಯಿತು. ಇನ್ನು ನೀನು ಹೊರಡಬಹುದು. ನೀನು ನನ್ನ ಮನೋರಥವನ್ನು ಸಫಲ ಗೊಳಿಸಿದೆಯಾದಕಾರಣ ನಿನಗೆ ಮಂಗಳವುಂಟಾಗಲಿ” ಎಂದು ಹೇಳಿದನು. ಅಲ್ಲಿಂದ ಋತುಧ್ವಜನು ರಾಜಧಾನಿಗೆಬಂದು ನಡೆದ ವಿಷಯವನ್ನು ಕೇಳಿ ಅತ್ಯಂತ ಚಿಂತಾಕ್ರಾಂತನಾಗಿ “ ಮದಾಲಸೆಯು ಇಹಲೋಕವನ್ನು ಬಿಟ್ಟಳು. ನನ್ನ ಮರಣ ವೃತ್ತಾಂತವನ್ನು ಕೇಳಿದ ಕೂಡಲೆ ಆಕೆಯು ದೇಹವನ್ನು ಪರಿತ್ಯಜಿ ಸಿದಳು. ಆಕೆಯು ಮೃತಳಾದರೂ ನಾನು ಜೀವಿಸಿ ಇದೇನೆಯಲ್ಲವೇ ?” ಎಂದು ಅಹತ್ನಿಶವೂ ರೋದಿಸುತ್ತಿದ್ದನು. ಹೀಗಿರಲು, ಋತುಧ್ವಜನ ಸ್ನೇಹಿತರಾದ ನಾಗರಾಜಪುತ್ರರು, ತಮ್ಮ ಮಿತ್ರನ ದುಃಖವನ್ನು ನೋಡಿ ತಾವೂ ವಿಶೇಷ ಪರಿತಪ್ತ ಹೃದಯರಾಗಿ, ತಮ್ಮ ತಂದೆಯಾದ ನಾಗರಾಜನಬಳಿಗೆ ಹೋಗಿ “ ಎಲೆ ತಂದೆಯೇ ! ನಮ್ಮ ಮಿತ್ರನ ಪುತ್ರಿಯಾದ ಮದಾಲಸೆಯನ್ನು ಬದುಕಿಸಿ, ಆತನ ಶೋಕವನ್ನು ಪರಿಹಾರ ಮಾಡು” ಎಂದು ಆತನನ್ನು ಪ್ರಾರ್ಥಿಸಿದರು. ಪುತ್ರರ ಅಭೀಷ್ಟವನ್ನು ಪೂರ್ತಿಮಾಡುವುದಕ್ಕಾಗಿ, ನಾಗರಾಜನು ಹಿಮಾ ಲಯಪರ್ವತಕ್ಕೆ ಹೋಗಿ, ಬ್ರಹ್ಮನನ್ನು ಕುರಿತು ಘೋರವಾದ ತಪಸ್ಸನ್ನು ಮಾಡಿ ದನು. ಆತನ ತಪಸ್ಸಿಗೆ ಮೆಚ್ಚಿ ಬ್ರಹ್ಮನು ಪ್ರತ್ಯಕ್ಷನಾಗಿ “ ನಾಗರಾಜಾ ! ಮರಣ ಸಮಯದಲ್ಲಿ ಮದಾಲಸೆಯು ಯಾವ ವಯಸ್ಸಿನಲ್ಲಿ ಇದ್ದಳೋ, ಅದೇ ವಯಸ್ಸುಳ್ಳವಳಾಗಿ ನಿನ್ನ ಮನೆಯಲ್ಲಿ ಹುಟ್ಟುವಳು, ” ಎಂದು ವರವನ್ನು ಕೊಟ್ಟು ಅಂತರ್ಧಾನನಾದನು. ಬ್ರಹ್ಮವರಪ್ರಸಾದದಿಂದ ಮದಾಲಸೆಯು ನಾಗರಾಜ ಗೃಹದಲ್ಲಿ ಯುವತಿ ಯಾಗಿ ಜನ್ನಿಸಿದಳು. ಮಾರನೆಯ ದಿವಸವೇ ನಾಗರಾಜನು ಋತುಧ್ವಜನನ್ನು ಆಹ್ವಾನಮಾಡಿ, ಮದಾಲಸೆಯನ್ನು ಆತನಿಗೆ ಸಮರ್ಪಿಸಿದನು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೩೩
ಗೋಚರ